ಕರ್ನಾಟಕ

3000 ಪುಟಗಳಲ್ಲಿ ಬೆಂಗಳೂರಿನ ನಿನ್ನೆ ನಾಳೆ ಮತ್ತು ಇಂದು

Pinterest LinkedIn Tumblr

11_3ನೀವು ಬೆಂಗಳೂರನ್ನು ಯಾಕೆ ಪ್ರೀತಿಸುತ್ತೀರಿ?
ಹಾಗಂತ ಬೆಂಗಳೂರಿನಲ್ಲಿ ಇರುವವರನ್ನು ಕೇಳಿ ನೋಡಿ. ಅವರು ಹತ್ತು ಕಾರಣಗಳನ್ನು ಕೊಡುತ್ತಾರೆ. ಬೆಂಗಳೂರನ್ನು ಬಲ್ಲವರೂ ಬೆಂಗಳೂರಿಗೆ ಹೊಸಬರೂ ಬೆಂಗಳೂರನ್ನು ಸಮಾನಾಗಿಯೇ ಇಷ್ಟಪಡುತ್ತಾರೆ. ಬೆಂಗಳೂರಿನ ಟ್ರಾಫಿಕ್ಕೇ ಕಿರಿಕಿರಿ. ಬೆಂಗಳೂರಿನ ಜನಸಂದಣಿಯೇ ರೇಜಿಗೆ ಅಂತ ಹೇಳುವವರು ಕೂಡ, ಅದರಾಚೆಗೂ ಬೆಂಗಳೂರಲ್ಲಿ ಏನಿದೆ ಅನ್ನುವುದನ್ನು ಬಲ್ಲರು.

ಹಾಗಿದ್ದರೂ ಬೆಂಗಳೂರನ್ನು ಅರ್ಥಮಾಡಿಕೊಳ್ಳುವುದಕ್ಕೆ ನಮಗೆ ಸಾಕಷ್ಟು ಪರಿಕರಗಳ ನೆರವು ಸಿಗುವುದಿಲ್ಲ. ಬ.ನ. ಸುಂದರರಾಯರು ಬರೆದ ಬೆಂಗಳೂರಿನ ಇತಿಹಾಸ ಎಂಬ ಪುಸ್ತಕ ಹಳೆಯದಾಗಿದೆ. ಬೆಂಗಳೂರಲ್ಲಿ ಏನೆಲ್ಲ ಇದೆ ಅಂತ ಗೊತ್ತಿದ್ದರೂ ಎಲ್ಲಿದೆ ಎಂದು ತಿಳಿಯುವುದಿಲ್ಲ. ಗೂಗಲ್ಲು ರಾಶಿ ರಾಶಿ ಮಾಹಿತಿಗಳನ್ನು ತಂದು ಹಾಕತ್ತದೆ. ಅದರಲ್ಲಿ ಕಸ ಯಾವುದು, ರಸ ಯಾವುದು ಎಂದು ತಿಳಿಯುವುದು ಕೂಡ ಸಾಧ್ಯವಿಲ್ಲ. ಇಂಥ ಹೊತ್ತಲ್ಲಿ ಅದ್ಬುತವಾದ ಪುಸ್ತಕವೊಂದು ಎದುರಿಗಿದ್ದರೆ? ಅದರ ಮೂಲಕ ಬೆಂಗಳೂರನ್ನು ಅರಿಯುವುದಕ್ಕೆ ಸಾಧ್ಯವಾದರೆ?

ಅಂಥ ಸಾಧ್ಯತೆಯನ್ನು ಇದೀಗ ಉದಯಭಾನು ಕಲಾಸಂಘ ಸಾಧ್ಯವಾಗಿಸಿದೆ. ಮೂರು ಸಂಪುಟಗಳಲ್ಲಿ ಬೆಂಗಳೂರಿನ ವೈಭವವನ್ನು ನಿಮ್ಮ ಮುಂದೆ ತಂದಿಟ್ಟಿದೆ.  ಭೂಗೋಳ ಮತ್ತು ಭೂವಿಜ್ಞಾನ, ಬೆಂಗಳೂರಿನ ಇತಿಹಾಸ, ಕಂಟೋನ್‌ಮೆಂಟಿನ ಹುಟ್ಟು, ಆರ್ಥಿಕ ಅಭಿವೃದ್ಧಿ, ಬದಲಾಗುತ್ತಿರುವ ಬೆಂಗಳೂರು, ಮಹಾನಗರ ಪಾಲಿಕೆ, ಸಾರ್ವಜನಿಕ ಸೇವಾ ವ್ಯವಸ್ಥೆಗಳಿಂದ ಹಿಡಿದು ಭಾಷಾ ಸಮಸ್ಯೆ, ಸಾಮಾಜಿಕ ಸಮಸ್ಯೆ. ಪತ್ರಿಕೋದ್ಯಮದ ಸಮಸ್ಯೆಗಳು. ಶಿಕ್ಷಣ, ಸಮಾಜಸೇವೆ, ವಸ್ತು ಸಂಗ್ರಹಾಲಯ, ಆಟೋಟ ಕ್ರೀಡೆ, ಸಮೂಹ ಮಾಧ್ಯಮ, ಪೂಜೆ ಮತ್ತು ಪ್ರಾರ್ಥನಾ ಮಂದಿರ, ಸಾಹಿತ್ಯ, ಸಂಸ್ಕೃತಿ, ಪುಸ್ತಕ ಭಂಡಾರ, ಪರಿವರ್ತನೆಯ ದಿಕ್ಕು ಎಲ್ಲವನ್ನೂ ಈ ಪುಸ್ತಕ ಕಣ್ಮುಂದೆ ತರುತ್ತದೆ.

ಬೆಂಗಳೂರಿನ ಬಗ್ಗೆ ತಿಳಿದುಕೊಳ್ಳಲು ಇದಕ್ಕಿಂದ ಒಳ್ಳೆಯ ಆಕರ ಗ್ರಂಥ ಎಲ್ಲೂ ಸಿಗಲಿಕ್ಕಿಲ್ಲ. ಈ ಪುಸ್ತಕ ಬೆಂಗಳೂರನ್ನು ಆಯಾ ಕ್ಷೇತ್ರಗಳ ಪರಿಣತರ ಮೂಲಕವೇ ಪರಿಚಯ ಮಾಡಿಸುತ್ತದೆ. ರಂಗಭೂಮಿಯ ಬಗ್ಗೆ ಬಿ. ಜಯಶ್ರೀ ಬರೆಯುತ್ತಾರೆ. ಬಿ. ಸುರೇಶ ಬರೆಯುತ್ತಾರೆ. ಪ್ರಕಾಶ್‌ ಬೆಳವಾಡಿ ಬರೆಯುತ್ತಾರೆ. ಪುಸ್ತಕ ಪ್ರಕಾಶನದ ಕುರಿತು ಅಂಕಿತ ಪ್ರಕಾಶನದ ಪ್ರಕಾಶ್‌ ಕಂಬತ್ತಳ್ಳಿ ಬರೆಯುತ್ತಾರೆ. ಮತೀಯ ಕೇಂದ್ರಗಳ ಕುರಿತು ಸುರೇಶ್‌ ಮೂನ,  ಒಳಾಂಗಣ ವಿನ್ಯಾಸದ ಕುರಿತು ನಾಗರಾಜ ವಸ್ತಾರೆ, ಬೆಂಗಳೂರಿನ ನೆನಪುಗಳ ಕುರಿತು ಜಿ. ವೆಂಕಟಸ್ವಾಮಿ, ವಿ. ಸೀತಾರಾಮಯ್ಯ ಮುಂತಾದವರು ಬರೆದ ಲೇಖನಗಳು.

ಹೀಗೆ ಇದೊಂದು ಜ್ಞಾಪಕ ಚಿತ್ರಶಾಲೆಯೂ ಹೌದು. ಚಲಿಸುವ ಮಾಹಿತಿಕೋಶವೂ ಹೌದು.

– 3084 ಕಪ್ಪು ಬಿಳುಪು ಚಿತ್ರ
-5032 ವರ್ಣಚಿತ್ರ
– 1852 ರೇಖಾ ಚಿತ್ರ
– 65 ನಕ್ಷೆ
– 17 ಬೆಂಗಳೂರಿನ ನಕ್ಷೆ

ಸಂಪಾದಕ ಮಂಡಳಿ
ಡಾ. ವಿಜಯಾ
ಎಂಎಚ್‌ ಕೃಷ್ಣಯ್ಯ

ಪ್ರಥಮ ಮುದ್ರಣ- 2005
ಪರಿಷ್ಕೃತ ಮುದ್ರಣ- 2016

ಪುಟಗಳು – 3084
ಬೆಲೆ –  3750 (ಮೂರು ಸಂಪುಟಗಳಿಗೆ)
ಗಾತ್ರ –  ಇದರ ಸಿ.ಡಿ. ಕೂಡ ಲಭ್ಯ

-ಉದಯವಾಣಿ

Write A Comment