ಕರ್ನಾಟಕ

ದಸರಾ ಆನೆಗಳಿಗೆ ತಾಲೀಮು

Pinterest LinkedIn Tumblr

2AANEಮೈಸೂರು, ಸೆ.21: ದಸರೆಯಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಆಗಮಿಸಿರುವ ಗಜಪಡೆಗೆ ಭಾರ ಹೊರುವ ತಾಲೀಮು ಆರಂಭಗೊಂಡಿದೆ.

ವಿಜಯದಶಮಿ ಮೆರವಣಿಗೆಯಲ್ಲಿ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊರುವ ಅರ್ಜುನ ಆನೆಗೆ ಸೋಮವಾರ 500 ಕೆ.ಜಿ. ತೂಕದ ಭಾರವನ್ನು ಹೇರು ತಾಲೀಮು ನಡೆಸಲಾಯಿತು. ಇದಕ್ಕು ಮುನ್ನ ಗಜಪಡೆಗೆ ಪೂಜೆ ಸಲ್ಲಿಸಲಾಯಿತು. ನಂತರ 300 ಕೆ.ಜಿ. ಮರಳು, 200 ಕಬ್ಬಿಣದ ತೊಟ್ಟಿಲು, ಗಾಲಿ, ಚಾಪ್, ನಮ್ದ್ ಸೇರಿದಂತೆ 500 ಕೆ.ಜಿ. ಭಾರವನ್ನು ಹೊರಿಸಲಾಯಿತು.

ಮೊದಲ ದಿನ ಅರಮನೆಯಿಂದ ಆಯುರ್ವೇದ ಆಸ್ಪತ್ರೆ ವೃತ್ತದವರೆಗೂ ತಾಲೀಮು ನಡೆಸಿ ಅರಮನೆಗೆ ಕರೆತರಲಾಯಿತು. ಮುಂದಿನ ದಿನಗಳಲ್ಲಿ ಆನೆ ಅಭಿಮನ್ಯು, ವಿಕ್ರಮನಿಗೂ ಬಾರ ಹೊರುವ ತಾಲೀಮು ನಡೆಸಲಾಗುವುದು. ಈ ಕುರಿತು ಮಾತನಾಡಿದ ಅರಣ್ಯಾಧಿಕಾರಿ ಕಮಲ ಕರಿಕಾಳನ್, ಚಿನ್ನದ ಅಂಬಾರಿ ಹೊರುವ ಅರ್ಜುನನಿಗೆ ಭಾರ ಹೊರುವ ತಾಲೀಮಿನ ಜೊತೆಗೆ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಅಭಿಮನ್ಯು ಮತ್ತು ವಿಕ್ರಮನನ್ನು ಸಜ್ಜುಗೊಳಿಸುವ ಉದ್ದೇಶದಿಂದ ಇವುಗಳಿಗೂ ಭಾರ ಹೊರುವ ತಾಲೀಮು ನಡೆಸಲಾಗುವುದು ಎಂದು ತಿಳಿಸಿದರು.

ಆನೆಗಳ ಆರೋಗ್ಯದ ಜವಾಬ್ದಾರಿ ಹೊತ್ತ ಡಾ.ನಾಗರಾಜ್ ಮಾತನಾಡಿ, ಎಲ್ಲ ಆನೆಗಳು ಆರೋಗ್ಯದಿಂದಿದ್ದು, ತಾಲೀಮು ಸುಲಲಿತವಾಗಿ ನಡೆಯುತ್ತಿದೆ. ಆನೆಗಳೂ ಸಹ ಸ್ಪಂದಿಸುತ್ತಿವೆ ಎಂದು ತಿಳಿಸಿದರು.

Write A Comment