ನಂಜನಗೂಡು: ತೈಲ ಬೆಲೆ ಇಳಿಕೆ ಪರಿಣಾಮ ಕೇಂದ್ರ ಸರ್ಕಾರಕ್ಕೆ 1.50 ಲಕ್ಷ ಕೋಟಿ ರೂ. ಉಳಿತಾಯವಾಗುತ್ತಿದೆ. ಬಿಜೆಪಿಗೆ ರೈತರು ಹಾಗೂ ಬಡವರ ಬಗ್ಗೆ ಕಾಳಜಿ ಇದ್ದಲ್ಲಿ ಈ ಹಣದಲ್ಲಿ
ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಮಾಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.
ತಾಲೂಕಿನ ಹುಲ್ಲಳ್ಳಿಯಲ್ಲಿ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ಅವರು, ವಿಶ್ವ ಮಾರುಕಟ್ಟೆ ಬೆಲೆಗೆ ಅನುಗುಣವಾಗಿ ಕೇಂದ್ರ ಸರ್ಕಾರ ಪೆಟ್ರೋಲ್ (ಪ್ರತಿ ಲೀಟರ್ 20 ರೂ.) ಹಾಗೂ ಡೀಸೆಲ್ (ಪ್ರತಿ ಲೀಟರ್ 16 ರೂ.) ಅನ್ನು ಮಾರಾಟ ಮಾಡಲಿ.
ಈ ರೀತಿ ಪೆಟ್ರೋಲ್ ನೀಡಿದರೆ, ಗಗನಕ್ಕೇರಿದ ಆಹಾರ ಪದಾರ್ಥಗಳ ಬೆಲೆ ಇಳಿಮುಖವಾಗಲಿದೆ. ಬಡವರು ಉಸಿರಾಡಲು ಸಹಾಯವಾಗುತ್ತದೆ. ಆದರೆ, ಶ್ರೀಮಂತರ ಪರವಿರುವ ಬಿಜೆಪಿ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಇದು ಬೇಕಿಲ್ಲ ಎಂದು ಕೇಂದ್ರ ಸರ್ಕಾರವನ್ನು ಟೀಕಿಸಿದರು.
-ಉದಯವಾಣಿ