ಕರ್ನಾಟಕ

ತಂದೆ, ಭಾವನಿಂದಲೇ ಬಾಲಕಿಯ ಮೇಲೆ ಅತ್ಯಾಚಾರ

Pinterest LinkedIn Tumblr

rapr

ಭಟ್ಕಳ: ಸ್ವತಃ ತಂದೆ ಹಾಗೂ ಭಾವನೇ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಘಟನೆ ಭಟ್ಕಳದಲ್ಲಿ ಸಂಭವಿಸಿದೆ.  ಉತ್ತರ ಕನ್ನಡ ಜಿಲ್ಲೆಯ ಮದರಸಾದಿಂದ ಬಾಲಕಿಯರು ನಾಪತ್ತೆಯಾಗಿದ್ದರು. ಅದಕ್ಕೆ ಸಂಬಂಧಿಸಿದಂತೆ ಮಿಸ್ಸಿಂಗ್ ಕೇಸ್ ಅನ್ನು ಪೊಲೀಸರು ದಾಖಲಿಸಿದ್ದರು. ಪೊಲೀಸರು ಬಾಲಕಿಯರಿಗೆ ಹುಡುಕಾಟ ನಡೆಸಿದಾಗ ಬಾಲಕಿಯರು ಗೋವಾಕ್ಕೆ ತೆರಳಿದ್ದು ಪತ್ತೆಯಾಗಿತ್ತು.

ಗೋವಾದಲ್ಲಿದ್ದ ಇಬ್ಬರು ಬಾಲಕಿಯರನ್ನು ಶೋಧಿಸಿ ಪುನಃ ಕರೆತಂದ ಬಳಿಕ ಬಾಲಕಿಯೊಬ್ಬಳು ನೀಡಿದ ಹೇಳಿಕೆಯಿಂದ ದಿಗ್ಭ್ರಾಂತರಾದರು. ಸ್ವತಃ ತನ್ನ ತಂದೆ ಮತ್ತು ಭಾವ ತನ್ನ ಮೇಲೆ ಅಮಾನುಷ ಅತ್ಯಾಚಾರ ನಡೆಸುತ್ತಿದ್ದ ಕೃತ್ಯವನ್ನು ಬಾಲಕಿ ಬಹಿರಂಗ ಮಾಡಿದ್ದಳು. ಈ ಕುರಿತಂತೆ   ತಂದೆ ಮತ್ತು ಭಾವನನ್ನು ಪೊಲೀಸರು ಬಂಧಿಸಿ ಪೋಕ್ಸೊ ಕಾಯ್ದೆಯಡಿ ಕೇಸು ದಾಖಲಿಸಿದ್ದಾರೆ.

ಇವರ ರಾಕ್ಷಸೀ ವರ್ತನೆಯಿಂದ ಬೇಸತ್ತು ತನ್ನ ಗೆಳತಿಯೊಂದಿಗೆ ಗೋವಾಕ್ಕೆ ಪರಾರಿಯಾಗಿದ್ದಾಗಿ ಬಾಲಕಿ ಹೇಳಿದ್ದಳು. ನ.18ರಂದು ಮದರಸಾದಿಂದ   ಪರಾರಿಯಾಗಿದ್ಬಾದ ಬಾಲಕಿಯರು ಗೋವಾಕ್ಕೆ ಹೋಗುವ ಸಂದರ್ಭದಲ್ಲಿ ಕೂಡ  ಇಬ್ಬರು ಯುವಕರು ಅವರ ಫೊಟೋ ತೆಗೆದುಕೊಂಡು ಬೆದರಿಕೆ ಹಾಕಿ  ಅತ್ಯಾಚಾರ ಮಾಡಿದ್ದರೆಂದು ಬಾಲಕಿಯರು ಭಟ್ಕಳ ನ್ಯಾಯಾಧೀಶರ ಎದುರು  ಬಾಯಿಬಿಟ್ಟಿದ್ದಾರೆ.   ಇವರ ಪೈಕಿ ಒಬ್ಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.   ನ.27ರಂದು ಗೋವಾದಲ್ಲಿ ಈ ಬಾಲಕಿಯರು ಪೊಲೀಸರಿಗೆ ಸಿಕ್ಕಿದ್ದರು. ಗೋವಾಗೆ ಹೋಗಲು ನೆರವು ನೀಡಿದ್ದ ಯುವಕನನ್ನು ಕೂಡ ಬಂಧಿಸಲಾಗಿದೆ.

Write A Comment