ಕರ್ನಾಟಕ

ಆ್ಯಪ್‌ ತಯಾರಿ ಕಲಿಸಲು ಕೆಎಸ್‌ಆರ್‌ಟಿಸಿ “ಆ್ಯಪ್‌ಥಾನ್‌’

Pinterest LinkedIn Tumblr

ksrtcಬೆಂಗಳೂರು: ಮ್ಯಾರಥಾನ್‌ ಹಳೇದಾಯ್ತು. ವಾಕಥಾನ್‌ ಮಾಮೂಲಿ ಆಗಿಬಿಟ್ಟಿದೆ. ಈಗ ಮೊಬೈಲ್‌ “ಆ್ಯಪ್‌ಥಾನ್‌’ ನಡೆಯುತ್ತಿದೆ! – ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ ಟಿಸಿ) ಮೈಸೂರಿನಲ್ಲಿ ಇಂತಹದ್ದೊಂದು ವಿನೂತನ ಪ್ರಯೋಗಕ್ಕೆ ಕೈಹಾಕಿದೆ. ಇದರ ಉದ್ದೇಶ- ವಿದ್ಯಾರ್ಥಿಗಳಿಗೆ ಆ್ಯಪ್‌ ಅಭಿವೃದಿಟಛಿಪಡಿಸುವುದರ ಬಗ್ಗೆ ತರಬೇತಿ ನೀಡುವುದು. ಇದಕ್ಕೆ ಪ್ರತಿಯಾಗಿ ವಿದ್ಯಾರ್ಥಿಗಳು “ಪ್ರಯಾಣಿಕ ಸ್ನೇಹಿ’ಯಾದ ಹೊಸ ಹೊಸ ಆ್ಯಪ್‌ಗ್ಳನ್ನು ತಯಾರಿಸಿ ಕೊಡಬೇಕು.
ಉತ್ತಮ ಆ್ಯಪ್‌ಗೆ ನಿಗಮವು ಬಹುಮಾನ ಕೊಡುತ್ತೆ.

ಶನಿವಾರ ಈ ಶಿಬಿರಕ್ಕೆ ಚಾಲನೆ ನೀಡಲಾಗಿದೆ. ಮೈಸೂರು ನಗರದ ಸುಮಾರು 90 ತಾಂತ್ರಿಕ ವಿದ್ಯಾರ್ಥಿಗಳು ಭಾಗವಹಿ ಸಿದ್ದು, ಆ ಪೈಕಿ 55 ವಿದ್ಯಾರ್ಥಿನಿಯರೇ ಇದ್ದಾರೆ. ಅವರಿಗೆ ಆ್ಯಪ್‌ ತಯಾರಿಕೆ ಬಗ್ಗೆ ತರಬೇತಿ ನೀಡಿ, ಹೊಸ ಹೊಸ ಆ್ಯಪ್‌ ಗಳನ್ನು ತಯಾರಿಸಿ ಕೊಡುವಂತೆ ವಾರದ ಗಡುವು ನೀಡಲಾಗಿದೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳು ಪ್ರಯಾಣಿಕರನ್ನು ಕೂಡ ಭೇಟಿ ಮಾಡಿ, ಸಾರಿಗೆ ಸೌಲಭ್ಯಗಳ ಕುರಿತು ಸಲಹೆ-ಅಭಿಪ್ರಾಯಗಳನ್ನು ಸಂಗ್ರಹಿಸಬಹುದು. ಅದೆಲ್ಲವನ್ನೂ ಕ್ರೋಢೀಕರಿಸಿ, ಈಗಿರುವ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮಗೊಳಿಸವ ಆ್ಯಪ್‌ನ್ನು ನಿಗಮಕ್ಕೆ ನೀಡಲಿದ್ದಾರೆ.

ವೆಬ್‌ನಿಂದ ಆ್ಯಪ್‌ಗೆ: ಮೈಸೂರಿನಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಐಟಿಎಸ್‌ (ಇಂಟೆಲಿಜೆಂಟ್‌ ಟ್ರಾನ್ಸ್‌ಪೊàರ್ಟ್‌ ಸಿಸ್ಟಂ) ಜಾರಿಗೊಳಿಸಲಾಗಿದೆ. ಸದ್ಯ ಈ ಸೌಲಭ್ಯ ಮೈಸೂರು ನಗರದ 168 ನಿಲ್ದಾಣ ಹಾಗೂ ವೆಬ್‌ಗಳಲ್ಲಿ ಮಾತ್ರ ಇದ್ದು, ಆಯಾ ಮಾರ್ಗದ ಬಸ್‌ ಎಲ್ಲಿದೆ? ಎಷ್ಟು ಗಂಟೆಗೆ ನಿಗದಿತ ನಿಲ್ದಾಣ ತಲುಪಲಿದೆ ಎನ್ನುವುದನ್ನು ಈ ವ್ಯವಸ್ಥೆ ತಿಳಿಸುತ್ತಿದೆ.

ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಐಟಿಎಸ್‌ ಸೇವೆಯನ್ನು ಪ್ರಯಾಣಿಕರ ಮೊಬೈಲ್‌ನಲ್ಲೇ ಒದಗಿಸುವುದು ಈ “ಆ್ಯಪ್‌ಥಾನ್‌’ನ ಮತ್ತೂಂದು ಉದ್ದೇಶವಾಗಿದೆ. ದೇಶದಲ್ಲೇ ಮೊದಲ ಪ್ರಯೋಗ ಇದಾಗಿದೆ ಎಂದು ಕೆಎಸ್‌ ಆರ್‌ಟಿಸಿ ಅಧಿಕಾರಿಗಳು ತಿಳಿಸುತ್ತಾರೆ.

ಹಿಂದೆ ಇದೇ ಪ್ರಯೋಗ ಆಗಿತ್ತು: ಮೈಸೂರಿನ ಜಯಚಾಮ ರಾಜೇಂದ್ರ ತಾಂತ್ರಿಕ ವಿದ್ಯಾಲಯದ ಸಭಾಂಗಣದಲ್ಲಿ “ಮೊಬೈಲ್‌ ಆಪ್‌ಥಾನ್‌’ ಕುರಿತು ತಾಂತ್ರಿಕ ಪ್ರಾತ್ಯಕ್ಷಿಕೆ ನೀಡಲಾಯಿತು. ಪ್ರಸ್ತುತ ಮೈಸೂರಿನ ಪ್ರಯಾಣಿಕರಿಗಾಗಿ ಜಾರಿಗೊಳಿಸಿರುವ mitra.ksrtc.in ಕೂಡ ತಾಂತ್ರಿಕವಿದ್ಯಾರ್ಥಿಗಳಿಂದ ಬಂದ ಐಡಿಯಾ ಎಂಬುದನ್ನು ಇಲ್ಲಿ ಸ್ಮರಿಸಬಹುದು. ಮೈಸೂರು ಇಂಟೆಲಿಜೆಂಟ್‌ ಟ್ರಾನ್ಸ್‌ಪೊàರ್ಟ್‌ಗಾಗಿ ವೆಬ್‌ಸೈಟ್‌ ಹೆಸರು ಸೂಚಿಸುವಂತೆ ಈ ಹಿಂದೆ ಕೆಎಸ್‌ಆರ್‌ಟಿಸಿ ವಿದ್ಯಾರ್ಥಿಗಳಿಗೆ ಕೋರಿತ್ತು.

ವಿಶ್ವಬ್ಯಾಂಕ್‌ ಸಹಯೋಗದಲ್ಲಿ (ಜಿಇಎಫ್-ಎಸ್‌ಯುಟಿಪಿ) ಕಾರ್ಯಕ್ರಮದಡಿ ಕೆಎಸ್‌ಆರ್‌ಟಿಸಿಯು ಐಟಿಎಸ್‌ ಅನ್ನು ಮೈಸೂರು ನಗರದಲ್ಲಿ ಅನುಷ್ಠಾನಗೊಳಿಸಿದೆ. ಈ ಉಪಕ್ರಮದಿಂದ ಪ್ರಯಾಣಿಕರಿಗೆ ನೈಜ ಸಮಯದಲ್ಲಿ ಬಸ್‌ ಆಗಮನ, ನಿರ್ಗಮನ ಸಮಯಗಳ ಮಾಹಿತಿಯನ್ನು ಕೊಡಲಾಗುತ್ತಿದೆ.
-ಉದಯವಾಣಿ

Write A Comment