ಕರ್ನಾಟಕ

ದುಬಾರಿ ವಾಚ್ ಹರಾಜು ; ಸಿಎಂ

Pinterest LinkedIn Tumblr

sidduಬೆಂಗಳೂರು: ದುಬಾರಿ ಕೈಗಡಿಯಾರದಿಂದ ಸಾರ್ವಜನಿಕ ವಲಯದಲ್ಲಿ ಆಗುತ್ತಿರುವ ಮುಜುಗರದಿಂದ ಪಾರಾಗಲು ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಅಭಿಮಾನಿಯೊಬ್ಬರು ಉಡುಗೊರೆಯಾಗಿ ನೀಡಿರುವ ವಜ್ರ ಖಚಿತ ಹೆಬ್ಲೋಟ್ ವಾಚನ್ನು ವಿಲೇವಾರಿ ಮಾಡಲು ಗಂಭೀರ ಚಿಂತನೆ ನಡೆಸಿರುವ ಅವರು, ಈ ಕುರಿತು ಕಾನೂನು ತಜ್ಞರ ಮೊರೆ ಹೋಗಿದ್ದಾರೆ.

ಈ ಸಂಬಂಧ ತಜ್ಞರ ಸಲಹೆ ಜತೆಗೆ ಆಪ್ತರೊಂದಿಗೆ ಸಮಾಲೋಚನೆ ನಡೆಸಿ, ಕೈಗಡಿಯಾರವನ್ನು ಹರಾಜು ಅಥವಾ ರಾಜ್ಯದ ಸ್ವತ್ತೆಂದು ಘೊಷಿಸಲು ಸಿಎಂ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ರಾಜ್ಯದ ಸ್ವತ್ತೆಂದು ಘೊಷಿಸಿ ವಜ್ರ ಖಚಿತ ಕೈಗಡಿಯಾರವನ್ನು ನಿರಪಯಕ್ತಗೊಳಿಸುವ ಬದಲು, ಅದನ್ನು ಹರಾಜು ಹಾಕಿ ಬರುವ ಹಣವನ್ನು ಸಾಮಾಜಿಕ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳುವ ಬಗ್ಗೆಯೂ ಸಿಎಂ ಚಿಂತನೆ ನಡೆಸುತ್ತಿದ್ದಾರೆ.

ಆಸ್ತಿ ವಿವರ ಘೊಷಣೆ ಮಾಡುವ ಸಂದರ್ಭದಲ್ಲಿ ವಾಚ್​ನ ವಿವರಗಳನ್ನು ತೋರಿಸುವುದು ಸಹ ಮುಖ್ಯಮಂತ್ರಿ ಅವರ ಉದ್ದೇಶವಾಗಿದೆ ಎಂದು ಹೇಳಲಾಗಿದೆ. ಆದಾಯ ತೆರಿಗೆ ಸೇರಿ ಇನ್ನಿತರ ಕಾನೂನಿನಲ್ಲಿರುವ ಅವಕಾಶಗಳ ಬಗ್ಗೆಯೂ ಅಧ್ಯಯನ ನಡೆಸಲು ತಮ್ಮ ಆಪ್ತಶಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Write A Comment