ಕರ್ನಾಟಕ

ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲದ ಪರಿಸ್ಥಿತಿ..!: ಜಲಾಶಯಗಳ ನೀರು ಕುಡಿಯಲು ಮೀಸಲು

Pinterest LinkedIn Tumblr

krs_mysoreಬೆಂಗಳೂರು: ರಾಜ್ಯದಲ್ಲಿ ಬರಗಾಲ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ತುರ್ತು ಆದ್ಯತೆ ನೀಡಲು ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಜಲಾಶಯಗಳಲ್ಲಿ  ಸಂಗ್ರಹವಾಗಿರುವ ನೀರನ್ನು ಕುಡಿಯುವ ಉದ್ದೇಶಕ್ಕೇ ಮೀಸಲಿಡಬೇಕು ಎಂದು ಆದೇಶಿಸಲಾಗಿದೆ ಎಂದು ಜಲಸಂಪನ್ಮೂಲ ಖಾತೆ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಮಳೆ ಕಡಿಮೆಯಾಗಿರುವುದರಿಂದ ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ಕುಡಿಯುವ ನೀರಿಗೆ ಎಷ್ಟು ಪ್ರಮಾಣದ ನೀರು ಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು, ಆ ಪ್ರಮಾಣದ  ನೀರು ಸಂಗ್ರಹಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ. ಕುಡಿಯಲು ಅಗತ್ಯವಿರುವ ನೀರಿನ ಪ್ರಮಾಣವನ್ನು ಸಂಗ್ರಹಿಸಿಟ್ಟುಕೊಂಡ ನಂತರ, ಹೆಚ್ಚುವರಿ ನೀರಿದ್ದರೆ ಮಾತ್ರ ಕೃಷಿಗೆ  ಒದಗಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. ನಾಲೆಗಳಿಗೆ ಬಿಡುಗಡೆ ಮಾಡುವ ನೀರನ್ನು ತಕ್ಷಣ ನಿಲ್ಲಿಸುವಂತೆಯೂ ಸೂಚನೆ ನೀಡಲಾಗಿದೆ. ಜಲಾಶಯಗಳಲ್ಲಿ ಸದ್ಯಕ್ಕೆ  ಸಂಗ್ರಹವಾಗಿರುವ ನೀರನ್ನು ಯಾವ ಕಾರಣಕ್ಕೂ ಅನಗತ್ಯವಾಗಿ ಬಿಡುಗಡೆ ಮಾಡಬಾರದು.

ರಾಜ್ಯದ ಜಲಾಶಯಗಳಲ್ಲಿರುವ ನೀರನ್ನು ಜನ ಮತ್ತು ಜಾನುವಾರುಗಳ ಅಗತ್ಯಕ್ಕೆ ನೀರನ್ನು ಸಂಗ್ರಹಿಸುವುದು ನಮ್ಮ ಮೊದಲ ಆದ್ಯತೆ ಎಂದರು. ಕಾವೇರಿ ನೀರಿಲ್ಲ: ಕಾವೇರಿ ನದಿ ಪಾತ್ರದಲ್ಲಿ  ಅತ್ಯಂತ ಕಡಿಮೆ ಮಳೆಯಾಗಿರುವ ಕಾರಣದಿಂದಾಗಿ ಸಂಕಷ್ಟ ಸೂತ್ರದ ಆಧಾರದ ಮೇಲೂ ತಮಿಳುನಾಡಿಗೆ ಬಿಡಲು ನೀರಿಲ್ಲ. ಸಂಕಷ್ಟ ಸೂತ್ರದ ಅನುಸಾರ ನೀರು ಬಿಡುಗಡೆ ಮಾಡಲು ಯತ್ನಿಸಿ ದ್ದೇವಾದರೂ, ಇನ್ನು ಮುಂದೆ ಅದರ ಆಧಾರದ ಮೇಲೂ ನೀರು ಬಿಡಲು ಸಾಧ್ಯವಿಲ್ಲ. ಸಾಮಾನ್ಯ ಪ್ರಮಾಣದ ಮಳೆಯಾದಾಗ ಎಷ್ಟು ನೀರು ಬಿಡುಗಡೆ ಮಾಡಬೇಕು? ಸಂಕಷ್ಟದ ಕಾಲದಲ್ಲಿ ಎಷ್ಟು ಪ್ರಮಾಣದ ನೀರು ಬಿಡು ಗಡೆ ಮಾಡಬೇಕು? ಎಂಬ ಕುರಿತು ಮಾರ್ಗಸೂಚಿ ಇದೆ. ಜಲಾಶಯಗಳಲ್ಲಿ ನೀರೇ ತುಂಬಿಲ್ಲ. ಕಾವೇರಿ ನದಿ ಪಾತ್ರದ ಯಾವ್ಯಾವ ಜಲಾಶಯಗಳ ನೀರಿನ ವಿವರ  ನೀಡುತ್ತೇವೆ.

ಅದನ್ನು ನೋಡಿದರೆ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವ ಸ್ಥಿತಿಯಲ್ಲಿ ನಾವಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದರು. ಸಂಕಷ್ಟ ಸೂತ್ರಾನುಸಾರ ಎಷ್ಟು ನೀರು ಬಿಡುಗಡೆ ಮಾಡಬೇಕು? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 41 ವರ್ಷಗಳಲ್ಲಿ ಆಗಿರುವ ಮಳೆಯನ್ನು ಆಧರಿಸಿ ಬಿಡುಗಡೆ ಮಾಡಬೇಕಾದ ನೀರಿನ ಪ್ರಮಾಣ ನಿರ್ಧರಿಸಬೇಕಾಗುತ್ತದೆ ಎಂದರು.

Write A Comment