ಹುಬ್ಬಳ್ಳಿ: ನಗರದ ಆರೆಸ್ಸೆಸ್ ಕಚೇರಿಯ ಬಳಿಯಿರುವ ಮೋರಿಯ ಬಳಿ ಬಾಂಬ್ ಪತ್ತೆಯಾಗಿದೆ.
ಇಂದು ಮಧ್ಯಾಹ್ನ ಆರೆಸ್ಸೆಸ್ ಕಚೇರಿ “ಕೇಶವ ಕುಂಜ” ಬಳಿಯಿರುವ ಮೋರಿಯ ದಂಡೆ ಮೇಲೆ ಮಕ್ಕಳು ಬಾಂಬ್ ಹಿಡಿದುಕೊಂಡು ಆಟವಾಡುತ್ತಿದ್ದರು. ಇದನ್ನು ಗಮನಿಸಿದ ಕೆಲ ವೆಕ್ತಿಗಳು ಕೂಡಲೇ ಪೊಲೀಸರಿಗೆ ಮಾಹಿತಿಯನ್ನು ತಿಳಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಬಾಂಬ್ ನಿಗ್ರಹ ದಳದವರು ಬಾಂಬ್ ವಶಪಡಿಸಿಕೊಂಡರು. ಈ ಬಾಂಬ್ ಜೀವಂತವಾಗಿದೆಯೇ ಎಂಬುದರ ತಪಾಸಣೆ ಕಾರ್ಯ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಹೆಚ್ಚಿನ ಮಾಹಿತಿಗಳು ಇನ್ನು ಲಭ್ಯವಾಗಿಲ್ಲ