ಕರ್ನಾಟಕ

ಶಿಕ್ಷಣ ಸಂಸ್ಥೆಗಳಿಂದ 1.43 ಕೋಟಿ ರೂ. ತೆರಿಗೆ ಬಾಕಿ: ಶಾಲೆಗಳಿಗೆ ಸವಲತ್ತು ಕಡಿತ; ಕ್ರಮಕ್ಕೆ ತುಮಕೂರು ನಗರಪಾಲಿಕೆ ಶಿಫಾರಸು

Pinterest LinkedIn Tumblr

1TERIGEತುಮಕೂರು, ಸೆ.21: ಗುಣಮಟ್ಟದ ಶಿಕ್ಷಣದ ಹೆಸರಿನಲ್ಲಿ ವಿದ್ಯಾರ್ಥಿಗಳು ಮತ್ತು ಅವರ ಪೋಷಕರನ್ನು ಶೋಷಣೆಗೆ ಒಳಪಡಿಸುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ತುಮಕೂರು ನಗರಪಾಲಿಕೆಗೆ ಕಳೆದ 10 ವರ್ಷಗಳಿಗೂ ಹೆಚ್ಚು ಕಾಲದಿಂದ 1.50ಕೋಟಿಗೂ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವುದು ಪಾಲಿಕೆಯ ಸಭೆಯಲ್ಲಿ ಚರ್ಚೆಗೆ ಗ್ರಾಸವಾಯಿತು.
ನಗರಪಾಲಿಕೆ ತೆರಿಗೆ, ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ನಾಗೇಶ್ ಸೋಮವಾರ ತೆರಿಗೆ ಬಾಕಿ ಉಳಿಸಿಕೊಂಡಿರುವ ಶಿಕ್ಷಣ ಸಂಸ್ಥೆಗಳ ಪಟ್ಟಿಯನ್ನು ಬಿಡುಗಡೆ ಮಾಡಿ ಸಭೆಯ ಗಮನಸೆಳೆದರು.
ುಮಕೂರು ನಗರದಲ್ಲಿ 150ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಿದ್ದು, ಬೆರಳೆಣಿಕೆ ಯಷ್ಟು ಶಿಕ್ಷಣ ಸಂಸ್ಥೆಗಳು ಮಾತ್ರ ಕಟ್ಟಡ ತೆರಿಗೆಯನು್ನ ಪಾವತಿಸಿದ್ದರೆ, ಪ್ರತಿಷ್ಠಿತ ಸಂಸ್ಥೆ ಗಳೆಂದು ಕರೆಯಿಸಿಕೊಳ್ಳುವ ಅನೇಕ ವಿದ್ಯಾಸಂಸ್ಥೆ ಗಳು ಕಳೆದ 10 ವರ್ಷಗಳಿಂದಲೂ ತೆರಿಗೆ ಬಾಕಿ ಉಳಿಸಿಕೊಂಡಿ ರುವುದು ಅಂಕಿ ಅಂಶಗಳಿಂದ ಗೋಚರವಾಗುತ್ತಿದೆ.
ನಗರಪಾಲಿಕೆ ವ್ಯಾಪ್ತಿಯಲ್ಲಿರುವ ಅಂದಾಜು 150 ಶಿಕ್ಷಣ ಸಂಸ್ಥೆಗಳಿಂದ ಕಟ್ಟಡ ತೆರಿಗೆಯಾಗಿ ಇದುವರೆಗೂ 1,73,13,772 ರೂ. ಬರಬೇಕಾಗಿದ್ದು, ಇದುವರೆಗೂ ಕೇವಲ 30,64,737 ರೂ.ಗಳು ಮಾತ್ರ ವಸೂಲಿಯಾಗಿದ್ದು, 1,42,49,035 ರೂ. ಬಾಕಿ
ಬರಬೇಕಾಗಿದೆ. ಇದರಲ್ಲಿ ಕೆಲವು ಶಿಕ್ಷಣ ಸಂಸ್ಥೆಗಳು ಕಳೆದ 10 ವರ್ಷಗಳಿಂದಲೂ ಲಕ್ಷಾಂತರ ರೂ. ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಕೆಲವು ಶಿಕ್ಷಣ ಸಂಸ್ಥೆಗಳು ಒಂದೆರಡು ವರ್ಷದ ತೆರಿಗೆಯನ್ನು ಬಾಕಿ ನಿಲ್ಲಿಸಿವೆ. ಒಂದೆರಡು ವಿದ್ಯಾ ಸಂಸ್ಥೆಗಳು ಹತ್ತಾರು ಎಕರೆಯಲ್ಲಿ ಕಟ್ಟಡ ಕಟ್ಟಿಕೊಂಡು ಎಂಜಿನಿಯರಿಂಗ್, ಮೆಡಿಕಲ್, ಪದವಿ, ಪದವಿಪೂರ್ವ, ಸ್ನಾತಕೋತ್ತರ ಕೇಂದ್ರಗಳನ್ನು ನಡೆಸುತ್ತಿದ್ದರೂ ಕಟ್ಟಡವನ್ನು ಅಳತೆ ಮಾಡಿಸಿ ಅದರ ವಿಸ್ತೀರ್ಣದ ಲೆಕ್ಕ ನೀಡದೆ, ಕಟ್ಟಡ ತೆರಿಗೆ ಕಟ್ಟದೆ ನಿರ್ಲಕ್ಷ ಭಾವನೆ ತೋರಿರುವುದು ವಿಪರ್ಯಾಸವೆನಿಸಿದೆ.
ಸೋಮವಾರ ನಡೆದ ನಗರಪಾಲಿಕೆ ನಡೆದ ಸಾಮಾನ್ಯ ಸಭೆಯಲ್ಲಿ ವಾರ್ಡು ವಹಿ ಬಾಕಿ ಉಳಿಸಿ ಕೊಂಡಿರುವ ಶಿಕ್ಷಣ ಸಂಸ್ಥೆಗಳ ಪಟ್ಟಿ ಬಿಡುಗಡೆ ಮಾಡಿದೆ. ಕಳೆದ ಹತ್ತು ವರ್ಷಗಳಲ್ಲಿ ಹಲವಾರು ನೋಟಿಷ್‌ಗಳನ್ನು ಜಾರಿ ಮಾಡಿದ್ದರೂ ಸಹ ಕೆಲ ಶಿಕ್ಷಣ ಸಂಸ್ಥೆಗಳು ನಾಮ್‌ಕಾವಸ್ಥೆಗೆ ಒಂದಿಷ್ಟು ತೆರಿಗೆ ಪಾವತಿಸಿದರೆ ಕೆಲವು ಶಿಕ್ಷಣ ಸಂಸ್ಥೆಗಳು 2004-05 ರಿಂದ ಇಂದಿನವರಗೆ ತೆರಿಗೆ ಪಾವತಿಸಿಲ್ಲ. ಸರಿಯಾದ ಸಮಯಕ್ಕೆ ತೆರಿಗೆ ಪಾವತಿಸಿದರೆ ನಾಗರಿಕರಿಗೆ ಸೌಲಭ್ಯ ಒದಗಿಸಲು ಸಾಧ್ಯ. ಇಲ್ಲವಾದಲ್ಲಿ ಈ ಶಿಕ್ಷಣ ಸಂಸ್ಥೆಗಳಿಗೆ ನಗರಪಾಲಿಕೆ ವತಿಯಿಂದ ನೀಡುತ್ತಿರುವ ಸೌಲಭ್ಯವನ್ನು ಕಡಿತಗೊಳಿಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ನಾಗೇಶ್ ವ್ಯಕ್ತಪಡಿಸಿದರು.
ಶಿಕ್ಷಣ ಸಂಸ್ಥೆಗಳು ಎಚ್ಚೆತ್ತುಕೊಂಡು ಬಾಕಿ ಇರುವ ತೆರಿಗೆಯನ್ನು ಕಟ್ಟಬೇಕು ಎಂಬ ಉದ್ದೇಶದಿಂದ ಪಟ್ಟಿ ಬಿಡುಗಡೆ ಮಾಡಲಾಗಿದೆ. ಒಂದುವೇಳೆ ತೆರಿಗೆ ಕಟ್ಟದಿದ್ದಲ್ಲಿ ಮುಂದಿನ ದಿನಗಳಲ್ಲಿ ಪಾಲಿಕೆ ವತಿಯಿಂದ ಕರ್ನಾಟಕ ಪೌರಾಡಳಿತ ನಿಯಮ 1979ರ ಅನ್ವಯ ಕ್ರಮಕೈಗೊಳ್ಳಲು ಪಾಲಿಕೆ ಮುಂದಾಗಲಿದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷರು ಸ್ಪಷ್ಟಪಡಿಸಿದರು.

ತೆರಿಗೆ ಬಾಕಿ ಇರಿಸಿರುವ ವಿದ್ಯಾಸಂಸ್ಥೆಗಳ ವಿವರ

ಅನಿಕೇತನ ವಿದ್ಯಾಮಂದಿರ ನಾಗಣ್ಣನ ಪಾಳ್ಯ-1,26,654 ರೂ.

ಎಚ್.ಎಂ.ಎಸ್. ವಿದ್ಯಾಸಂಸ್ಥೆ-1,19,723 ರೂ. ಹಿಂದೂಸ್ಥಾನ ಆಂಗ್ಲಮಾಧ್ಯಮ ಶಾಲೆ, ಶಿರಾಗೇಟ್-1,17.081 ರೂ.
ಆರ್ಯನ್ ಪ್ರೌಢಶಾಲೆ, ಚಿಕ್ಕಪೇಟೆ-1,78,210ರೂ.
ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆ ವಿನೋಬನಗರ-3,65,714 ರೂ.
ದಿವ್ಯಾ ಶಿಕ್ಷಣ ಸಂಸ್ಥೆ-5,32,363ರೂ.
ಇಂದಿರಾ ಕಾಲೇಜ್‌ನಿಂದ-1,51,361 ರೂ.
ಹಝರತ್ ಮದರಸಾ ಕೈಗಾರಿಕಾ ತರಬೇತಿ ಕೇಂದ್ರ-2,36,624 ರೂ.

ಬಾಪೂಜಿ ಸ್ಕೂಲ್-2,17,172 ರೂ., ಸಿದ್ದಗಂಗಾ ಹೈಸ್ಕೂಲ್-3,08,116 ರೂ.
ಜೆಪಿ ಪ್ರೈಮರಿ ಸ್ಕೂಲ್-3,53,843 ರೂ.
ಸಿದ್ದಗಂಗಾ ಬಿಇಡಿ ಕಾಲೇಜು-3,08,116 ರೂ.
ಸಿದ್ದಗಂಗಾ ಪಿಯು ಕಾಲೇಜು-2,35,009 ರೂ.

ಸಿದ್ದಗಂಗಾ ಡಿಎಡಿ ಕಾಲೇಜು 1.92,009 ರೂ. ಸಿದ್ದಗಂಗಾ ಎಲಿಮೆಂಟರಿ ಶಾಲೆ-1,34,535 ರೂ.
ಮಾತಾ ಪಬ್ಲಿಕ್ ಶಾಲೆ-1,05,057 ರೂ.
ಕೃಷಿಕ ಫೌಂಡೇಷನ್-2,38,004 ರೂ.,
ಮಾನಸ ಹಿಂದಿ ಬಿಇಡಿ ಕಾಲೇಜು-1,22,797 ರೂ.

ಸೇಕ್ರೆಡ್ ಹಾರ್ಟ್ ಕಾಲೇಜು ಉಪ್ಪಾರಹಳ್ಳಿ- 2,36,895 ರೂ., ಸುಭಾಷ್ ಮೆಮೋರಿಯಲ್ ಸ್ಕೂಲ್-
1,84,102 ರೂ., ಪ್ರಗತಿ ವಿದ್ಯಾಮಂದಿರ-1,12,833 ರೂ.
ಮಾರುತಿ ಆಂಗ್ಲ ಮಾಧ್ಯಮ ಶಾಲೆ-7,89,000 ರೂ.
ವಾಸವಿ ಹೈಸ್ಕೂಲ್-6,75,239 ರೂ.
ಡಾಫ ಡಿಲ್ಸ್ ಆಂಗ್ಲ ಮಾಧ್ಯಮ ಸ್ಕೂಲ್-2,56,903 ರೂ.
ವಿದ್ಯಾಸಾಗರ ಕಾಲೇಜು-1,11,296 ರೂ.
ಮಹೇಶ್ ಕಾಲೇಜು-2,72,000 ರೂ.
ಸೈಂಟ್ ಮೋಸಸ್ ಸ್ಕೂಲ್-1,44,953 ರೂ.
ಚೈತನ್ಯ ಆಂಗ್ಲ ಶಾಲೆ-2,07,325 ರೂ,
ಎಚ್.ಎಂ.ಎಸ್.ಕಾಲೇಜು-3,95,808 ರೂ.
ನಳಂದ ಕಾನ್ವೆಂಟ್-2,47,2715 ರೂ.
ವರದರಾಜು ಚಾರಿಟೇಬಲ್ ಟ್ರಸ್ಟ್-2,23,768 ರೂ.
ಚೇತನ ಸ್ಕೂಲ್ ಬಟವಾಡಿ-1,48,038 ರೂ.
ಶ್ರೀಕೃಷ್ಣ ಕಾಲೇಜು-2,46,916 ರೂ.
ಕುಂಚಟಿಗರ ವಿದ್ಯಾಸಂಘ-1,01,651ರೂ.
ಮೇರಿ ಇಮ್ಯುನುಕಲ್ ಸೈಂಟ್ ಮೇರಿ ಸ್ಕೂಲ್-1,66,856 ರೂ.
ದೇವರಾಯಪಟ್ಟಣ ವಿದ್ಯಾಸಂಸ್ಥೆ-1,56,810 ರೂ.
ಸಿದ್ದಗಂಗಾ ಪಾಲಿಟೆಕ್ನಿಕ್ ಕಾಲೇಜು, ಬಟವಾಡಿ-4,39,742 ರೂ.
ಒಟ್ಟು ವಿದ್ಯಾಸಂಸ್ಥೆಗಳಿಂದ ಪಾಲಿಕೆಗೆ 1.42 ಕೋಟಿ ರೂ.ಗೂ ಹೆಚ್ಚಿನ ತೆರಿಗೆ ಬಾಕಿ ಬರಬೇಕಾಗಿದೆ.

Write A Comment