ಬಿಸಿ ಹಾಲು -2 ಬಟ್ಟಲು
ಸಕ್ಕರೆ – ಒಂದು ಬಟ್ಟಲು
ತುಪ್ಪ – ಅರ್ಧ ಬಟ್ಟಲು
ಏಲಕ್ಕಿ ಪುಡಿ – ಸ್ವಲ್ಪ
ಬಾದಾಮಿ – 5-6
ಮಾಡುವ ವಿಧಾನ
ಬಿಸಿ ಹಾಲಿನಲ್ಲಿ ಖರ್ಜೂರವನ್ನು ಕಮ್ಮಿಯೆಂದರೂ 3 ಗಂಟೆಗಳ ಕಾಲ ನೆನೆ ಹಾಕಬೇಕು. ನಂತರ ಮಿಕ್ಸಿಯಲ್ಲಿ ಹಾಕಿ ರುಬ್ಬಿ ಪೇಸ್ಟ್ ಮಾಡಿಕೊಳ್ಳಬೇಕು.
ನಂತರ ತಟ್ಟೆಯೊಂದಕ್ಕೆ ತುಪ್ಪ ಸವರಿಟ್ಟುಕೊಳ್ಳಬೇಕು.
ಒಲೆಯ ಮೇಲೆ ಬಾಣಲೆಯೊಂದಕ್ಕ ತುಪ್ಪ ಹಾಕಿ ಬಿಸಿ ಮಾಡಿ. ಇದಕ್ಕೆ ರುಬ್ಬಿಕೊಂಡ ಖರ್ಜೂರದ ಪೇಸ್ಟ್ ಹಾಗೂ ಸಕ್ಕರೆ ಹಾಕಿ. ಸಕ್ಕರೆ ಸಂಪೂರ್ಣವಾಗಿ ಕರಗುವವರೆಗೆ ಸೌಟ್ ನಿಂದ ಕೈಯಾಡಿಸಿ.
ನಂತರ ಏಲಕ್ಕಿ ಹಾಕಿ. ಈ ಮಿಶ್ರಣವನ್ನು ತುಪ್ಪಸವರಿಸ ತಟ್ಟೆಗೆ ಹಾಕಿ ಅದರ ಮೇಲೆ ಬಾದಾಮಿಯನ್ನು ಉದುರಿಸಿ ತಣ್ಣಾಗಾಗಲು ಬಿಡಿ.
ತಣ್ಣಗಾದ ಮೇಲೆ ಬೇಕಾದ ಆಕಾರದಲ್ಲಿ ಕತ್ತರಿಸಿಕೊಂಡರೆ ಖರ್ಜೂರದ ಹಲ್ವಾ ತಯಾರಾಗುತ್ತದೆ.