ಬೆಂಗಳೂರು: ಜೀವನಶೈಲಿ ಮತ್ತು ಅದಕ್ಕೆ ಸಂಬಂಧಿಸಿದ ರೋಗಗಳು ಪ್ಲೇಗ್‌ನಂತೆ ಪಿಡುಗಾಗಿ ಕಾಡುತ್ತಿದ್ದು, ಈ ಬಗ್ಗೆ ಅರಿವು ಮೂಡಿಸಲು ಶಾಲಾ ಹಂತದಲ್ಲಿ ಪಠ್ಯ ಅಳವಡಿಸಬೇಕು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತಕುಮಾರ್ ಸಲಹೆ ಮಾಡಿದ್ದಾರೆ.
ಇಲ್ಲಿನ ಸದಾಶಿವನಗರದಲ್ಲಿ ರಾಷ್ಟ್ರೋತ್ಥಾನ ಪರಿಷತ್ತು ನಿರ್ಮಿಸಿರುವ ಪತಂಜಲಿ ಯೋಗಮಂದಿರದ
ಲೋಕಾರ್ಪಣೆ ಸಮಾರಂಭದಲ್ಲಿ ಶನಿವಾರ ಪಾಲ್ಗೊಂಡು ಅವರು ಮಾತನಾಡಿದರು.
ದೇಶದ ಪ್ರತಿಯೊಬ್ಬನೂ ಯೋಧ ಆಗಬೇಕು- ರಾಠೊಡ್: ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ರಾಜ್ಯವರ್ಧನ ಸಿಂಗ್ ರಾಠೊಡ್ ಮಾತನಾಡಿ, ದೇಶದ ಗಡಿಯಲ್ಲಿ ನಾವು ಬಲಿಷ್ಠವಾಗಿರುವಂತೆ ದೇಶದ ಒಳಗಡೆ ಕೂಡ ಯುವ ಸಮಾಜವನ್ನು ಬಲಿಷ್ಠಗೊಳಿಸಬೇಕು. ಸಮಾಜದಲ್ಲಿರುವ ಪ್ರತಿಯೊಬ್ಬರೂ ಸೈನಿಕರಂತೆ ಸದೃಢವಾಗಬೇಕು. ಈ ದಿಸೆಯಲ್ಲಿ ಯೋಗಾಭ್ಯಾಸ ಬಹುಮುಖ್ಯ ಎಂದು ಕಿವಿಮಾತು ಹೇಳಿದರು.
ಸಿಯಾಚಿನ್ ಹಿಮಪಾತದಲ್ಲಿ ಆರು ದಿನ ಸಿಲುಕಿಯೂ ಲಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ
ಬದುಕಿ ಉಳಿಯಲು ಸಾಧ್ಯವಾಗಿದ್ದು ಯೋಗದಿಂದ. ವ್ಯಕ್ತಿ ಕೇವಲ ದೈಹಿಕವಾಗಿ ಸದೃಢವಾದರೆ ಸಾಲದು, ಮಾನಸಿಕವಾಗಿಯೂ ಬಲಿಷ್ಠನಾಗಬೇಕು. ಅದು ಯೋಗದಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಪಾಕ್ ಮತ್ತು ಸೌದಿ ಅರೇಬಿಯಾ
ಸೇರಿದಂತೆ 191 ದೇಶಗಳು ವಿಶ್ವ ಯೋಗ ದಿನ ಆಚರಿಸಿದವು. ಯುವಪೀಳಿಗೆಗೆ ಯೋಗದ ಮಹತ್ವ
ಈಗ ಅರ್ಥವಾಗುತ್ತಿದೆ ಎಂದರು. ಆರೆಸ್ಸೆಸ್ ಅಖೀಲ ಭಾರತ ವ್ಯವಸ್ಥಾ ಪ್ರಮುಖ ಮಂಗೇಶ್ ಭೇಂಡೆ, ಪ್ರತಿಯೊಬ್ಬರೂ ಒತ್ತಡದಲ್ಲಿ ಬದಕುತ್ತಿದ್ದಾರೆ. ಯೋಗದ ಅವಶ್ಯಕತೆ ಮೊದಲಿಗಿಂತ ಈಗ ಹೆಚ್ಚಿದೆ. ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಹೊರಹೊಮ್ಮಲು ಯೋಗ ಅತ್ಯಗತ್ಯ ಎಂದು ತಿಳಿಸಿದರು.
ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ ಮಾತನಾಡಿ, 25 ಸಾವಿರ ಚದರಡಿಯಲ್ಲಿ
ನಿರ್ಮಿಸಲಾದ ಯೋಗ ಮತ್ತು μಟ್‌ನೆಸ್ ಸೆಂಟರ್ “ಪತಂಜಲಿ ಯೋಗಮಂದಿರ’ದಲ್ಲಿ ಒಟ್ಟು ಎಂಟು
ಹಾಲ್‌ಗಳಿದ್ದು, ಆ ಪೈಕಿ ಐದನ್ನು ಯೋಗ ಮತ್ತು ಮೂರನ್ನು μಟ್‌ನೆಸ್‌ಗಾಗಿ ಮೀಸಲಿಡಲಾಗಿದೆ.
ನಿತ್ಯ ಐದು ಬ್ಯಾಚುಗಳಲ್ಲಿ ವಾರದ ಆರು ದಿನ ಯೋಗ ಮಂದಿರ ನಡೆಸಲಾಗುವುದು ಎಂದು ಮಾಹಿತಿ ನೀಡಿದರು. ಪರಿಷತ್ತಿನ ಅಧ್ಯಕ್ಷ ಎಸ್.ಆರ್. ರಾಮಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
-ಉದಯವಾಣಿ