ಕರ್ನಾಟಕ

ಎತ್ತಿನ ಗಾಡಿಗೆ ವಿದ್ಯುತ್ ಸ್ಪರ್ಶ: ಮಂಡ್ಯ: ಯುವಕ ಅಸ್ವಸ್ಥ; ಎತ್ತು ಸಾವು

Pinterest LinkedIn Tumblr

22etthuಮಂಡ್ಯ, ಸೆ.11: ವಿದ್ಯುತ್ ಟ್ರಾನ್ಸ್ ಫಾರ್ಮರ್ ಬಳಿ ಹೋಗುತ್ತಿದ್ದ ಎತ್ತಿನ ಗಾಡಿಗೆ ವಿದ್ಯುತ್ ಪ್ರವಹಿಸಿದ ಪರಿಣಾಮ ಎತ್ತೊಂದು ಸಾವನ್ನಪ್ಪಿದ್ದು, ಯುವಕನೊಬ್ಬ ಅಸ್ವಸ್ಥಗೊಂಡಿರುವ ಘಟನೆ ಮದ್ದೂರು ತಾಲೂಕು ಕರಡಕೆರೆ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ. ಗ್ರಾಮದ ರಾಮಣ್ಣ ಎಂಬವರ ಪುತ್ರ ಕೆ.ಆರ್.ಪೂರ್ಣಚಂದ್ರ(17) ಅಸ್ವಸ್ಥಗೊಂಡ ಯುವಕ. ಬೆಳಗ್ಗೆ 8 ಗಂಟೆ ಸಮಯದಲ್ಲಿ ಗ್ರಾಮದ ದೇವಾಲಯ ಆವರಣದ ಬಳಿಯಲ್ಲಿ ಎತ್ತಿನಗಾಡಿಯಲ್ಲಿ ಸಾಗುತ್ತಿದ್ದಾಗ ಸಮೀಪ ದಲ್ಲಿದ್ದ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ನಿಂದ ವಿದ್ಯುತ್ ಪ್ರವಹಿಸಿದೆ. ಇದರ ಶಾಕ್ ಎತ್ತು ಹಾಗೂ ಗಾಡಿಯ ಮೇಲಿದ್ದ ಪೂರ್ಣಚಂದ್ರನಿಗೆ ಹೊಡೆಯಿತು.

ತಕ್ಷಣವೇ ಎತ್ತು ಸಾವನ್ನಪ್ಪಿದ್ದು, ಅಸ್ವಸ್ಥ ಗೊಂಡ ಪೂರ್ಣಚಂದ್ರನನ್ನು ಸಮೀಪದ ಭಾರತೀನಗರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೇರಿಸಲಾಯಿತು. ಸೆಸ್ಕ್ ಎಇಇ ಬಸವಣ್ಣ, ಜೆಇ ರಾಜೇಶ್ ಮತ್ತಿತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಗಾಯಾಳು ಕುಟುಂಬಕ್ಕೆ 5 ಸಾವಿರ ರೂ. ಪರಿಹಾರವನ್ನು ಸೆಸ್ಕ್ ಅಧಿಕಾರಿಗಳು ನೀಡಿದರು. ಗ್ರಾಮಸ್ಥರ ಪ್ರತಿಭಟನೆ: ಘಟನೆಗೆ ಸೆಸ್ಕ್ ಅಧಿಕಾರಿಗಳ ನಿರ್ಲಕ್ಷವೇ ಕಾರಣ ವಾಗಿದೆ. ಟ್ರಾನ್ಸ್‌ಫಾರ್ಮರ್‌ನಿಂದ ಹಲವು ದಿನಗಳ ಹಿಂದಿನಿಂದಲೂ ವಿದ್ಯುತ್ ಹರಿಯುತ್ತಿದ್ದು, ಇದನ್ನು ಇಲಾಖಾಧಿ ಕಾರಿಗಳ ಗಮನಕ್ಕೆ ತಂದರೂ ಸರಿಪಡಿಸದಿರುವುದರಿಂದ ಈ ಘಟನೆ ನಡೆದಿದೆ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಈ ಘಟನೆಯ ಹೊಣೆಯನ್ನು ಇಲಾಖಾಧಿಕಾರಿಗಳೇ ಹೊತ್ತು ಸಾವನ್ನಪ್ಪಿದ ಎತ್ತು ಹಾಗೂ ಗಾಯಾಳುವಿನ ಚಿಕಿತ್ಸೆಗೆ ಸೂಕ್ತ ಪರಿಹಾರವನ್ನು ನೀಡಬೇಕು ಹಾಗೂ ಗ್ರಾಮದ ಕೇಂದ್ರ ಭಾಗದಲ್ಲಿರುವ ಟ್ರಾನ್ಸ್‌ಫಾರ್ಮರ್‌ನ್ನು ಬೇರೆಡೆಗೆ ಸ್ಥಳಾಂತರ ಮಾಡಬೇಕೆಂದು ಅವರು ಆಗ್ರಹಿಸಿದರು.

Write A Comment