ಕರ್ನಾಟಕ

ರಾಜ್ಯದ 17 ಜಿಲ್ಲೆಗಳ 114 ತಾಲೂಕುಗಳು ಬರಪೀಡಿತ : ಸರ್ಕಾರದ ಘೋಷಣೆ

Pinterest LinkedIn Tumblr

druatಬೆಂಗಳೂರು, ಆ.17-ರಾಜ್ಯದ 17 ಜಿಲ್ಲೆಗಳ 114 ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ಸರ್ಕಾರ ಆದೇಶ ಹೊರಡಿಸಿದೆ.ಸುದ್ದಿಗಾರರೊಂದಿಗೆ  ಈ ವಿಷಯ ತಿಳಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ, ರಾಜ್ಯದಲ್ಲಿ ವಾಡಿಕೆಗಿಂತ ಶೇ.26ರಷ್ಟು ಮಳೆ ಕೊರತೆ ಉಂಟಾಗಿದೆ. ತೀವ್ರವಾಗಿ ಮಳೆ ಕೊರತೆ ಉಂಟಾಗಿದ್ದ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ.  ಇನ್ನೂ ಬಹಳಷ್ಟು ತಾಲೂಕುಗಳು ಬರದ ಛಾಯೆಯಲ್ಲಿವೆ.

ಆಗಸ್ಟ್ ಅಂತ್ಯದ ವೇಳೆಗೆ ಎರಡನೇ ಹಂತದಲ್ಲಿ ಉಳಿದ ಬರಪೀಡಿತ ಪ್ರದೇಶಗಳನ್ನು ಘೋಷಣೆ ಮಾಡಲಾಗುವುದು ಎಂದರು.ಬರಪೀಡಿತ ಪ್ರದೇಶಗಳಲ್ಲಿ ತುರ್ತು ಪರಿಹಾರ ಕಾಮಗಾರಿ ಕೈಗೊಳ್ಳಲು 200 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಈ ಪೈಕಿ 5 ಕೋಟಿ ರೂ. ಜಾನುವಾರುಗಳ ಮೇವಿಗೆ, 50 ಕೋಟಿ ರೂ. ಇಂಧನಕ್ಕೆ, 75 ಕೋಟಿ ಕೊಳವೆ ಬಾವಿ ಕೊರೆಸಲು ಬಿಡುಗಡೆ ಮಾಡಲಾಗಿದೆ ಎಂದರು.17 ಜಿಲ್ಲೆಗಳ ಕುಡಿಯುವ ನೀರಿಗಾಗಿ 19 ಕೋಟಿ ರೂ. ಬಿಡುಗಡೆ ಮಾಡಿದ್ದು, ತ್ವರಿತಗತಿಯಲ್ಲಿ ಬರಪರಿಹಾರ ಕಾಮಗಾರಿ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಜಾನುವಾರುಗಳ ಮೇವು ಉತ್ಪಾದನೆ ಹೆಚ್ಚಿಸಲು ರೈತರಿಗೆ ಮೇವಿನ ಬಿತ್ತನೆ ಬೀಜಗಳ ಕಿಟ್ ನೀಡಲಾಗುತ್ತಿದೆ. ಅಗತ್ಯವಿರುವ ಕಡೆ ಗೋಶಾಲೆ ತೆರೆಯಲು ಸೂಚಿಸಲಾಗಿದೆ ಎಂದು ಹೇಳಿದರು.ಆ.30ರಂದು ಶಿರಾದಲ್ಲಿ ಬೃಹತ್ ಉದ್ಯೋಗ ಮೇಳ ನಡೆಸುವ ಮೂಲಕ ಸ್ಥಳೀಯರಿಗೆ ಉದ್ಯೋಗಾವಕಾಶ ಒದಗಿಸಲಾಗುವುದು ಎಂದರು.

ಬರಪೀಡಿತ ತಾಲೂಕುಗಳ ಪಟ್ಟಿ:
ದೇವನಹಳ್ಳಿ, ಕನಕಪುರ, ಬಂಗಾರಪೇಟೆ, ಕೋಲಾರ, ಮುಳಬಾಗಿಲು, ಶ್ರೀನಿವಾಸಪುರ, ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಚಿಂತಾಮಣಿ, ಗೌರಿಬಿದನೂರು, ಗುಡಿಬಂಡೆ, ಶಿಡ್ಲಘಟ್ಟ ತಾಲೂಕುಗಳು ಬರಪೀಡಿತವೆಂದು ಘೊಷಿಸಲಾಗಿದೆ.ಕುಣಿಗಲ್, ಮಧುಗಿರಿ, ಪಾವಗಡ, ಶಿರಾ, ತುಮಕೂರು, ಚಳ್ಳಕೆರೆ, ಚಿತ್ರದುರ್ಗ, ಮೊಳಕಾಲ್ಮೂರು, ಹರಪನಹಳ್ಳಿ, ಹರಿಹರ, ಜಗಳೂರು, ಚಾಮರಾಜನಗರ, ಕೊಳ್ಳೇಗಾಲ, ಮೈಸೂರು, ಹೆಗ್ಗಡದೇವನಕೋಟೆ, ನಂಜನಗೂಡು,ಕೆ.ಆರ್.ಪೇಟೆ, ಟಿ.ನರಸೀಪುರ, ಮದ್ದೂರು, ಮಳವಳ್ಳಿ, ನಾಗಮಂಗಲ ತಾಲೂಕುಗಳು ಸೇರಿದಂತೆ 114 ತಾಲೂಕುಗಳು ಬರಪೀಡಿತವೆಂದು ಸರ್ಕಾರ ಘೋಷಣೆ ಮಾಡಿದೆ ಎಂದು ಹೇಳಿದರು.

Write A Comment