ಕರ್ನಾಟಕ

ಮಹಿಳೆಯರ ಸರ ಅಪಹರಿಸುತ್ತಿದ್ದ ಖತರ್ನಾಕ್ ಇರಾನಿ ಗ್ಯಾಂಗ್ ಸೆರೆ

Pinterest LinkedIn Tumblr

ira

ಬೆಂಗಳೂರು, ಸೆ.21: ಮನೆ ಮುಂದೆ ಹಾಗೂ ರಸ್ತೆಯಲ್ಲಿ ಒಂಟಿಯಾಗಿ ಓಡಾಡುವ ಮಹಿಳೆಯರ ಸರ ಅಪಹರಿಸಿ ಕ್ಷಣಾರ್ಧದಲ್ಲಿ ಪರಾರಿಯಾಗುತ್ತಿದ್ದ ಇರಾನಿ ತಂಡದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿ 41 ಪ್ರಕರಣಗಳಿಗೆ ಸಂಬಂಧಿಸಿದ 60 ಲಕ್ಷ ರೂ. ಮೌಲ್ಯದ 2 ಕೆಜಿ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಧಾರವಾಡದ ಅಬುಜರ್ ಅಲಿ ಅಲಿಯಾಸ್ ಅಬುಜರ್ (26), ಅಬುಲ್‌ಹಸನ್ ಅಲಿಯಾಸ್ ಹಸನ್ (23) ಮತ್ತು ಹಾಸನ ಜಿಲ್ಲೆ ಹೊಳೆನರಸೀಪುರದ ಗಿರೀಶ್ ರಾಜೇಗೌಡ ಅಲಿಯಾಸ್ ಬಾಂಬೆ ಗಿರೀಶ್ (38) ಬಂಧಿತರು. ಇವರ ಬಂಧನದಿಂದ 2013ರಿಂದ 2015ರ ವರೆಗೆ ನಗರದಲ್ಲಿ ನಡೆದ 41 ಸರ ಅಪಹರಣ ಪ್ರಕರಣಗಳು ಬೆಳಕಿಗೆ ಬಂದಿವೆ.

ಬಂಧಿತರು ಜ್ಞಾನಭಾರತಿ-6, ವಿಜಯನಗರ-5, ಕಾಮಾಕ್ಷಿಪಾಳ್ಯ-3, ಚಂದ್ರಾಲೇಔಟ್-3, ಸಿ.ಕೆ. ಅಚ್ಚುಕಟ್ಟು-3, ಎಚ್‌ಎಎಲ್-2, ಕೆಂಗೇರಿ-2, ಕುಮಾರ ಸ್ವಾಮಿ ಲೇಔಟ್-2, ಕೊಡಿಗೇಹಳ್ಳಿ-2, ಮಹದೇವಪುರ-2, ಸುಬ್ರಮಣ್ಯಪುರ-2, ಯಲಹಂಕ-2, ಬನಶಂಕರಿ, ಗಿರಿನಗರ, ಕೆ.ಜಿ.ನಗರ, ಸಂಜಯ್‌ನಗರ, ವಿದ್ಯಾರಣ್ಯಪುರ, ಆರ್.ಆರ್.ನಗರ ಠಾಣೆ ವ್ಯಾಪ್ತಿಗಳಲ್ಲಿನ ಪ್ರಕರಣಗಳಲ್ಲಿ ಬಂಧಿತರು ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರಿಂದ 41 ಪ್ರಕರಣಗಳಲ್ಲಿ ಕಳವು ಮಾಡಿದ್ದ ಸುಮಾರು 60 ಲಕ್ಷ ರೂ. ಬೆಲೆಯ 2 ಕೆಜಿ ಚಿನ್ನಾಭರಣಗಳನ್ನು ಹಾಗೂ ಕೃತ್ಯಕ್ಕೆ ಬಳಸುತ್ತಿbದ್ದ ಕಪ್ಪು ಬಣ್ಣದ ಬಜಾಜ್ ಪಲ್ಸರ್ ಮೋಟಾರ್ ಸೈಕಲ್ಲನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಅಬುಜರ್ ಅಲಿ ಈ ಹಿಂದೆ 2010ರಲ್ಲಿ ಬೆಂಗಳೂರು ನಗರ ಪೊಲೀಸರಿಂದ ಬಂಧಿತನಾಗಿದ್ದು, ಆ ಸಮಯದಲ್ಲಿ 68 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

Write A Comment