ಮೈಸೂರು: ಸರ್ಕಾರಿ ಕೆಲಸ ಸಿಗಲಿಲ್ಲವೆಂದು ಮನನೊಂದ ಯುವಕನೊರ್ವ ತೆರೆದ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಆಲಗೂಡು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಹದೇವ ಎಂಬುವರ ಪುತ್ರ ನಾಗರಾಜು (24) ಎಂಬಾತನೆ ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿಯಾಗಿದ್ದು. ಈತ ಕಳೆದ 6 ತಿಂಗಳ ಹಿಂದೆಯಷ್ಟೇ ಬಿಎ ವ್ಯಾಸಂಗ ಮುಗಿಸಿ ಉದ್ಯೋಗಕ್ಕಾಗಿ ಹಲವಾರು ಕಡೆ ಅರ್ಜಿ ಸಲ್ಲಿಸಿ, ಯಾವುದೇ ಕೆಲಸ ಸಿಗದ ಕಾರಣ ಬೇಸತ್ತು ಕಳೆದ ಶುಕ್ರವಾರರಾತ್ರಿ ಮನೆಯಿಂದ ನಾಪತ್ತೆಯಾಗಿದ್ದ.
ಸೋಮವಾರ ಈತನ ಶವ ಗ್ರಾಮದ ಹೊರ ವಲಯದಲ್ಲಿರುವ ನೆಲ ಬಾವಿಯಲ್ಲಿ ಕೊಳೆತ ಸ್ಥಿತಿಯಲ್ಲಿ ದೊರಕಿದ್ದು ,ಈ ಸಂಬಂಧ ಮೃತನ ತಂದೆ ಮಹದೇವ ಪಟ್ಟಣ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಮೃತ ನಾಗರಾಜುವಿನ ತಂದೆ ತಾಯಿ ಪಟ್ಟಣದ ಲಿಂಕರಸ್ತೆಯ ಪುಟ್‌ಪಾತ್‌ನಲ್ಲಿ ಹಣ್ಣು ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದು ಸಾಲ ಮಾಡಿ ಮಗನನ್ನು ಬಿಎ ವ್ಯಾಸಂಗ ಮಾಡಿಸಿ ಉನ್ನತ ನೌಕರಿ ಕೊಡಿಸಬೇಕೆಂದುಕೊಂಡಿದ್ದ ಪೋಷಕರ ಆಸೆ ನಿರಾಸೆಯಾಗಿದ್ದು, ಕುಟುಂಬ ಇದ್ದ ಒಬ್ಬ ಮಗನನ್ನು ಕಳೆದುಕೊಂಡು ಅತಂತ್ರವಾಗಿದೆ.