ಕರ್ನಾಟಕ

ದಾವಣಗೆರೆ : ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಟೈಲರ್

Pinterest LinkedIn Tumblr

raaaದಾವಣಗೆರೆ, ನ.28- ಅಪ್ರಾಪ್ತಬಾಲಕಿಯ ಮೇಲೆ ಟೈಲರ್ ಅತ್ಯಾಚಾರ ನಡೆಸಿರುವ ಘಟನೆ ಬಸವಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಚನ್ನಗಿರಿ ತಾಲೂಕಿನ ರುದ್ರಾಪುರ ಗ್ರಾಮದ ನಿವಾಸಿ ಜಗದೀಶ್‌ನಾಯಕ್ (23) ಅತ್ಯಾಚಾರವೆಸಗಿದ ಕಾಮುಕ. ಈತ ಟೈಲರ್ ಕೆಲಸ ಮಾಡುತ್ತಿದ್ದ. ನಿನ್ನೆ ಟೈಲರ್ ಅಂಗಡಿಗೆ ಬಂದಿದ್ದ ರುದ್ರಾಪುರ ಗ್ರಾಮದ 9ನೇ ತರಗತಿಯ ಅಪ್ರಾಪ್ತ ಬಾಲಕಿ ಮೇಲೆ ಅಂಗಡಿಯಲ್ಲಿ ಅತ್ಯಾಚಾರ ಎಸಗಿದ್ದಾನೆ.

ಬಾಲಕಿ ಪೊಷಕರಿಗೆ ನಡೆದ ವಿಷಯ ತಿಳಿಸಿದಾಗ ಪೊಷಕರು ಬಸವ ಪಟ್ಟಣ ಪೊಲೀಸರಿಗೆ ದುರು ನೀಡಿದ್ದಾರೆ. ನ.17ರಂದು ಮತ್ತೊಬ್ಬ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಬಸವ ಪಟ್ಟಣ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ.

ಪೊಲೀಸರು ಜಗದೀಶ್‌ನಾಯಕನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಬಾಲಕಿಯನ್ನು ರಾಜ್ಯ ಮಹಿಳಾ ನಿಲಯದ ಬಾಲ ಮಂದಿರದಲ್ಲಿ ಇರಿಸಲಾಗಿದೆ.

Write A Comment