ಕರ್ನಾಟಕ

ಆಸ್ತಿಗಾಗಿ ಸ್ನೇಹಿತರ ಜೊತೆ ಸೇರಿ ತಂದೆಯನ್ನೇ ಕೊಂದ ಪಾಪಿ ಮಗ

Pinterest LinkedIn Tumblr

Murder

ಧಾರವಾಡ,ಆ.20: ಆಸ್ತಿ ಕಲಹದ ಹಿನ್ನೆಲೆಯಲ್ಲಿ ಪಾಪಿ ಮಗನೊಬ್ಬನ ತನ್ನ ಸ್ನೇಹಿತರ ಜೊತೆ ಸೇರಿ ತಂದೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ದುರಂತ ಘಟನೆ ಜರುಗಿದೆ.

ತಾಲ್ಲೂಕಿನ ದಾಸನಕುಪ್ಪ ಕ್ರಾಸ್ ಬಳಿ ನಡೆದ ಕಲ್ಲೂರು ಗ್ರಾಮದ ಮಹದೇವಪ್ಪ ಮರಗಾಲ (60)ನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ನಗರ ಗ್ರಾಮೀಣ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹದೇವಪ್ಪನ ಪುತ್ರ ಉಳುವಪ್ಪ ತನ್ನ ಐವರು ಸ್ನೇಹಿತರೊಂದಿಗೆ ಸೇರಿಕೊಂಡು ತಂದೆಯನ್ನು ಆಸ್ತಿ ಕಬಳಿಸುವ ಸಲುವಾಗಿ ಕೊಲೆ ಮಾಡಿರುವುದು ಇದೀಗ ಬೆಳಕಿಗೆ ಬಂದಿದೆ.

ಆಸ್ತಿ ವಿವಾದ ಮತ್ತು ಸಂಬಂಧಿಕರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಮಹದೇವಪ್ಪ ಮರಗಾಲ ತನ್ನ ಮಗ ಹಾಗೂ ಅಣ್ಣನ ಮಕ್ಕಳಿಂದಲೇ ಕೊಲೆಯಾಗಿದ್ದರು. ಉಳುವಪ್ಪ ಮತ್ತು ಅಣ್ಣನ ಮಗ ಶ್ರೀಶೈಲ ಚಂದ್ರಶೇಖರ ಮತ್ತು ಸಹಚರರಾದ ನಾಗರಾಜ್, ಶಿವಾನಂದ ಅವರನ್ನು ಕೊಲೆ ಸಂಬಂಧ ಪೊಲೀಸರು ಬಂಧಿಸಿದ್ದಾರೆ. ಬಟಾಣಿ ಮಾರಾಟ ಮಾಡಿ ಮರಳಿ ಗ್ರಾಮಕ್ಕೆ ಹಿಂದಿರುಗುತ್ತಿದ್ದ ಮಹದೇವಪ್ಪ ಮರಗಾಲ ಅವರನ್ನು ದಾಸನಕೊಪ್ಪ ಕ್ರಾಸ್ ಬಳಿ ಮಗ ಸೇರಿದಂತೆ ಎಲ್ಲ ಐವರು ಹೊಂಚು ಹಾಕಿ ಕುಳಿತು ಕಾರನ್ನು ಅಡ್ಡಗಟ್ಟಿ ಕೊಲೆ ಮಾಡಿ ಪರಾರಿಯಾಗಿದ್ದರು.

ಈ ನಡುವೆ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಉಳುವಪ್ಪ , ತನ್ನ ತಂದೆಯ ಕೊಲೆಗೆ ಆಸ್ತಿ ಕಲಹ ಮತ್ತು ಅಕ್ರಮ ಸಂಬಂಧಗಳೇ ಈ ಕೊಲೆಗೆ ಕಾರಣ ಎಂದು ಹೇಳಿದ್ದ. ಈ ನಡುವೆ ಕೊಲೆಗೆ ಸಹಕರಿಸಿದ ಇತರರು ಮಾತನಾಡಿ, ಮಹದೇವಪ್ಪನ ಉಪಟಳ ಹೆಚ್ಚಾಗಿತ್ತು. ಹೆತ್ತ ಮಗನಿಗೆ ಆಸ್ತಿ ಕೊಡದೆ, ಅನೈತಿಕ ಸಂಬಂಧ ಹೊಂದಿರುವ ಮಹಿಳೆಯರಿಗೆ ಆಸ್ತಿ ನೀಡಿದ್ದರಿಂದ ಕೊಲೆಗೆ ಸಂಚು ರೂಪಿಸಲಾಗಿತ್ತು ಎಂದು ತಿಳಿಸಿದರು.

Write A Comment