ಕರ್ನಾಟಕ

ಸ್ಮಾರ್ಟ್ ಸಿಟಿಗೆ ತುಮಕೂರು ನಗರ ಆಯ್ಕೆ: ಕೇಂದ್ರ, ರಾಜ್ಯ ಸರಕಾರಗಳಿಗೆ ಶಾಸಕರ ಅಭಿನಂದನೆ

Pinterest LinkedIn Tumblr

4smartತುಮಕೂರು, ಆ.28: ಕೇಂದ್ರ ಸರಕಾರದ ಸ್ಮಾ ರ್ಟ್ ಸಿಟಿ ಯೋಜನೆಯಲ್ಲಿ ತುಮಕೂರು ನಗರವನ್ನು ಸೇರಿಸಿರುವುದಕ್ಕೆ ಕೇಂದ್ರ ಹಾಗೂ ರಾಜ್ಯದ ನಗರಾಭಿವೃದ್ದಿ ಸಚಿವರು, ಪ್ರಾನಮಂತ್ರಿ ಮತ್ತು ಮುಖ್ಯಮಂತ್ರಿ ಯವರಿಗೆ ಸಂಸದ ಎಸ್.ಪಿ.ಮುದ್ದಹನುಮೇ ಗೌಡ, ತುಮಕೂರು ನಗರ ಶಾಸಕ ಡಾ.ರಫೀಕ್ ಅಹ್ಮದ್ ಅಭಿನಂದನೆ ಸಲ್ಲಿಸಿದ್ದಾರೆ.
ಜಂಟಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕಳೆದ ಆರು ತಿಂಗಳ ಹಿಂದೆ ಕೇಂದ್ರ ಸರಕಾರ ಸ್ಮಾರ್ಟ್ ಸಿಟಿ ಯೋಜನೆ ಜಾರಿಗೆ ಅರ್ಜಿ ಆಹ್ವಾನಿಸಿತ್ತು

. ಬೆಂಗಳೂರು ನಗರ ಸೇರಿದಂತೆ ರಾಜ್ಯದ 13 ಮಹಾನಗರಪಾಲಿಕೆಗಳು ಇದಕ್ಕಾಗಿ ಅರ್ಜಿ ಸಲ್ಲಿಸಿದ್ದವು. ಕೇಂದ್ರ ಸರಕಾರ ರೂಪಿಸಿದ್ದ ಮಾನದಂಡ ಗಳನ್ನು ಅನುಸರಿಸಿ ತುಮಕೂರು ನಗರಪಾಲಿಕೆಯು 87 ಅಂಕಗಳನ್ನು ಪಡೆಯುವ ಮೂಲಕ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿದೆ. ಇದರಲ್ಲಿ ಯಾವುದೇ ರಾಜಕೀಯ ಒತ್ತಡ, ಶಿಫಾರಸು ನಡೆದಿಲ್ಲ. ಮೆರಿಟ್ ಆಧಾರದಲ್ಲಿಯೇ ಪಾರದರ್ಶಕವಾಗಿ ಸ್ಮಾರ್ಟ್ ಸಿಟಿ ಯೋಜನೆಗೆ ನಗರಗಳನ್ನು ಆಯ್ಕೆ ಮಾಡಲಾಗಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ನಗರದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳೇ ಆಯ್ಕೆಯಾಗಲು ಪ್ರಮುಖ ಕಾರಣ ಎಂದು ಶ್ಲಾಘಿಸಿದರು.
ಸುದ್ದಿೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ರಾದ ಡಾ.ಎಂ.ಆರ್.ಹುಲಿನಾಯ್ಕರ್, ಮೇಯ್ ಲಲಿತಾ,ನಗರಪಾಲಿಕೆ ಸದಸ್ಯರಾದ ಸೈಯದ್ ನವಾಝ್, ಪ್ರೆಸ್ ರಾಜಣ್ಣ,ನಾಗರಾಜು,ನದೀಂ ಪಾಷ, ಕರುಣಾರಾಧ್ಯ, ಟೂಡಾ ಸದಸ್ಯ ರಾಜು ಹಾಗೂ ಪಾಲಿಕೆಯ ನಾಮನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು.

ಜನಪ್ರತಿನಿಧಿಗಳ ಮೇಲೆ ಹೆಚ್ಚಿನ ಜವಾಬ್ದಾರಿ
ಸ್ಮಾರ್ಟ್ ಸಿಟಿ ಯೋಜನೆಯ ಸಮರ್ಪಕ ಅನುಷ್ಠಾನದಲ್ಲಿ ಜನಪ್ರತಿನಿಧಿಗಳ ಪಾತ್ರ ಬಹಳ ಮುಖ್ಯವಾಗಿದೆ. ಈ ಯೋಜನೆಯ ಫಲ ಎಲ್ಲಾ ಬಡವರಿಗೂ ತಲುಪುವಂತೆ ಮಾಡುವ ಗುರುತರ ಜವಾಬ್ದಾರಿ ಅವರ ಮೇಲಿದೆ. ಎಲ್ಲಾ ಜನಪ್ರತಿನಿಧಿಗಳನ್ನು ಜೊತೆ ಸೇರಿಸಿಕೊಂಡು ಸಮರ್ಪಕವಾಗಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಭರವಸೆ ನೀಡಿದರು

ನಗರಗಳಿಗೆ ಅನುದಾನ ಹೇಗೆ?

ಸ್ಮಾರ್ಟ್ ಸಿಟಿ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು 50:50ರ ಅನುಪಾತದಲ್ಲಿ ಅನುದಾನ ಮಂಜೂರು ಮಾಡುತ್ತದೆೆ. ಕೇಂದ್ರಸರಕಾರ 500 ಕೋಟಿ ರೂ. ನೀಡಿದರೆ ರಾಜ್ಯ ಸರಕಾರವೂ ಇಷ್ಟೇ ಮೊತ್ತವನ್ನು ಒದಗಿಸುತ್ತದೆ. ಪ್ರತಿವರ್ಷ 200 ಕೋಟಿ ರೂ.ನಂತೆ ಐದು ವರ್ಷಗಳಲ್ಲಿ 1,000 ಕೋಟಿ ರೂ.ಗಳನ್ನು ಸ್ಮಾರ್ಟ್ ಸಿಟಿಯ ಹೆಸರಿನಲ್ಲಿ ನಗರಕ್ಕೆ ಧಾರೆಯೆರೆಯುತ್ತದೆ. ನಾಗರಿಕರಿಗೆ ಉತ್ತಮ ಕುಡಿಯುವ ನೀರು,ನಿರಂತರ ವಿದ್ಯುತ್,ವೈಜ್ಞಾನಿಕ ಘನತ್ಯಾಜ್ಯ ವಿಲೇವಾರಿ, ಸಮರ್ಥ ನಗರಸಾರಿಗೆ,ಬಡವರಿಗೆ ಕಡಿಮೆ ದರದಲ್ಲಿ ವಸತಿ, ಸದೃಢ ಐಟಿ ಸಂಪರ್ಕ, ಇ-ಆಡಳಿತ,ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ವಿಶೇಷ ಆದ್ಯತೆ ಹಾಗೂ ಆರೋಗ್ಯ ಮತ್ತು ಶಿಕ್ಷಣದ ಕಡೆಗೆ ಹೆಚ್ಚು ಒತ್ತು ನೀಡಲು ಹಣ ವಿನಿಯೋಗಿಸಲಾಗುವುದು ಎಂದರು.
ಪ್ರಮುಖವಾಗಿ ಹಾಲಿ ಇರುವ ನಗರವನ್ನೇ ಅತ್ಯಂತ ಸುಸಜ್ಜಿತ ಮೂಲಭೂತ ಸೌಕರ್ಯ ಗಳೊಂದಿಗೆ ಅಭಿವೃದ್ಧಿ ಪಡಿಸುವುದು. ಬಡವರಿಗೆ ಕಡಿಮೆ ದರದಲ್ಲಿ ವಸತಿ ಒದಗಿಸುವ ನಿಟ್ಟಿನಲ್ಲಿ ನಗರದ ಹೊರವಲಯದಲ್ಲಿ 250 ಎಕರೆ ಭೂಮಿಯನ್ನು ಗುರುತಿಸಿ ಅವರಿಗೆ ಮನೆಗಳನ್ನು ನಿರ್ಮಿಸುವುದು. ಅಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಅಗತ್ಯ ಸೌಲಭ್ಯಗಳನ್ನು ಒದಗಿಸಲು ಅದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಸರಕಾರ ಜಾರಿಗೆ ತಂದಿರುವ ಈ ಯೋಜನೆಗೆ ನಾಗರಿಕರು ಯಾವುದೇ ಹಣ ಪಾವತಿ ಮಾಡುವ ಅಗತ್ಯವಿಲ್ಲ. ಈಗಾಗಲೇ ಯೋಜನೆ ಯ ಡಿಪಿಆರ್ ತಯಾರಿಸಲು ಕರ್ನಾಟಕ ನಗರ ಮೂಲಭೂತ ಸೌರ್ಕಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆಯು ನಿಗದಿಪಡಿಸಿದ 11 ಸಂಸ್ಥೆಗಳಲ್ಲಿ 5 ಸಂಸ್ಥೆಗಳು ಟೆಂಡರ್‌ನಲ್ಲಿ ಭಾಗವಹಿಸಿದ್ದು, ಅತ್ಯಂತ ಕಡಿಮೆ ಬಿಡ್ ಮಾಡಿದ ದಾಸ್ ಆನಂದ ಕಿಶೋರ್ ಕಂಪೆನಿಗೆ ಗುತ್ತಿಗೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಕಂಪೆನಿಯೊಂದಿಗೆ ಸೇರಿ ಡಿಪಿಆರ್ ತಯಾರಿುವಾಗ ಹೆಚ್ಚಿನ ಗಮನಹರಿಸಲಾಗುವುದು ಎಂದು ತಿಳಿಸಿದರು.

Write A Comment