ಕರ್ನಾಟಕ

ಟಿವಿ, ಪತ್ರಿಕೆಗಳನ್ನು ದಯವಿಟ್ಟು ಬ್ಯಾನ್ ಮಾಡಿ: ಈಶ್ವರಪ್ಪ ಹೇಳಿಕೆಗೆ ಖಂಡನೆ

Pinterest LinkedIn Tumblr

eshಬೆಂಗಳೂರು: ರಾಜ್ಯದಲ್ಲಿ ಹಾಡಹಗಲೇ ಕೊಲೆಗಳು ನಡೆಯುತ್ತಿವೆ.  ನಾವು ಪತ್ರಿಕೆಗಳನ್ನು ನೋಡಲು ಆಗುತ್ತಿಲ್ಲ. ಟಿವಿಗಳನ್ನು ನೋಡಲು ಆಗುತ್ತಿಲ್ಲ. ಟಿವಿಗಳಲ್ಲಿ , ಪತ್ರಿಕೆಗಳಲ್ಲಿ ರೇಪ್ ಸುದ್ದಿಗಳನ್ನು ಅತಿರೇಕದಲ್ಲಿ ವರದಿ ಮಾಡುತ್ತಿವೆ.  ಆದ್ದರಿಂದ ಟಿವಿಗಳನ್ನು, ಪತ್ರಿಕೆಗಳನ್ನು ಬ್ಯಾನ್ ಮಾಡಿ, ನಾಲ್ಕುವರ್ಷದ ಮಗುವಿನ ಮೇಲೆ ರೇಪ್ ಆಗಿದ್ದನ್ನು ನೋಡಲು ಆಗತ್ತಾ ಎಂದು ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡುತ್ತಿದ್ದ ಈಶ್ವರಪ್ಪ ಗೃಹಸಚಿವ ಪರಮೇಶ್ವರ್‌ಗೆ ಮನವಿ ಮಾಡುತ್ತಾ, ಹಿಗ್ಗಾಮುಗ್ಗಾ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಮನುಷ್ಯರಾದವರು ಯಾರು ಕೂಡ ಇಂತಹ ವರದಿಗಳನ್ನು ಓದಲು, ಟಿವಿಗಳಲ್ಲಿ ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಬೆಳಗಿನ ತಿಂಡಿ, ಊಟದಂತೆ ರೇಪ್ ಸರಾಗವಾಗಿ ನಡೆಯುತ್ತಿದೆ. ಈ ಸುದ್ದಿಗಳನ್ನು ವೈಭವೀಕರಿಸುತ್ತಿರುವ ಮಾಧ್ಯಮಗಳನ್ನು ನಿಷೇಧಿಸಿ ಎಂದು ಈಶ್ವರಪ್ಪ ಮನವಿ ಮಾಡಿದರು.

ಮಾಧ್ಯಮಗಳು ಸಮಾಜದಲ್ಲಿ ನಡೆಯುತ್ತಿರುವ ಕೊಲೆ, ಸುಲಿಗೆ, ಅತ್ಯಾಚಾರದ ಸುದ್ದಿಗಳನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತವೆ. ಇಂತಹ ಮಾಧ್ಯಮಗಳನ್ನು ಈಶ್ವರಪ್ಪ ಅಭಿನಂದಿಸುವ ಬದಲಿಗೆ ಇವುಗಳನ್ನು ಬ್ಯಾನ್ ಮಾಡಿ ಎಂದು ಹೇಳಿಕೆ ನೀಡಿರುವುದು ಖಂಡನೀಯ ಎಂದು ಮಾಧ್ಯಮದವರು ಹೇಳಿದ್ದಾರೆ.

Write A Comment