ಕರ್ನಾಟಕ

ಮಕ್ಕಳಿಗೆ ಮದ್ಯ ಮಾರಿದರೆ 7 ವರ್ಷ ಜೈಲು

Pinterest LinkedIn Tumblr

drinksಬೆಂಗಳೂರು: ಪಬ್‌, ಬಾರ್‌ ಸೇರಿದಂತೆ ಮದ್ಯ ಮಾರಾಟ ಅಂಗಡಿಗಳಲ್ಲಿ ಮಕ್ಕಳಿಗೆ ಮದ್ಯ ಮಾರಾಟ ಮಾಡಿದರೆ 7 ವರ್ಷ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂ. ದಂಡ ವಿಧಿಸಲಾಗುತ್ತದೆ.

ಹೌದು, ಈ ನಿಟ್ಟಿನಲ್ಲಿ ಬಾಲಾಪರಾಧಗಳ ತಡೆ ಕಾಯ್ದೆ-2015ಕ್ಕೆ ತಿದ್ದುಪಡಿ ತರುವ ಮೂಲಕ ಕೇಂದ್ರ ಸರ್ಕಾರ ಮಕ್ಕಳಿಗೆ ಮದ್ಯ ಮಾರಾಟವನ್ನು ಶಿಕ್ಷಾರ್ಹ ಕ್ರಿಮಿನಲ್‌ ಅಪರಾಧ ಎಂದು ಪರಿಗಣಿಸಿದೆ. ಮಕ್ಕಳಿಗೆ ಮದ್ಯ ಮಾರಾಟ ಮಾಡಿದರೆ ಕಠಿಣ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶ ಮಾಡಿಕೊಟ್ಟಿದೆ.

ಮಕ್ಕಳಿಗೆ ಮದ್ಯ ಮಾರಾಟ ಮಾಡುವುದನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಿ ಮಕ್ಕಳಿಗೆ ಮದ್ಯ ಮಾರಾಟ ಮಾಡುವವರಿಗೆ ಶಿಕ್ಷೆ ವಿಧಿಸಲು ಬಾಲಾಪರಾಧ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ರಾಜ್ಯಸಭೆ ಸದಸ್ಯ ರಾಜೀವ್‌ ಚಂದ್ರ ಶೇಖರ್‌ ಮಾಡಿದ್ದ ಮನವಿಯನ್ನು ಪುರಸ್ಕರಿಸಿದ ಕೇಂದ್ರ ಸರ್ಕಾರ, ಬಾಲಾಪರಾಧ ತಡೆ ಕಾಯ್ದೆ- 2015ಕ್ಕೆ ಸೆಕ್ಷನ್‌ 78ನ್ನು ಸೇರಿಸುವ ಮೂಲಕ ಮಕ್ಕಳಿಗೆ ಮದ್ಯ ಸೇರಿದಂತೆ ಅಮಲೇರುವ ಪದಾರ್ಥ ಮಾರಾಟ ಮಾಡುವುದು ಕ್ರಿಮಿನಲ್‌ ಅಪರಾಧ ಎಂದು ಪರಿಗಣಿಸಿದೆ.

ಮಕ್ಕಳಿಗೆ ಮದ್ಯ ಸೇರಿದಂತೆ ಅಮಲೇರುವ ಪದಾರ್ಥ ಮಾರಾಟ ಮಾಡುವವರ ವಿರುದಟಛಿ ಕ್ರಮಕ್ಕೆ ಸಂಬಂಧಿಸಿದಂತೆ ದುರ್ಬಲ ಕಾನೂನು ಮತ್ತು ಅದರ ದುರ್ಬಲ ಜಾರಿಯಿಂದಾಗಿ ತಪ್ಪಿತಸ್ಥ ವ್ಯಕ್ತಿ ಅಥವಾ ಸಂಸ್ಥೆಗಳು ಶಿಕ್ಷೆಯಿಂದ ಪಾರಾಗುತ್ತಿದ್ದರು. ಹೀಗಾಗಿ ಕಾನೂನನ್ನು ಲಘುವಾಗಿ ಪರಿಗಣಿಸುತಿದ್ದರು.

ಬಾಲಾಪರಾಧ ತಡೆ ಕಾಯ್ದೆ-2000ದಲ್ಲಿ ಮಕ್ಕಳಿಗೆ ಅಮಲೇರುವ ಪದಾರ್ಥ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ ಎಂದು ಹೇಳಿತ್ತಾದರೂ ಶಿಕ್ಷೆಯ ಪ್ರಮಾಣ ತೀರಾ ಕಡಿಮೆ ಇತ್ತು. ಈ ಎಲ್ಲಾ ಅಂಶಗಳ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದ ರಾಜೀವ್‌ ಚಂದ್ರಶೇಖರ್‌ ಅವರು, ಅದರೊಂದಿಗೆ ಅಮಲೇರುವ ಪದಾರ್ಥಗಳಲ್ಲಿ ಮದ್ಯವನ್ನೂ ಸೇರಿಸಿ, ಇವುಗಳ ಮಾರಾಟದಲ್ಲಿ ನಿಯಮ ಉಲ್ಲಂಘನೆ ಶಿಕ್ಷಾರ್ಹ ಅಪರಾಧ ಎಂದು ಹೇಳಿರುವ ಕರ್ನಾಟಕ ಅಬಕಾರಿ ಕಾಯ್ದೆ-1965ರ ಬಗ್ಗೆಯೂ ಪ್ರಸ್ತಾಪಿಸಿದ್ದರು.

ಇದೆಲ್ಲವನ್ನೂ ಪರಿಗಣಿಸಿದ ಸರ್ಕಾರ ಬಾಲಾಪರಾಧ ತಡೆ ಕಾಯ್ದೆಗೆ ತಿದ್ದುಪಡಿ ತಂದು ಮಕ್ಕಳಿಗೆ ಮದ್ಯ ಸೇರಿದಂತೆ ಅಮಲೇರುವ ಪದಾರ್ಥ ಮಾರಾಟ ಮಾಡುವವರಿಗೆ ಏಳು ವರ್ಷ ಕಠಿಣ ಶಿಕ್ಷೆ ಮತ್ತು ಒಂದು ಲಕ್ಷ ರೂ. ದಂಡ ವಿಧಿಸುವ ಕ್ರಮಕ್ಕೆ ಅವಕಾಶ ಮಾ ಡಿಕೊಟ್ಟಿದೆ.

ನಿಯಮ ಜಾರಿಯಾಗಲಿ: ಕೇಂದ್ರ ಸರ್ಕಾರದ ಕ್ರಮ ಅಭಿನಂದನಾರ್ಹ. ಆದರೆ, ಮಕ್ಕಳಿಗೆ ಮದ್ಯ ಪೂರೈಕೆ ಮಾಡಿದ ಮದ್ಯದ ಅಂಗಡಿಗಳ ವಿರುದಟಛಿ ಕ್ರಮ ಕೈಗೊಂಡರಷ್ಟೇ ನಮಗೆ ಸಮಾಧಾನ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಪೊಲೀಸರು ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳ ಮೂಲಕ ಈ ನಿಯಮ ಜಾರಿಗೆ ತರಬೇಕು ಎಂದು ರಾಜ್ಯಸಭೆ ಸದಸ್ಯ ರಾಜೀವ್‌ ಚಂದ್ರಶೇಖರ್‌ ತಿಳಿಸಿದ್ದಾರೆ.
-ಉದಯವಾಣಿ

Write A Comment