ಬೆಂಗಳೂರು: ಕನ್ನಡ ಚಿತ್ರರಂಗದ ದಿವಂಗತ ನಟ ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಕೊನೆಗೂ ರಾಜ್ಯ ಸರ್ಕಾರ 2 ಎಕರೆ ಭೂಮಿಯನ್ನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಸಾಹಸಸಿಂಹ ವಿಷ್ಣುವರ್ಧನ್ ಅವರ 65ನೇ ಹುಟ್ಟುಹಬ್ಬದ ದಿನದಂದೇ ಈ ಆದೇಶ ಹೊರಬಿದ್ದಿರುವುದು ವಿಷ್ಣು ಅಭಿಮಾನಿಗಳ ಆಸೆ ನೆರವೇರಿದಂತಾಗಿದೆ.
ವಿವಾದವಿಲ್ಲದ ಭೂಮಿಯನ್ನೇ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮಂಜೂರು ಮಾಡಿದೆ. 10 ಎಕರೆ ಪೈಕಿ 2 ಎಕರೆ ಭೂಮಿ ಮಂಜೂರು ಮಾಡಿ ಕಂದಾಯ ಇಲಾಖೆ ಶುಕ್ರವಾರ ಅಧಿಕೃತ ಆದೇಶ ಪ್ರಕಟಿಸಿದೆ.
ಮೈಲಸಂದ್ರದ ಸರ್ವೆ ನಂಬ್ರ 26ರಲ್ಲಿನ 2 ಎಕರೆ ಭೂಮಿಯಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣವಾಗಲಿದೆ. ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಾನೂನು ತೊಡಕು, ಅಡ್ಡಿ ಉಂಟಾಗಿತ್ತು. ಏತನ್ಮಧ್ಯೆ ಮೈಸೂರಿನಲ್ಲಿ ಜಾಗ ನೀಡುವಂತೆ ಭಾರತಿವಿಷ್ಣುವರ್ಧನ್ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ ಅಭಿಮಾನಿಗಳ ಒತ್ತಡದಿಂದ ಆ ನಿರ್ಧಾರವನ್ನು ಕೈಬಿಟ್ಟಿದ್ದರು. ಇದೀಗ ವಿಷ್ಣು ಸ್ಮಾರಕ ನಿರ್ಮಾಣಕ್ಕಿದ್ದ ಅಡ್ಡಿ ಆತಂಕ ನಿವಾರಣೆಯಾದಂತಾಗಿದೆ.
-ಉದಯವಾಣಿ