ಕರ್ನಾಟಕ

ಸಂತ್ರಸ್ತರಿಗೆ ಜೆಡಿಎಸ್‌ನಿಂದ ಪರಿಹಾರ: ಎಚ್ಡಿಕೆ ಹುಲಿವಾನ ಘರ್ಷಣೆ ಪ್ರಕರಣಭರವಸೆ

Pinterest LinkedIn Tumblr

333kumar-1_ಮಂಡ್ಯ, ಸೆ.18: ಅಂತರ್ಜಾತಿ ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ ತಾಲೂಕಿನ ಹುಲಿವಾನ ಗ್ರಾಮದಲ್ಲಿ ನಡೆದ ಘರ್ಷಣೆಯಲ್ಲಿ ಸಂತ್ರಸ್ತರಿಗೆ ತನ್ನ ಪಕ್ಷದ ವತಿಯಿಂದಲೇ ಪರಿ ಹಾರ ನೀಡುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಭರವಸೆ ನೀಡಿದ್ದಾರೆ.

ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದ ಅವರು, ಘಟನೆಯಲ್ಲಿ ಗಾಯಗೊಂಡಿರುವರ ಚಿಕಿತ್ಸೆ ಹಾಗೂ ಹಾನಿಯಾಗಿರುವ ಮನೆಗಳ ದುರಸ್ತಿಗೆ ಅಗತ್ಯವಿರುವ ಹಣ ನೀಡುವುದಾಗಿ ಹೇಳಿದ್ದಲ್ಲದೆ, ಹಾನಿ ವಿವರ ನೀಡುವಂತೆ ಸ್ಥಳದಲ್ಲೇ ಹಾಜರಿದ್ದ ಮುಖಂಡ ರಿಗೆ ಸೂಚಿಸಿದರು.

ಪ್ರಕರಣದಲ್ಲಿ ಬಂಧಿತರಾಗಿರುವ ಅಮಾಯಕರ ಬಿಡುಗಡೆಗೂ ತಕ್ಷಣ ಕ್ರಮವಹಿಸುತ್ತೇನೆ. ಬಂಧಿತರಾಗುವ ಭಯದಿಂದ ಗ್ರಾಮ ತೊರೆದಿರುವ ಯುವಕರು ಯಾವುದೇ ಭಯವಿಲ್ಲದೆ ಗ್ರಾಮಕ್ಕೆ ಹಿಂತಿರುಗಬೇಕು. ಅವರನ್ನು ಪೊಲೀಸರು ಬಂಧಿಸಲು ಅವಕಾಶ ನೀಡುವುದಿಲ್ಲ ಎಂದೂ ಅವರು ಹೇಳಿದರು.

ಪ್ರಕರಣದಿಂದ ಗ್ರಾಮದ ಸೌಹಾರ್ದಕ್ಕೆ ಭಂಗ ಬಂದಿದೆ. ಇದು ಸೂಕ್ಷ್ಮ ವಿಚಾರ. ಇಂತಹ ವಿಷಯವನ್ನು ಎಲ್ಲಾ ಕೋಮಿನ ಮುಖಂಡರು ಚರ್ಚಿಸಿ ಬಗೆಹರಿಸಿ ಕೊಳ್ಳಬೇಕು. ಪರಸ್ಪರ ಪ್ರತ್ಯಾರೋಪ ಮಾಡುತ್ತಾ ಹೋದರೆ ದ್ವೇಷ ಮತ್ತಷ್ಟು ಉಲ್ಬಣವಾಗುತ್ತದೆ ಎಂದು ಅವರು ಸಲಹೆ ಮಾಡಿದರು.

ಗ್ರಾಮದ ಎಲ್ಲಾ ಮುಖಂಡರೂ ಕುಳಿತು ಜವಾಬ್ದಾರಿಯಿಂದ ಸಮಸ್ಯೆ ಬಗೆಹರಿಸಿಕೊಂಡು ಹಿಂದಿನಂತೆಯೇ ಸೌಹಾರ್ದಯುತವಾಗಿ ಬದುಕುವ ತೀರ್ಮಾನ ತೆಗೆದು ಕೊಳ್ಳಿ. ಆ ಕ್ಷಣದಿಂದಲೇ ಪೊಲೀಸ ರನ್ನು ಗ್ರಾಮದಿಂದ ಹೊರಗೆ ಕಳುಹಿ ಸುತ್ತೇನೆ ಎಂದು ಕುಮಾರಸ್ವಾಮಿ ಅಭಯ ನೀಡಿದರು.

ಸೆ.19ರ ಸಂಜೆಯೊಳಗೆ ಜಿಲ್ಲೆಯ ಮೂರು ಖಾಸಗಿ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ಅರೆಯುವಿಕೆಗೆ ಸರಕಾರ ಕ್ರಮವಹಿಸದಿದ್ದರೆ, ಸೋಮ ವಾರವೇ ಮಂಡ್ಯಕ್ಕೆ ಆಗಮಿಸಿ ಉಗ್ರ ಪ್ರತಿಭಟನೆ ನಡೆಸುತ್ತೇನೆ ಎಂದು ಕುಮಾರಸ್ವಾಮಿ ಇದೇ ವೇಳೆ ಎಚ್ಚರಿಸಿದರು.

Write A Comment