ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳ ಬಳಿ ವರುಣಾ ನಾಲೆಗೆ ಮಾರುತಿ ಓಮ್ನಿ ವ್ಯಾನ್ ಬಿದ್ದು, ಆರು ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಬುಧವಾರ ನಡೆದಿದೆ.
ಮೃತಪಟ್ಟವರು ಬೆಳಗೊಳ ಬಳಿ ಇರುವ ಅನಾಥ ಮಕ್ಕಳಿಗೆ ಆಶ್ರಯ ನೀಡುವ ಎಕೊ ಸ್ಪಂದನ ಸಂಸ್ಥೆಗೆ ಸೇರಿದವರಾಗಿದ್ದಾರೆ.
ಈಗಾಗಲೇ ವಾಹನ ಚಾಲಕ ನರಸಿಂಹ (35), ಸಿಬ್ಬಂದಿ ಪಯಡಮ್ಮ (40), ನಿತ್ಯಮ್ಮ (40) ಅವರ ಶವವನ್ನು ನೀರಿನಿಂದ ಹೊರತೆಗೆಯಲಾಗಿದೆ. ವಾರ್ಡನ್ ಸ್ನೇಹಾ (25), ಬಾಲಕರಾದ ರಾಜು, ಜೋಸೆಫ್ ಅವರ ಶವಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ಅಗ್ನಿ ಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಬಟ್ಟೆ ತೊಳೆಯಲು ವ್ಯಾನ್‌ನಲ್ಲಿ ಬಂದಿದ್ದ ಇವರು, ಬಟ್ಟೆ ತೊಳೆದ ನಂತರ ವಾಹನದಲ್ಲಿ ಕುಳಿತಿದ್ದರು. ವಾಹನವನ್ನು ಹಿಂದಕ್ಕೆ ತಿರುಗಿಸಿಕೊಳ್ಳುವಾಗ ಚಾಲಕನ ನಿಯಂತ್ರಣ ತಪ್ಪಿ ವಾಹನ ನಾಲೆಗೆ ಉರುಳಿ ಅನಾಹುತ ಸಂಭವಿಸಿದೆ.