ಕರ್ನಾಟಕ

ವಿರೋಧ ಲೆಕ್ಕಿಸದೆ ಮದುವೆ..ಪೋಷಕರ ಸಮ್ಮುಖದಲ್ಲೇ ಒಂದಾಯ್ತು ಯುವಜೋಡಿ

Pinterest LinkedIn Tumblr

5marriageಮಂಡ್ಯ: ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಯುವಕ- ಯುವತಿ ಪೋಷಕರ ವಿರೋಧದ ನಡುವೆಯೂ ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಹಾಗೂ ವಕೀಲ ಕಣಿವೆ ಯೋಗೇಶ್ ಅವರ ನೇತೃತ್ವದಲ್ಲಿ ನೂತನ ದಾಂಪತ್ಯಕ್ಕೆ ಕಾಲಿಟ್ಟರು.

ತಾಲೂಕಿನ ಚಿಕ್ಕಯರಹಳ್ಳಿ ಗ್ರಾಮದ ಸಿದ್ದರಾಜು ಪುತ್ರ ನವೀನ್‍ಕುಮಾರ್(27) ಹಾಗೂ ಇಳ್ಳೇನಹಳ್ಳಿ ಗ್ರಾಮದ ನರಸಿಂಹಯ್ಯನವರ ಪುತ್ರಿ ರಾಜೇಶ್ವರಿ(20) ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವಜೋಡಿ.

ಎರಡು ವರ್ಷಗಳಿಂದ ಪ್ರೀತಿಸಿದ್ದ ಜೋಡಿ…

ನವೀನ್‍ಕುಮಾರ್ ಮತ್ತು ರಾಜೇಶ್ವರಿ  ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಇವರ ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದರು. ಈ ನಡುವೆ ವಕೀಲ ಕಣಿವೆ ಯೋಗೇಶ್ ಅವರು ಯುವಕ ಹಾಗೂ ಯುವತಿಯ ಪೋಷಕರೊಂದಿಗೆ ಮಾತುಕತೆ ನಡೆಸಿ ಸಂಧಾನ ಮಾಡಿ ಗುರುವಾರ ಪೋಷಕರ ಸಮ್ಮುಖದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಯುವಕನ ತಂದೆ ಸಿದ್ದರಾಜು, ತಾಯಿ ಮಂಗಳಮ್ಮ, ಯುವತಿಯ ತಂದೆ ನರಸಿಂಹಯ್ಯ, ತಾಯಿ ಕಾಳಮ್ಮ ಸೇರಿದಂತೆ ಹಲವರು ಹಾಜರಿದ್ದರು.

Write A Comment