ಕರ್ನಾಟಕ

ಮಾಂಸ ನಿಷೇಧ ಹಿಂದೆಗೆದ ಬಿಬಿಎಂಪಿ

Pinterest LinkedIn Tumblr

meatಬೆಂಗಳೂರು, ಸೆ.16: ಬೆಂಗಳೂರಿನಲ್ಲಿ ಗಣೇಶ ಚತುರ್ಥಿ ಸಂದರ್ಭದಲ್ಲಿ ಮಾಂಸ ಮಾರಾಟವನ್ನು ನಿಷೇಧಿಸಲಾಗಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ ಗುಂಡುರಾವ್ ಅವರು ಸ್ಪಷ್ಟ ಪಡಿಸಿದ್ದಾರೆ. ಮಂಗಳವಾರ ಆರೋಗ್ಯ ಇಲಾಖೆ ಹೊರಡಿಸಿದ ಆದೇಶವೊಂದು ಮಾಂಸ ನಿಷೇಧವನ್ನು ಉಲ್ಲೇಖಿಸಿದ್ದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿತ್ತು.

ಈ ಬಗ್ಗೆ ಟ್ವೀಟಿಸಿರುವ ಸಚಿವರು, ನಿಷೇಧ ಕುರಿತು ಗೊಂದಲಕ್ಕೆ ರಾಜ್ಯದಲ್ಲಿ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರವು ಹೊರಡಿಸಿದ್ದ ಸುತ್ತೋಲೆಯು ಕಾರಣವೆಂದು ದೂರಿದ್ದಾರೆ. ತನ್ಮಧ್ಯೆ, ಪಟಿಯಾಲ ಮತ್ತು ಲುಧಿಯಾನಗಳಲ್ಲಿ ಜೈನರ ಪರ್ಯುಷಣ್ ಪ್ರಯುಕ್ತ ಮಾಂಸ ಮಾರಾಟವನ್ನು ನಿಷೇಧಿಸುವ ಮೂಲಕ ಪಂಜಾಬ್ ಮಾಂಸ ಮಾರಾಟ ನಿಷೇಧ ರಾಜ್ಯಗಳ ಸಾಲಿಗೆ ಸೇರಿದೆ.

ಮಾಂಸ ಮಾರಾಟವು ಜೈನ ಸಮುದಾಯದ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡಬಹುದಾದ್ದರಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಸರಕಾರವು ಸಮಜಾಯಿಷಿ ನೀಡಿದೆ.

Write A Comment