ಕರ್ನಾಟಕ

ಬೆಳಗಾವಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ; ಮುಗಿಲು ಮುಟ್ಟಿದ ರೈತರ ಆಕ್ರೋಶ, ಪ್ರತಿಭಟನಾ ನಿರತರ ರೈತರನ್ನು ಬಂಧಿಸಿದ ಪೊಲೀಸರು

Pinterest LinkedIn Tumblr

modi

ಬೆಳಗಾವಿ: ಬಹು ಉದ್ದೇಶಿತ ನೂತನ ಬೆಳೆವಿಮಾ ಯೋಜನೆ ‘ವಿಮಾ ಫಸಲ್’ ಕುರಿತಂತೆ ಬೆಳಗಾವಿಯಲ್ಲಿ ಆಯೋಜಿಸಲಾಗಿರುವ ರೈತ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬೆಳಗಾವಿಗೆ ಆಗಮಿಸಿದರು.

ಶನಿವಾರ ಮಧ್ಯಾಹ್ನ ಸುಮಾರು 4.30ರ ಹೊತ್ತಿಗೆ ಬೆಳಗಾವಿಗೆ ಆಗಮಿಸಿದ ನರೇಂದ್ರ ಮೋದಿ ಅವರನ್ನು ತೀವ್ರ ಭದ್ರತೆಯ ನಡುವೆ ವೇದಿಕೆಗೆ ಕರೆತರಲಾಯಿತು. ಈ ವೇಳೆ ಹಲವು ರೈತ ಸಂಘಟನೆಗಳು ಪ್ರಧಾನಿ ಅವರಿಗೆ ಪ್ರತಿಭಟನೆಯ ಮೂಲಕ ಸ್ವಾಗತ ಕೋರಿದವು. ‘ಕಳಸಾ ಬಂಡೂರಿ’ ಹೋರಾಟಕ್ಕೆ ಪ್ರಧಾನಿಯವರಿಂದ ನ್ಯಾಯ ಸಿಗಬೇಕು, ಕಳಸಾ – ಮಹದಾಯಿ ವಿಷಯದಲ್ಲಿ ಪ್ರಧಾನಿ ಮೋದಿ ತಮ್ಮ ನಿಲುವು ಪ್ರಕಟಿಸಬೇಕು ಎಂದು ಆಗ್ರಹಿಸಿದ ನೂರಾರು ರೈತರು ತೀವ್ರ ಪ್ರತಿಭಟನೆ ನಡೆಸಿದ್ದಾರೆ.

ಇದೇ ವೇಳೆ ಪ್ರಧಾನಿ ಮೋದಿ ಪ್ರಧಾನ ವೇದಿಕೆಯತ್ತ ಆಗಮಿಸುತ್ತಿದ್ದಂತೆಯೇ ಬರುತ್ತಿದ್ದಂತೆಯೇ ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿದ ರೈತರು ಹಸಿರು ಶಾಲು ಮತ್ತು ಕಪ್ಪುಧ್ವಜ ಹಿಡಿದುಕೊಂಡು ವೇದಿಕೆಯತ್ತ ನುಗ್ಗಲು ಯತ್ನಿಸಿದರು. ಅವರನ್ನು ತಡೆದ ಪೊಲೀಸರು ಒಬ್ಬೊಬ್ಬರನ್ನಾಗಿ ವಶಕ್ಕೆ ತೆಗೆದುಕೊಂಡು ಎಪಿಎಂಸಿ ಮಾರುಕಟ್ಟೆಯತ್ತ ಸಾಗಿಸಿದರು. ಇದೇ ವೇಳೆಗೆ ಕಳಸಾಬಂಡೂರಿ ನ್ಯಾಯಕ್ಕಾಗಿ ನೂರಾರು ರೈತರು ಧಾರವಾಡದಲ್ಲೂ ಪ್ರತಿಭಟನೆ ನಡೆಸುತ್ತಿದ್ದು ಟೈರುಗಳಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿದ್ದಾರೆ.

Write A Comment