ಕರ್ನಾಟಕ

ಇಬ್ಬರು ಸರಗಳ್ಳರ ಬಂಧನ : 2.70 ಲಕ್ಷ ಮೌಲ್ಯದ ಮಾಲು ವಶ

Pinterest LinkedIn Tumblr

saraಬೆಂಗಳೂರು, ಫೆ.11- ನ್ಯಾಯಾಲಯದ ಜಾಮೀನಿನ ಮೇಲೆ ಹೊರ ಬಂದು ವಾಹನಗಳನ್ನು ಕಳ್ಳತನ ಮಾಡಿ ಮತ್ತೆ ಸರಗಳ್ಳತನ ಮಾಡುತ್ತಿದ್ದ ಇಬ್ಬರನ್ನು ಕೆಂಪೇಗೌಡನಗರ ಪೊಲೀಸರು ಬಂಧಿಸಿದ್ದಾರೆ. ಚಾಮರಾಜಪೇಟೆಯ ಅಲಿಂಖಾನ್ (20)ಮತ್ತು ಬೆಂಗಳೂರಿನ ಪಿಳ್ಳಣ್ಣಗಾರ್ಡ್‌ನ್ ನಿವಾಸಿ ಮೊಹಮ್ಮದ್ ಶಫಿ ಅಹಮ್ಮದ್(24) ಬಂಧಿತ ಸರಗಳ್ಳರು. ಈ ಇಬ್ಬರು ಆರೋಪಿಗಳು ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲುವಾಸ ಅನುಭವಿಸಿ ನ್ಯಾಯಾಲಯದ ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರ ಬಂದು ವಾಹನಗಳನ್ನು ಕಳವು ಮಾಡಿ ಮತ್ತೆ ಸರಗಳ್ಳತನ ದಂಧೆಗೆ ಇಳಿದಿದ್ದರು.

ನಗರದಲ್ಲಿ ಸರಗಳ್ಳತನ ಹೆಚ್ಚಾಗುತ್ತಿದ್ದುದ್ದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು. ಸರಗಳ್ಳರ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಈ ಇಬ್ಬರು ಪೊಲೀಸರ ಬಲೆಗೆ ಬಿದ್ದಿದ್ದು, ಇವರಿಂದ 2.70 ಲಕ್ಷ ರೂ. ಮೌಲ್ಯದ ಚಿನ್ನದ ಸರಗಳು ಮತ್ತು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಇವರ ಬಂಧನದಿಂದ ಕೆಂಪೇಗೌಡ ನಗರ ಮತ್ತು ಹನುಮಂತನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಸರಗಳ್ಳತನ ಹಾಗೂ ಅಶೋಕ್‌ನಗರ ಮತ್ತು ಕೆಂಪೇಗೌಡ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಬೈಕ್ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ.

ಈ ಹಿಂದೆ ಇವರು 2010ರಿಂದ ಹೈಗ್ರೌಂಡ್, ಚಾಮರಾಜಪೇಟೆ, ಸೆಂಟ್ರಲ್, ಹಲಸೂರು ಗೇಟ್, ಎಸ್‌ಜೆಪಾರ್ಕ್, ಎಸ್.ಆರ್.ನಗರ, ಬನಶಂಕರಿ, ಕಮರ್ಷಿಯಲ್, ಸುಬ್ರಹ್ಮಣ್ಯಪುರ, ಜೆ.ಪಿ.ನಗರ, ಮಲ್ಲೇಶ್ವರಂ, ಕಾಟನ್‌ಪೇಟೆ, ಕುಮಾರಸ್ವಾಮಿ ಲೇಔಟ್, ಕೆ.ಜಿ.ಹಳ್ಳಿ, ಮಡಿವಾಳ, ಶಿವಾಜಿನಗರ, ಡಿ.ಜೆ.ಹಳ್ಳಿ ಪೊಲೀಸ್ ಠಾಣೆಗಳ ಪ್ರಕರಣಗಳಲ್ಲಿ ಭಾಗಿಯಾಗಿ ಬಂಧಿತರಾಗಿದ್ದರು. ದಕ್ಷಿಣ ವಿಭಾಗದ ಉಪ ಪೊಲೀಸ್ ಕಮೀಷನರ್ ಲೋಕೇಶ್‌ಕುಮಾರ್ ಮಾರ್ಗದರ್ಶನದಲ್ಲಿ ಈ ಕಾರ್ಯಚರಣೆ ನಡೆಸಲಾಗಿತ್ತು.

Write A Comment