ಬೆಂಗಳೂರು, ಆ. 28: ಕರ್ನಾಟಕ ಕ್ರೀಡಾ ಪ್ರಾಧಿಕಾರದ ಕ್ರೀಡಾ ತರಬೇತು ದಾರರ ಸೇವೆಯನ್ನು ಖಾಯಂಗೊಳಿಸುವ ಜೊತೆಗೆ ಪ್ರತ್ಯೇಕವಾಗಿ ಕ್ರೀಡಾ ಪ್ರಾಧಿಕಾರ ರಚಿಸಬೇಕೆಂದು ಆಗ್ರಹಿಸಿ ನೂರಕ್ಕೂ ಹೆಚ್ಚು ಹಾಲಿ ಕ್ರೀಡಾ ತರಬೇತುದಾರರು ಅನಿರ್ದಿಷ್ಟಾವಧಿ ಧರಣಿ ಕೈಗೊಂಡಿದ್ದಾರೆ.
ಶುಕ್ರವಾರ ನಗರದ ಬನಪ್ಪಪಾರ್ಕ್‌ನಲ್ಲಿ ನೂರಕ್ಕೂ ಹೆಚ್ಚು ಹಾಲಿ ಕ್ರೀಡಾ ತರಬೇತುದಾರರು ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಮಾತನಾಡಿದ ಹಿರಿಯ ಕ್ರೀಡಾ ತರಬೇತುದಾರ ರಮೇಶ್(ಮೈಸೂರು), ಅತ್ಯುನ್ನತ ಮಟ್ಟದ ವೈಜ್ಞಾನಿಕ ಕ್ರೀಡಾ ತರಬೇತಿಯನ್ನು ಸತತ 25 ವರ್ಷಗಳಿಂದ ಕ್ರೀಡಾ ಪಟುಗಳಿಗೆ ನೀಡುತ್ತಿರುವ ತರಬೇತುದಾರರಿಗೆ ಇದುವರೆಗೂ ಯಾವುದೇ ಸೌಲಭ್ಯ ಕಲ್ಪಿಸಲು ಸರಕಾರಗಳು ಮುಂದಾಗಿಲ್ಲ. ಅಲ್ಲದೆ, 1995ರಿಂದ 135ಕ್ಕೂ ಹೆಚ್ಚು ತರಬೇತುದಾರರಿಗೆ ಖಾಯಂಗೊಳಿಸ ಲಾಗುವುದು ಎಂದು ಆಡಳಿತ ನಡೆಸಿದ ಸರಕಾರಗಳು ಭರವಸೆಗಳನ್ನು ಮಾತ್ರ ನೀಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಯುವ ಸಬಲೀಕರಣ ಜೊತೆಯಲ್ಲಿರುವ ಕ್ರೀಡಾ ಇಲಾಖೆಯನ್ನು ಈ ಕೂಡಲೇ ಬೇರ್ಪಡಿಸಿ ಪ್ರತ್ಯೇಕ ಕ್ರೀಡಾ ಇಲಾಖೆ ರಚಿಸಬೇಕೆಂದು ಆಗ್ರಹಿಸಿ ದ ಅವರು, ರಾಜ್ಯದಲ್ಲಿನ ಹಲವು ಹಿರಿಯ ಕ್ರೀಡಾ ತರಬೇತುದಾರರಿಗೆ ಇದುವರೆಗೂ ವೇತನ, ಭಡ್ತಿ ಹೆಚ್ಚಳವಾಗಿಲ್ಲ. ಈ ಬಗ್ಗೆ ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಹತ್ತು ಬಾರಿ ಮನವಿ, ಆದರೂ ಪ್ರಯೋಜನವಾಗಿಲ್ಲ: ರಾಜ್ಯದಲ್ಲಿ 135ಕ್ಕೂ ಹೆಚ್ಚು ತರಬೇತುದಾರರು ನೇತಾಜಿ ಸುಭಾಷ್ ರಾಷ್ಟ್ರೀಯ ಕ್ರೀಡಾ ಸಂಸ್ಥೆಯ ಲ್ಲಿ ಡಿಪ್ಲೊಮಾ ಹಾಗೂ ಪದವಿ ಶಿಕ್ಷಣವನ್ನು ಪಡೆದಿದ್ದಾರೆ. ಇವರಿಗೆ ಸೂಕ್ತ ಸ್ಥಾನ-ಮಾನ ಕಲ್ಪಿಸಬೇಕೆಂದು ರಾಜ್ಯ ಸರಕಾರಕ್ಕೆ 2004ರಿಂದ ಹತ್ತು ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದರು.
ಸತತ 25 ವರ್ಷಗಳಿಂದ ಕ್ರೀಡಾ ಪಟುಗಳಿಗೆ ಅತ್ಯುನ್ನತ ಮಟ್ಟದ ವೈಜ್ಞಾನಿಕ ಕ್ರೀಡಾ ತರಬೇತಿಯ ನ್ನು ನೀಡುತ್ತಿರುವ ತರಬೇತುದಾರರಿಗೆ ಇದುವರೆಗೂ ಯಾವುದೇ ಸೌಲಭ್ಯ ಕಲ್ಪಿಸಲು ಸರಕಾರಗಳು ಮುಂದಾಗಿಲ್ಲ. ಅಲ್ಲದೆ, 1995ರಿಂದ 135ಕ್ಕೂ ಹೆಚ್ಚು ತರಬೇತುದಾರರಿಗೆ ಖಾಯಂಗೊಳಿಸಲಾಗುವುದು ಎಂದು ಸರಕಾರ ಭರವಸೆಗಳನ್ನು ಮಾತ್ರ ನೀಡುತ್ತಿವೆ.
-ರಮೇಶ್ ಮೈಸೂರು, ಹಿರಿಯ ಕ್ರೀಡಾ ತರಬೇತುದಾರ