ಕರ್ನಾಟಕ

ಮಹದಾಯಿ ಯೋಜನೆ; ಪ್ರಧಾನಿ ಬಳಿ ಮತ್ತೊಮೆ ನಿಯೋಗಕ್ಕೆ ಬಿಜೆಪಿ ಚಿಂತನೆ: ಕುಡಿಯುವ ನೀರಿನ ವಿಚಾರದಲ್ಲಿ ರಾಜಕೀಯ ಸಲ್ಲ; ಸದಾನಂದ ಗೌಡ

Pinterest LinkedIn Tumblr

1GAWDAತುಮಕೂರು, ಸೆ.19: ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಎಲ್ಲ ಭಾಗಗಳಿಗೂ ಕುಡಿಯುವ ನೀರು ಒದಗಿಸುವುದು ಬಿಜೆಪಿ ಪಕ್ಷದ ಆದ್ಯ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ರಾಜಕೀಯ ಒಳ್ಳೆಯದಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಕಾನೂನು ಮಂತ್ರಿ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.

ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ಮತ್ತು ಎತ್ತಿನಹೊಳೆ ಯೋಜನೆಯನ್ನು ಅನುಷ್ಠಾನ ಗೊಳಿಸಲು ಕೇಂದ್ರ ಸರಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಪಕ್ಷದ ವತಿಯಿಂದ ರಾಜ್ಯ ನೀರಾವರಿ ಸಚಿರಿಗೆ ಈಗಾಗಲೇ ಪತ್ರ ಬರೆದು ಎಲ್ಲ ವಿರೋಧ ಪಕ್ಷಗಳ ಮುಖಂಡರ ಸಭೆ ಕರೆಯಲು ಮನವಿ ಮಾಡಲಾಗಿದೆ. ಅವರು ಯಾವ ದಿನ ಸಭೆ ಆಯೋಜಿಸುತ್ತಾರೋ ಅಂತಹ ದಿನ ನಮ್ಮ ನಿಲುವನ್ನು ನಾವು ಸ್ಪಷ್ಟಪಡಿಸಲಿದ್ದೇವೆ. ಅಲ್ಲದೆ, ಬಿಜೆಪಿಯ ನಾಲ್ವರು ಕೇಂದ್ರ ಸಚಿವರು, ಎಲ್ಲ ಸಂಸದರು, ಶಾಸಕರು ಹಾಗೂ ಮುಖಂಡರು ಪ್ರಧಾನಿಗಳನ್ನು ಮತ್ತೊಮ್ಮೆ ಭೇಟಿ ಮಾಡಿ ಮನವೊಲಿಸುವ ಕೆಲಸ ಮಾಡಲಾಗುವುದು ಎಂದರು.
ಮಹದಾಯಿ ಯೋಜನೆ ಬಗ್ಗೆ ಪ್ರಧಾನಿಗಳು ಸಕಾರಾತ್ಮಕ ನಿಲುವನ್ನೇ ತಾಳಿದ್ದಾರೆ. ಮೊದಲಿಗೆ ನ್ಯಾಯಾಲಯಕ್ಕೆ ಹೋಗಿರುವ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಕಾಂಗ್ರೆಸ್ ಮುಖಂಡರ ಮನವೊಲಿಸಿ ಎಂಬುವುದು ಅವರ ನಿಲುವಾಗಿದೆ. ನ್ಯಾಯಾಲಯದ ಮೆಟ್ಟಿಲು ಹತ್ತಿದವರನ್ನು ಮೊದಲು ಸಮಾಧಾನ ಪಡಿಸಬೇಕಿದೆ. ಈ ಕೆಲಸವನ್ನು ಕಾಂಗ್ರೆಸ್‌ನ ಹಿರಿಯ ಮುಖಂಡರು ಮಾಡಬೇಕಿದ್ದು, ಅದನ್ನು ಬಿಟ್ಟು ಪ್ರಧಾನಿಯವರ ಮೇಲೆ ಗೂಬೆ ಕೂರಿಸುವುದು ಸರಿಯಲ್ಲವೆಂದು ಸಚಿವರು ನುಡಿದರು.

ಕುಡಿಯುವ ನೀರು ಎಲ್ಲರಿಗೂ ದೊರೆಯಬೇಕು ಎಂಬುದು ಬಿಜೆಪಿಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಮಹದಾಯಿ ಹೋರಾಟಗಾರರ ಪರವಾಗಿ ನಿಲ್ಲಲ್ಲು ಮುಂದಾಗಿದೆ. ಆದರೆ, ಇದು ರಾಜಕೀಯ ಮಾಡುವ ವಿಚಾರವಲ್ಲ. ಆದ್ದರಿಂದ ಪ್ರತಿಯೊಬ್ಬರು ಎಚ್ಚರಿಕೆಯಿಂದ ನಡೆಯಬೇಕಿದೆ.ಅಲ್ಲದೆ, ಕಾನೂನಾತ್ಮಕ ಹೋರಾಟದ ಜೊತೆಗೆ, ರಾಜಿ ಸೂತ್ರದ ಮೂಲಕವೂ ಯೋಜನೆ ಮುನ್ನೆಡೆಯಲು ಕ್ರಮ ಕೈಗೊಳ್ಳಬೇಕಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದರು. ಈ ವೇಳೆ ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಮತ್ತಿತರರ ಮುಖಂಡರು ಉಪಸ್ಥಿತರಿದ್ದರು.

ಎತ್ತಿನ ಹೊಳೆಯಿಂದ ದಕ್ಷಿಣಕನ್ನಡಕ್ಕೆ ತೊಂದರೆಯಿಲ್ಲ

ಎತ್ತಿನ ಹೊಳೆ ಯೋಜನೆಯ ಅನುಷ್ಠಾನದಿಂದ ದಕ್ಷಿಣ ಕನ್ನಡದ ಜನಜೀವನ, ಆಹಾರಕ್ಕೆ ಯಾವುದೇ ತೊಂದರೆಯಿಲ್ಲ. ಆ ಭಾಗದ ಸಮುದ್ರ ಮಟ್ಟಕ್ಕಿಂತ 1,813 ಮೀಟರ್ ಎತ್ತರದಲ್ಲಿ ಬಿಳುವ ಮಳೆ ನೀರನ್ನು ಮಳೆಗಾಲದ 3 ತಿಂಗಳ ಕಾಲ ಸಂಗ್ರಹಿಸಿ ಬಯಲು ಸೀಮೆಗೆ ಹರಿಸಲಾಗುತ್ತಿದೆ. ಇದರಿಂದ ಮೀನಿನ ಉತ್ಪಾದನೆ, ಅವರ ಆರ್ಥಿಕ ವಹಿವಾಟಿನ ಮೇಲೆ ದುಷ್ಪರಿಣಾಮ ಉಂಟಾಗದು. ಈ ಬಗ್ಗೆ ಜನರಲ್ಲಿ ಕೆಲವರು ಅನಗತ್ಯ ಗೊಂದಲ ಉಂಟು ಮಾಡಿದ್ದಾರೆ. ಇದು ತರವಲ್ಲ ಎಂದರು.

ಮೊಯ್ಲಿ-ಪೂಜಾರಿ ಒಳಜಗಳಕ್ಕೆ ಯೋಜನೆ ಬಲಿ:
ಮಾಜಿ ಕೇಂದ್ರ ಸಚಿವರಾದ ವೀರಪ್ಪಮೊಯ್ಲಿ ಮತ್ತು ಜನಾರ್ದನ್ ಪೂಜಾರಿ ಅವರ ಒಳಜಗಳಕ್ಕೆ ಎತ್ತಿನಹೊಳೆ ಯೋಜನೆ ಬಲಿಯಾ
ಗುತ್ತಿದೆ. ರಾಜಕೀಯ ಅಸ್ಥಿತ್ವಕ್ಕಾಗಿ ಯೋಜನೆ ಯನ್ನು ಬಲಿಪಶು ಮಾಡುತ್ತಿದ್ದಾರೆ. ಪಕ್ಷದ ಮುಖಂಡರು ಇವರಿಗೆ ಬುದ್ಧಿವಾದ ಹೇಳಬೇಕಿದೆ. ಅಲ್ಲದೆ, ಆ ಭಾಗದ ಜನರಿಗೆ ಯೋಜನೆಯಿಂದ ಯಾವುದೇ ತೊಂದರೆ ಯಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಡ ಬೇಕಾಗಿದೆ. ಈ ಕೆಲಸವನ್ನು ಆದಷ್ಟು ಶೀಘ್ರವಾಗಿ ಸರಕಾರ ಕೈಗೆತ್ತಿಕೊಳ್ಳಬೇಕಾಗಿದೆ ಎಂದು ಸದಾನಂದಗೌಡ ನುಡಿದರು.

Write A Comment