ಬೆಂಗಳೂರು: ನಗರದ ಶಿವಾಜಿನಗರದಲ್ಲಿರುವ ಶ್ರೀಶಿರಡಿ ಸಾಯಿ ಬಾಬಾ ಮಂದಿರದಲ್ಲಿ ಶ್ರೀಸಾಯಿಬಾಬಾ ಅವರ 50ನೇ ವಾರ್ಷಿಕೋತ್ಸವದ ಅಂಗವಾಗಿ ಇಂದು ನಾನಾ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಇಂದು ಬೆಳಿಗ್ಗೆ 8ಕ್ಕೆ ಬಾಬಾರಿಗೆ ಅಭಿಷೇಕ, ಅಲಂಕಾರ, ಪ್ರಸಾದ ವಿನಿಯೋಗ, 10.30ಕ್ಕೆ ರಕ್ತದಾನ ಶಿಬಿರ, ಆರತಿ ಬೆಳಗುವಿಕೆ. 1ಕ್ಕೆ ಮಹಾಪ್ರಸಾದ ವಿನಿಯೋಗ. ಸಂಜೆ 4.30ಕ್ಕೆ ಪೂಜೆ, ಕಳಸ ಸ್ಥಾಪನೆ ಮತ್ತು ಹೋಮ, 6.30ಕ್ಕೆ ಶ್ರೀ ಶಿರಡಿ ಸಾಯಿಬಾಬಾ ಕುರಿತ ಚಿತ್ರಪ್ರದರ್ಶನ.
26ರಂದು ಬೆಳಿಗ್ಗೆ ಕಾಕಡ ಆರತಿ, ಸಾಮೂಹಿಕ ಅಭಿಷೇಕ, ಹೋಮ, ಪೂಜೆ, ಮಹಾಪೂರ್ಣಾಹುತಿ, ಕಳಸದೊಂದಿಗೆ ಮೆರವಣಿಗೆ, ಕಳಸ ಅಭಿಷೇಕ, 12.5ಕ್ಕೆ ಮಹಾ ಮಂಗಳಾರತಿ, ಪುಷ್ಪವೃಷ್ಟಿ, 12.30ಕ್ಕೆ ಅನ್ನದಾನ, ಸಂಜೆ 6.30ಕ್ಕೆ ನಾನಾ ನಾದಸ್ವರ ವಾದ್ಯಗಳೊಂದಿಗೆ ಶ್ರೀ ಸಾಯಿಬಾಬಾ ಮೆರವಣಿಗೆ. 27ರಂದು ಸಂಜೆ 6ಕ್ಕೆ