ಕರ್ನಾಟಕ

ಮಗುವಿನ ಸಿಸ್ಟ್‌ನ್ನು ಯಶಸ್ವಿಯಾಗಿ ಹೊರತೆಗೆದ ವೈದ್ಯರು

Pinterest LinkedIn Tumblr

child

ಬೆಂಗಳೂರು,ಆ.31: ಸೈಂಟ್ ಮಾರ್ಥಾಸ್ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಎಂ.ಎಂ.ಝಮೀರ್ ನೇತೃತ್ವದ ಬಹುವಿಭಾಗಗಳ ವೈದ್ಯರ ತಂಡವು ನಾಲ್ಕು ದಿನಗಳ ಗಂಡು ಶಿಶುವಿನಿಂದ ಎರಡು ಅಪರೂಪದ ದೊಡ್ಡ ಸಿಸ್ಟ್‌ಗಳನ್ನು ಶಸ್ತ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿದೆ.

ಹೊಸೂರು ಮೂಲದ ಲಾರಿ ಚಾಲಕ ಎಂ.ನಾರಾಯಣಸ್ವಾಮಿಯ ಪತ್ನಿ 32ನೇ ವಾರದ ಗರ್ಭಿಣಿಯಾಗಿದ್ದಾಗ ಆಕೆಯ ಶಿಶು ಸಿಸ್ಟಿಕ್ ಹೈಗ್ರೋಮಾದಿಂದ – ಮಗುವಿನ ದೇಹದಲ್ಲಿರುವ ಸಣ್ಣ ಸಿಸ್ಟ್‌ಗಳು ವರ್ಷ ಕಳೆದಂತೆ ವಿಸ್ತಾರವಾಗುತ್ತಾ ಹೋಗುತ್ತವೆ- ಬಳಲುತ್ತಿದೆ ಎಂದು ತಿಳಿದುಬಂತು. ಬಳಿಕ ಅವರು ಸೈಂಟ್ ಮಾರ್ಥಾಸ್ ಆಸ್ಪತ್ರೆಯನ್ನು ಸಂಪರ್ಕಿಸಿದರು. ಅಲ್ಲಿನ ಸ್ತ್ರೀರೋಗ ತಜ್ಞರು ಹಾಗೂ ಸರ್ಜನ್ ಗಳ ಜತೆ ಸಮಾಲೋಚಿಸಿದರು. ಅವರಿಗೆ ಸುರಕ್ಷಿತ ಪ್ರಸವ ಹಾಗೂ ಸರ್ಜರಿಯ ಭರವಸೆ ನೀಡಲಾಯಿತು.

ಮಗುವಿನ ಕುತ್ತಿಗೆ ಹಾಗೂ ಚರ್ಮದ ಮೇಲೆ ತೀವ್ರ ಒತ್ತಡವಾಗುತ್ತಿದ್ದುದರಿಂದ ಆತನ ಆರೈಕೆ ಕಷ್ಟವಾಗುತ್ತಿತ್ತು. ಆದ್ದರಿಂದ ತಕ್ಷಣವೇ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಲಾಯಿತು. ಸೆಂಟ್ ಮರ್ಥಾಸ್ ಆಸ್ಪತ್ರೆಯ ವೈದ್ಯ ಝಮೀರ್ ಅವರ ಪ್ರಕಾರ ಇಂತಹ ಸಿಸ್ಟ್ ಗಳನ್ನು ಸಾಮಾನ್ಯವಾಗಿ ಮಗುವಿಗೆ ಎರಡರಿಂದ ಮೂರು ವರ್ಷವಾಗುವಾಗ ನಡೆಸಲಾಗುತ್ತದೆ. ಆದಾಗ್ಯೂ, ಈ ಪ್ರಕರಣದಲ್ಲಿ, ಇದರ ಬೆಳವಣಿಗೆ ಮಗುವಿನ ಕೈಯನ್ನು ಶಾಶ್ವತವಾಗಿ ಹಾನಿಗೊಳಿಸುವಂತಹ ಇತರೆ ಸಮಸ್ಯೆಗಳನ್ನು ತಂದೊಡ್ಡುವ ಸಾಧ್ಯತೆ ಇದ್ದುದರಿಂದ ಸಮಯ ಅಮೂಲ್ಯವಾಗಿತ್ತು. ಆದರೆ ನಾವು ಸುರಕ್ಷಿತ ಪ್ರಸವ ಹಾಗೂ ನಂತರದ ಸರಾಗ ಶಸ್ತ್ರಕ್ರಿಯೆಯ ಬಗ್ಗ ಆತ್ಮವಿಶ್ವಾಸದಿಂದಿದ್ದೆವು ಎಂದು ಹೇಳಿದ್ದಾರೆ.

ಈ ಶಸ್ತ್ರಕ್ರಿಯೆಯನ್ನು ನವಜಾತ ಶಿಶು ತಜ್ಞರು, ಅರಿವಳಿಕೆ ತಜ್ಞರು ಹಾಗೂ ಮಕ್ಕಳ ತಜ್ಞರು ಹೀಗೆ ಬಹು ವಿಭಾಗಗಳ ತಂಡವು ನಡೆಸಿತು. ಸಿಸ್ಟ್‌ಗಳನ್ನು ಯಶಸ್ವಿಯಾಗಿ ತೆಗೆಯಲಾಯಿತು ಮತ್ತು ಅಂಗಾಂಗಗಳಿಗೆ ಯಾವುದೇ ಗಾಯ ಅಥವಾ ಹಾನಿಯಿಲ್ಲದೆ ಮಗು ಚೆನ್ನಾಗಿ ಚೇತರಿಸಿಕೊಳ್ಳುತ್ತಿದೆ. ಸೈಂಟ್ ಮಾರ್ಥಾಸ್ ಆಸ್ಪತ್ರೆಯ ನಿರ್ದೇಶಕ ಶ್ರೀ ಜಯಕರ್ ಜೆರೋಮ್ ಮಾತನಾಡಿ, ಸೈಂಟ್ ಮಾರ್ಥಾಸ್ ಆಸ್ಪತ್ರೆಯಲ್ಲಿ ವಿವಿಧ ವಿಭಾಗಗಳ ತಂಡಗಳು ಪರಸ್ಪರ ಅತ್ಯುತ್ತಮ ಸಹಕಾರದೊಂದಿಗೆ ಕಾರ್ಯನಿರ್ವಹಿಸುತ್ತಿರುವುದಕ್ಕೆ ನಾವು ಹೆಮ್ಮೆ ಪಡುತ್ತೇವೆ. ಈ ಸೂಕ್ಷ್ಮ ಶಸ್ತ್ರಕ್ರಿಯೆಗೆ ನಿಖರತೆ ಬೇಕಾಗಿತ್ತು ಮತ್ತು ನಮ್ಮ ತಂಡಗಳು ಸಂತೋಷಕರ ಫಲಿತಾಂಶ ನೀಡುವುದನ್ನು ಸಾಧ್ಯವಾಗಿಸಿವೆ ಎಂದರು.

Write A Comment