ಬೆಂಗಳೂರು,ಫೆ.೧೧-ಕೋರಮಂಗಲದಿಂದ ಯುವತಿಯೊಬ್ಬರನ್ನು ಕಾರಿನಲ್ಲಿ ಅಪಹರಿಸಿಕೊಂಡು ಹೋಗಿ ಗೋಡೌನ್‌ವೊಂದರಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿ ೧೫ ಸಾವಿರ ನಗದು ಮೊಬೈಲ್ ದೋಚಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಹೀನ ಕೃತ್ಯ ನಡೆಸಿದ ನಿತಿನ್ ಶೆಟ್ಟಿ, ಧನಂಜಯ್, ರಜತ್ ಕುಮಾರ್ ಸೇರಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಕೋರಮಂಗಲ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ಫೆ.೨ ರಂದು ಅಶೋಕ ನಗರದಿಂದ ಸೌಂದರ್ಯತಜ್ಞೆ (ಬ್ಯೂಟಿಶಿಯನ್)ಆಗಿ ಕೆಲಸಮಾಡುತ್ತಿದ್ದ ಕೋಲ್ಕತ್ತಾ ಮೂಲದ ೨೨ ವರ್ಷದ ಯುವತಿಯು ಕೋರಮಂಗಲಕ್ಕೆ ಬಂದು ಸ್ನೇಹಿತೆಯನ್ನು ಭೇಟಿ ಮಾಡಲು ತೆರಳುತ್ತಿದ್ದಾಗ ಕೋರಮಂಗಲದ ಕರ್ನಾಟಕ ಬ್ಯಾಂಕ್ ಬಳಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅಪಹರಿಸಿದ್ದಾರೆ.
ಅಲ್ಲಿಂದ ಕಾರಿನಲ್ಲಿ ನಿರ್ಜನ ಪ್ರದೇಶದ ಗೋಡೌನ್‌ಗೆ ಕರೆದೊಯ್ದು ಆತ್ಯಾಚಾರವೆಸಗಿ ಆಕೆಯ ಬಳಿಯಿದ್ದ ೧೫ ಸಾವಿರ ನಗದು ಮೋಬೈಲ್ ಕಸಿದು ಪರಾರಿಯಾಗಿದ್ದಾರೆ.
ಈ ವೇಳೆ ಯುವತಿಗೆ ಚಾಕು ತೋರಿಸಿ ಕೂಗಾಡದಂತೆ ಬೆದರಿಸಿದ್ದರಂತೆ. ನಂತರ ಯುವತಿ ನೀಡಿದ ಮಾಹಿತಿ ಮೇರೆಗೆ ಆರೋಪಿಗಳಾದ ನಿತಿನ್ ಶೆಟ್ಟಿ, ಧನಂಜಯ್, ರಜತ್ ಕುಮಾರ್ ಎಂಬುವವರನ್ನು ಕೋರಮಂಗಲ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.