ಕರ್ನಾಟಕ

ಹೆಚ್ಚಿನ ಅನುದಾನಕ್ಕೆ ಸಿಎಂ ಸಿದ್ದು ಮನವಿ

Pinterest LinkedIn Tumblr

ayogaಬೆಂಗಳೂರು, ಸೆ.23-ಸ್ವಚ್ಛ ಭಾರತ ಆಂಧೋಲನಕ್ಕೆ ಕೇಂದ್ರ ಸರ್ಕಾರ ಇನ್ನೂ ಹೆಚ್ಚಿನ ಅನುದಾನ ನೀಡಬೇಕು ಹಾಗೂ ರಾಜ್ಯಮಟ್ಟದಲ್ಲಿ ತಂತ್ರಜ್ಞಾನದ ಮಾಹಿತಿ ನೀಡಲು ಪ್ರತ್ಯೇಕ ಕೇಂದ್ರ ಸ್ಥಾಪಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

ನವದೆಹಲಿಯಲ್ಲಿಂದು ನಡೆದ ಸ್ವಚ್ಛಭಾರತ ಅಭಿಯಾನದ ಮೂರನೇ ಹಾಗೂ ಅಂತಿಮ ಸುತ್ತಿನ ಉಪ ಸಮಿತಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಸಮುದಾಯ ಶೌಚಾಲಯಗಳಿಗೆ ಭರಿಸುವ ವೆಚ್ಚವನ್ನು 20 ಲಕ್ಷಕ್ಕೂ ಹೆಚ್ಚಿಸಬೇಕು. ಗ್ರಾಮೀಣ ಶೌಚಾಲಯಗಳ ನಿರ್ಮಾಣದ ಅನುದಾನದಲ್ಲಿ ಶೇ.90ರಷ್ಟು ರಿಯಾಯಿತಿ ನೀಡಬೇಕು. ಶಾಲೆಗಳ ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕೆ ಒತ್ತು ನೀಡಬೇಕು.  ಸ್

ವಚ್ಛತಾ ಜಾಗೃತಿ ಆಂಧೋಲನಕ್ಕೆ ಹೆಚ್ಚು ಸಿಬ್ಬಂದಿ ನಿಯೋಜಿಸಬೇಕು. ರಾಜ್ಯದಲ್ಲಿ ಸ್ವಚ್ಛತೆಗಾಗಿ ಕೋಶ ಸ್ಥಾಪಿಸಬೇಕು. ತಾಂತ್ರಿಕ ನೆರವು ವಿಸ್ತರಣೆ ಹಾಗೂ ನೈರ್ಮಲ್ಯ ಟೆಕ್ನಾಲಜಿ ಪಾರ್ಕ್ ಸ್ಥಾಪಿಸಬೇಕು ಎಂಬುದೂ ಸೇರಿದಂತೆ  20ಕ್ಕೂ ಹೆಚ್ಚು ಸಲಹೆಗಳನ್ನು ಇಂದು ನಡೆದ ಸಭೆಯಲ್ಲಿ ಸಿದ್ದರಾಮಯ್ಯ ನೀಡಿದರು.

ಆಂಧ್ರ ಮುಖ್ಯಮಂತ್ರಿ ಚಂದ್ರಬಾಬುನಾಯ್ಡು ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರದ ಸ್ವಚ್ಛತಾ ಉಪಸಮಿತಿ ಸಭೆಯಲ್ಲಿ ವಿವಿಧ ರಾಜ್ಯದ ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದರು.

Write A Comment