ಬೆಂಗಳೂರು,ಸೆ.21: ಕೆಲಸವೇಳೆ ಕಿರುಕುಳ ನೀಡುತ್ತಿದ್ದನೆಂದು ಜೊತೆ ಕೆಲಸಗಾರನನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಹೆಣ್ಣೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೊಲ್ಕತ್ತಾ ಜಿಲ್ಲೆ ಉತ್ತೂರ್ ಮಲ್ದುಂಗ್ ಗ್ರಾಮದ ಅನಂತು(38) ಕೊಲೆಯಾದ ನತದೃಷ್ಟ. ಕೊಲ್ಕತ್ತಾದ ಬಚ್ಚಾರ್ ಗ್ರಾಮದವನಾದ ಪಾರ್ಶ್ವನಾಥ್ ಮಜುಂದಾರ್(35) ಜೊತೆ ಕೆಲಸಗಾರನನ್ನು ಹತ್ಯೆ ಮಾಡಿದ ಆರೋಪಿ. ಹೆಣ್ಣೂರು ಸಮೀಪದ ರಾಜಣ್ಣಲೇಔಟ್ನ ಶಿಲ್ಪಬೇಕರಿ ಬಳಿ ಅಪಾರ್ಟ್ಮೆಂಟ್ವೊಂದು ನಿರ್ಮಾಣವಾಗುತ್ತಿದ್ದು, ಇಲ್ಲಿ ಅನಂತು ಮತ್ತು ಪಾರ್ಶ್ವನಾಥ್ಗೆ ಕಿರಿಕಿರಿ ಉಂಟುಮಾಡುತ್ತಿದ್ದ ಎನ್ನಲಾಗಿದೆ.
ರಾತ್ರಿಯೂ ಕೆಲಸ ಮಾಡಿದ್ದು, 12 ಗಂಟೆ ಸುಮಾರಿನಲ್ಲಿ ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿದೆ. ಜಗಳದ ಒಂದು ಹಂತದಲ್ಲಿ ಪಾರ್ಶ್ವನಾಥ್ ದೊಣ್ಣೆಯಿಂದ ಅನಂತುಗೆ ಹೊಡೆದಿದ್ದಾನೆ. ಪೆಟ್ಟಿನಿಂದ ಅನಂತು ಕುಸಿದು ಬಿದ್ದಿದ್ದು, ಕೂಡಲೇ ಆತನನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಅಂಬೇಡ್ಕರ್ ಆಸ್ಪತ್ರೆಯಲ್ಲಿ ಇಡಲಾಗಿದೆ. ಹೆಣ್ಣೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.