ಕರ್ನಾಟಕ

ತಿರುಪತಿ: ಗಣ್ಯರ ದರ್ಶನದ ಟಿಕೆಟ್ ಮಾರಾಟ ಜಾಲ ಪತ್ತೆ: ಶಾಸಕಿ ಬಂಧನ

Pinterest LinkedIn Tumblr

ತಿಮಕಮ಻ಪಪ಻ಹೈದರಾಬಾದ್: ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ನಡೆಯುವ ದಸರಾ ಬ್ರಹ್ಮೋತ್ಸವದ ಅತಿಗಣ್ಯರ  ದರ್ಶನದ ಟಿಕೆಟ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಜಾಲ ಭಾನುವಾರ ಬೆಳಕಿಗೆ ಬಂದಿದೆ.

ಸ್ಥಳೀಯ ಟಿಡಿಪಿ ಶಾಸಕಿ ಮತ್ತು ಹೆಡ್‌ಕಾನ್‌ಸ್ಟೆಬಲ್‌ ಅವರ ಶಿಫಾರಸು ಪತ್ರಗಳ ನೆರವಿನಿಂದ ಗಣ್ಯರ ಟಿಕೆಟ್‌ಗಳನ್ನು ಪಡೆದು ಅವುಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಟಿಟಿಡಿ ಜಾಗೃತದಳದ ಸಿಬ್ಬಂದಿ ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಅಲ್ಲದೆ, ನಿಯಮಾವಳಿ ಉಲ್ಲಂಘಿಸಿ ಶಿಫಾರಸು ಪತ್ರಗಳನ್ನು ನೀಡಿದ ಆರೋಪದ ಮೇಲೆ ಶಾಸಕಿ ಸುಗುಣಾ ಮತ್ತು ಹೆಡ್‌ಕಾನ್‌ಸ್ಟೆಬಲ್‌ ಸೂರ್ಯಚಂದ್ರರಾವ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಕೌಂಟರ್‌ ಹೊರಗೆ ಕಾಳಸಂತೆಯಲ್ಲಿ ಟಿಕೆಟ್‌ ಮಾರಾಟ ಮಾಡುತ್ತಿದ್ದವರನ್ನು ಅವಿನಾಶ್‌ ಮತ್ತು ನಿರಂಜನ್‌ ಎಂದು ಗುರುತಿಸಲಾಗಿದೆ. ಅವರು ₹ 500 ಮೌಲ್ಯದ ಟಿಕೆಟ್‌ಗಳನ್ನು ತಲಾ ₹ 10 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ವರ್ಷ ನಡೆಯುವ ಬ್ರಹ್ಮೋತ್ಸವದ  ವೀಕ್ಷಣೆಗಾಗಿ ಮೂರು ರೀತಿಯ ಟಿಕೆಟ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಅತಿ ಗಣ್ಯರ ದರ್ಶನಕ್ಕಾಗಿ ‘ಎಲ್‌1’ ವರ್ಗದ ಟಿಕೆಟ್‌ಗಳನ್ನು ಮಾರಾಟ ಮಾಡಲಾಗುತ್ತದೆ.

ಈ ಟಿಕೆಟ್‌ಗಳಿಗಾಗಿ ಶಾಸಕರು, ಸಚಿವರು, ರಾಜಕೀಯ ಪಕ್ಷಗಳ ಮುಖಂಡರು, ಹಿರಿಯ ಅಧಿಕಾರಿಗಳು ಶಿಫಾರಸು ಪತ್ರಗಳನ್ನು ನೀಡಲು ಅವಕಾಶ ಇಲ್ಲ. ಆದರೂ, ಸುಗುಣಾ ಮತ್ತು ಸೂರ್ಯಚಂದ್ರರಾವ್‌ ಅವರು ಶಿಫಾರಸು ಪತ್ರಗಳನ್ನು ನೀಡಿದ್ದರು ಎಂದು ಗೊತ್ತಾಗಿದೆ.

Write A Comment