ಕರ್ನಾಟಕ

ಭಾರತ ಸರ್ಕಾರದಿಂದ ಬಿ.ಎಸ್.ರಘುನಾಥ್‌ರವರಿಗೆ ಮಾದರಿರೈತ ಪ್ರಶಸ್ತಿ ಗೌರವ

Pinterest LinkedIn Tumblr

rಹಿರಿಯೂರು,ಫೆ.22-  ತಾಲ್ಲೂಕಿನ  ಹರಿಯಬ್ಬೆ  ಗ್ರಾಮದ ಪ್ರಗತಿ ಪರ ರೈತ ಬಿ.ಎಸ್.ರಘುನಾಥ್‌ರವರು ಕೃಷಿ ಹಾಗೂ ಅರಣ್ಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಗುರುತಿಸಿ  ಕೇಂದ್ರ ಸರ್ಕಾರದ ವತಿಯಿಂದ  ಮಾದರಿ ರೈತ (ಮಾಡಲ್ ಫಾರ್ಮರ್) ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಭಾರತ ಸರ್ಕಾರದ ಅರಣ್ಯ ಮಂತ್ರಾಲಯ ನವದೆಹಲಿಯಲ್ಲಿ ಏರ್ಪಡಿಸಲಾಗಿದ್ದ ಇಂಡಿಯನ್ ಫ್ಲೇವುಡ್ ಇಂಡಸ್ಟ್ರೀಸ್‌ನ ರಿಸರ್ಚ್ ಮತ್ತು ಟ್ರೈನಿಂಗ್‌ನ ವಾರ್ಷಿಕ ಮಹಾಸಭೆ ಭಾರತ ಸರ್ಕಾರದ ಅರಣ್ಯ ಪರಿಸರ ಮತ್ತು ಹವಾಮಾನ ಸಚಿವರಾದ ಪ್ರಕಾಶ್ ಜಾವಡೆಕರ್ ಅಧ್ಯಕ್ಷತೆಯಲ್ಲಿ ನಡೆದ ಸಂದರ್ಭದಲ್ಲಿ ಪ್ರಗತಿಪರ ರೈತ ರಘುನಾಥ್ ಅವರನ್ನು ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ, ಕೃಷಿಕ ರಘುನಾಥ್‌ರವರು  ಕೃಷಿಕರು ಕಡಿಮೆ ಮಳೆ ಬೀಳುವ ಪ್ರದೇಶದಲ್ಲೂ ಅರಣ್ಯ ಬೆಳೆಸಲು ಇರುವ ಅವಕಾಶಗಳು ಹಾಗೂ ಅಡಚಣೆಗಳು ಬಗ್ಗೆ ಸಭೆಗೆ ವಿವರವಾಗಿ ತಿಳಿಸಿದರು.  ಜಮೀನಿನಲ್ಲಿ ಶ್ರೀಗಂಧ ಬೆಳೆಯುವ ರೈತರಿಗೆ ಬೆಳೆರಕ್ಷಣೆ ಮಾಡಿಕೊಳ್ಳುವ ಬಗ್ಗೆ ಸರ್ಕಾರ ಸಹಾಯಹಸ್ತ ನೀಡಬೇಕು ಎಂದು ಮನವಿ ಮಾಡಿದರು. ರೈತ ರಘುನಾಥ್ ಜಮೀನಿನಲ್ಲಿ  ಅರಣ್ಯಕೃಷಿಯಲ್ಲಿ ಮಾಡಿರುವ ಸಾಧನೆಯ ಸಾಕ್ಷ್ಯಚಿತ್ರವನ್ನು ಕೇಂದ್ರ ಸಚಿವರಾದ ಪ್ರಕಾಶ್ ಜಾವಡೆಕರ್ ಬಿಡುಗಡೆ ಮಾಡಿದರು.

ಭಾರತದ ಎಲ್ಲಾ ರಾಜ್ಯಗಳಿಂದ ಬಂದ ನೂರಾರು ಫ್ಲೇವುಡ್ ಉದ್ಯಮಿಗಳು ಹಾಗೂ ಕೇಂದ್ರ ಸರ್ಕಾರದ ಕೃಷಿಅರಣ್ಯ, ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಡೈರೆಕ್ಟರ್ ಜನರಲ್ ಆಫ್ ಪಾರೆಸ್ಟ್ ಹಿರಿಯ ಅಕಾರಿಗಳು ಭಾಗವಹಿಸಿದ್ದರು.

Write A Comment