ಕರ್ನಾಟಕ

ಅ.6 ರಿಂದ ಹಾವೇರಿಯಲ್ಲಿ ಸೇನಾ ನೇಮಕಾತಿ ರ್ಯಾಲಿ

Pinterest LinkedIn Tumblr

sene ಉಡುಪಿ, ಬೆಂಗಳೂರಿನ ಸೇನಾ ನೇಮಕಾತಿ ಮುಖ್ಯ ಕಾರ್ಯಾಲಯದ ಆಶ್ರಯದಲ್ಲಿ ಮಂಗಳೂರಿನ ಸೇನಾ ನೇಮಕಾತಿ ಕಚೇರಿಯ ವತಿಯಿಂದ ಅಕ್ಟೋಬರ್ 6 ರಿಂದ 9ರವರೆಗೆ ಸೇನಾ ನೇಮಕಾತಿ ರ್ಯಾಲಿ ಹಾವೇರಿಯ ನೆಹರು ಸ್ಟೇಡಿಯಂನಲ್ಲಿ ನಡೆಯಲಿದೆ.

ಆಸಕ್ತ ಅಭ್ಯರ್ಥಿಗಳು  www.joinindianarmy.nic.inನಲ್ಲಿ ಆನ್‍ಲೈನ್ ಮೂಲಕ ನೋಂದಣಿ ಮಾಡಬಹುದಾಗಿದೆ. ಪುರುಷ ಅಭ್ಯರ್ಥಿಗಳಿಗೆ ಸಿಪಾಯಿ ಕ್ಲಾರ್ಕ್ / ಎಸ್.ಕೆ.ಟಿ., ಸಿಪಾಯಿ ಜಿಡಿ, ಸಿಪಾಯಿ ಟೆಕ್ನಿಕಲ್ಸ್, ಮಾಜಿ ಸೈನಿಕರು (ಸೇನೆ) ಮತ್ತು ಡಿ.ಎಸ್.ಸಿ ಹುದ್ದೆಗೆ ರ್ಯಾಲಿ ಜರುಗಲಿದೆ.

ಅಭ್ಯರ್ಥಿಗಳು ಒಂದು ದಿನ ಮುಂಚಿತವಾಗಿ ಹಾಜರಿದ್ದು, ಸಮಯಕ್ಕೆ ಸರಿಯಾಗಿ ರ್ಯಾಲಿ ನಡೆಯುವ ಗ್ರೌಂಡ್‍ನಲ್ಲಿ ವರದಿ ಮಾಡಿ, ಬೆಳಗ್ಗೆ 8 ಗಂಟೆಗೆ ತಮ್ಮ ಟೋಕನ್‍ಗಳನ್ನು ಪಡೆಯಬೇಕು.

Write A Comment