ಕರ್ನಾಟಕ

ಫೆ.23ರಂದು ಬರಗಾಲ ಸಮೀಕ್ಷೆಗೆ ಕೇಂದ್ರ ತಂಡ ಭೇಟಿ: ರು.1,417 ಕೋಟಿ ನೆರವಿಗೆ ರಾಜ್ಯದ ಮನವಿ

Pinterest LinkedIn Tumblr

formerಬೆಂಗಳೂರು: ಹಿಂಗಾರು ಬೆಳೆ ವೈಫಲ್ಯ ಕುರಿತು ಕೇಂದ್ರಕ್ಕೆ ಮನವಿ ಸಲ್ಲಿಸಿರುವ ರಾಜ್ಯ ಸರ್ಕಾರ, ಕೇಂದ್ರದಿಂದ ರು.1.417 ಕೋಟಿ ನೆರವು ನಿರೀಕ್ಷಿಸಿದೆ.

ರಾಜ್ಯ ಸರ್ಕಾರ ಹಿಂಗಾರು ಕೈಕೊಟ್ಟಿರುವ ಕುರಿತು ಜನವರಿ 23ರಂದು ಕೇಂದ್ರಕ್ಕೆ ಮನವಿ ಸಲ್ಲಿಸಿದ್ದು, ಒಟ್ಟು ರು. 7,210 ಕೋಟಿ ಮೌಲ್ಯದ ಬೆಳೆ ನಾಶವಾಗಿದೆ ಎಂದು ವಿವರಿಸಿತ್ತು.

ಬರ ಅಧ್ಯಯನ ನಡೆಸಲು ಕೇಂದ್ರ ತಂಡ ಫೆ.23ರಂದು ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಬರ ಅಧ್ಯಯನ ನಡೆಸಿದ ನಂತರ ಫೆ. 26ರಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರದ ಕೃಷಿ ಸಚಿವರು, ಕಂದಾಯ ಸಚಿವರು, ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾಹಿತಿ ಪಡೆಯಲಿದೆ.

ಬೀದರ್, ಗುಲ್ಬರ್ಗ, ಯಾದಗಿರಿ, ರಾಯಚೂರು, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಧಾರವಾಡ, ಗದಗ, ಬಳ್ಳಾರಿ ಮತ್ತು ಹಾವೇರಿ ಜಿಲ್ಲೆಗಳಿಗೆ ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ದಿನೇಶ್ ಕುಮಾರ್, ನೇತೃತ್ವದ ಕೇಂದ್ರ ತಂಡ ಭೇಟಿ ನೀಡಲಿದೆ.

Write A Comment