ಕಲಬುರಗಿ: ಆಡಳಿತದಲ್ಲಿ ಪಾರದರ್ಶಕತೆ, ಸಾಮರ್ಥ್ಯ ವೃದ್ಧಿಗೆ ರಾಜ್ಯ ಸರ್ಕಾರ ವಿಶ್ವವಿದ್ಯಾಲಯಗಳಲ್ಲಿ ಇನ್ಪಾರ್ವೆಶನ್ ಆಂಡ್ ಕಮ್ಯುನಿಕೇಶನ್ ಟೆಕ್ನಾಲಜಿ(ಐಸಿಟಿ) ಅಳವಡಿಕೆಗೆ ಮುಂದಾಗಿದೆ. ಈ ಮೂಲಕ ವಿವಿಗಳ ಒಟ್ಟಾರೆ ಚಟುವವಟಿಕೆ ಮೇಲೆ ನಿಗಾ ಇರಿಸಲು ಚಿಂತನೆ ನಡೆಸಿದೆ.
ನ್ಯಾಷನಲ್ ಇನ್ಪಾರ್ವೆಟಿಕ್ ಸೆಂಟರ್ (ಎನ್ಐಸಿ) ಸಹಯೋಗ ದಡಿ ಈ ತಂತ್ರಜ್ಞಾನ ಅಳವಡಿಕೆಗೆ ಯೋಜಿಸಲಾಗಿದೆ. ವಿವಿ ಆಡಳಿತ ದಲ್ಲಿನ ಕಡತಗಳು, ವಿದ್ಯಾರ್ಥಿಗಳ ಹಾಜರಾತಿ, ಪರೀಕ್ಷೆ, ಫಲಿತಾಂಶ, ವಿದ್ಯಾರ್ಥಿ-ಶಿಕ್ಷಕರ ದೈನಂದಿನ ಚಟುವಟಿಕೆ, ಸ್ಮಾರ್ಟ್ ಕ್ಲಾಸ್ ರೂಂ, ಇಂಟರ್ನಲ್ ಅಸೆಸ್ವೆುಂಟ್ ಸಹಿತ ಬಹುತೇಕ ಚಟುವಟಿಕೆಗಳು ಇನ್ಮುಂದೆ ತಂತ್ರಜ್ಞಾನದ ಮೂಲಕ ನಿರ್ವಹಣೆಯಾಗಲಿವೆ.
ವಿದ್ಯಾರ್ಥಿಗಳ ಪ್ರವೇಶದಿಂದ ಆರಂಭವಾಗಿ ವ್ಯಾಸಂಗ ಪೂರ್ಣ ಗೊಳಿಸಿ ಫಲಿತಾಂಶದೊಂದಿಗೆ ಹೊರ ಹೋಗುವವರೆಗಿನ ಎಲ್ಲ ಚಟುವಟಿಕೆ ಗಳೂ ಇನ್ಮುಂದೆ ಆನ್ಲೈನ್ ಸಿಸ್ಟಂನಲ್ಲಿ ಅಳವಡಿಕೆ, ಪ್ರಾಧ್ಯಾಪಕರಿಗೆ ಲ್ಯಾಪ್ಟಾಪ್ ಒದಗಿಸುವ ಮೂಲಕ ವಿದ್ಯಾರ್ಥಿಗಳ ಹಾಜರಾತಿ ನಿರ್ವಹಣೆ, ಆನ್ಲೈನ್ ಇಂಟರ್ನಲ್ಅಸೆಸ್ವೆುಂಟ್, ಸ್ಮಾರ್ಟ್ ಕ್ಲಾಸ್ ರೂಂ ಸದ್ಬಳಕೆಗೆ ಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ವಿಶ್ವವಿದ್ಯಾಲಯ ಮಟ್ಟದ ಜತೆಗೆ ಜಿಲ್ಲಾ ಕೇಂದ್ರಗಳಲ್ಲೂ ಈ ವ್ಯವಸ್ಥೆ ಅಳವಡಿಕೆಗೆ ಸರ್ಕಾರ ಮುಂದಾಗಿದೆ. ಕಡತಗಳ ಗಣಕೀಕರಣ ಮೂಲಕ ಆಯಾ ಕಡತಗಳ ಸ್ಥಿತಿಗತಿ ಬಗ್ಗೆ ತಿಳಿದು ಕೊಳ್ಳಬಹುದಾಗಿದೆ. ಬೆಂಗಳೂರಿನ ಕೇಂದ್ರ ಕಚೇರಿಗೆ ಸಿಸ್ಟಂ ಮೂಲಕ ವಿವಿಗಳ ಲಿಂಕ್ ನೀಡಲಾಗುತ್ತಿದೆ.
ಎಲ್ಲವೂ ಆನ್ಲೈನ್: ಆನ್ಲೈನ್ ಅಡ್ಮಿಷನ್, ಡಿಜಿಟಲ್ ಮೌಲ್ಯಮಾಪನದೊಂದಿಗೆ ಪರೀಕ್ಷಾ ಮ್ಯಾನೇಜ್ವೆುಂಟ್ ಸಿಸ್ಟಂ, ಡಿಪಾರ್ಟ್ವೆುಂಟಲ್ ವಿಚಾರಣೆ, ಗ್ರಿವೆನ್ಸ್ ಮ್ಯಾನೇಜ್ವೆುಂಟ್, ಆನ್ಲೈನ್ನಲ್ಲಿ ದಾಖಲೆಗಳ ಪರಿಶೀಲನೆಯ ಸಾಫ್ಟ್ ವೇರ್ ಎನ್ಐಸಿ ಅಭಿವೃದ್ಧಿಪಡಿಸಿದೆ. ವಿವಿಗಳಲ್ಲಿ ಲಭ್ಯವಿರುವ ಮಾನವ ಸಂಪನ್ಮೂಲ, ಅನುದಾನ ಬಳಕೆ ಮೂಲಕ ಈ ಸಿಸ್ಟಂ ಜಾರಿಗೊಳಿಸಲು ಉನ್ನತ ಶಿಕ್ಷಣ ಇಲಾಖೆ ಸೂಚಿಸಿದೆ. ಎನ್ಐಸಿ ಅಭಿವೃದ್ಧಿಪಡಿಸಿರುವ ಪರೀಕ್ಷಾ ಮ್ಯಾನೇಜ್ವೆುಂಟ್ ಸಿಸ್ಟಂ ಜಾರಿಯಾದ ನಂತರ ಸಾಂಪ್ರದಾಯಿಕ ಮೌಲ್ಯಮಾಪನ ಪದ್ಧತಿ ಕೈಬಿಡುವಂತೆಯೂ ಇಲಾಖೆ ತಿಳಿಸಿದೆ.
***
ಸ್ಮಾರ್ಟ್ ಕ್ಲಾಸ್
ಇ-ಕ್ಲಾಸ್ ರೂಂ, ಸ್ಮಾರ್ಟ್ ಕ್ಲಾಸ್ ರೂಂ ವ್ಯವಸ್ಥೆ ಮಾಡಿ ಎಲ್ಸಿಡಿ, ಇಂಟರ್ನೆಟ್ ಒದಗಿಸಲಾಗುತ್ತಿದೆ. ವಿವಿ ಶಿಕ್ಷಕರು ಲ್ಯಾಪ್ಟಾಪ್ನೊಂದಿಗೆ ತರಗತಿಗೆ ಹೋಗಬೇಕು. ಇದರಲ್ಲಿ ವಿದ್ಯಾರ್ಥಿಗಳ ಮಾಹಿತಿ ಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂದು ಉನ್ನತ ಶಿಕ್ಷಣ ಇಲಾಖೆ ಸೂಚಿಸಿದೆ. ವಿವಿಗಳ ಈ ಹಿಂದಿನ 5 ವರ್ಷದ ಪ್ರಶ್ನೆಪತ್ರಿಕೆಗಳನ್ನೂ ಈ ಸಿಸ್ಟಂ ವ್ಯಾಪ್ತಿಗೆ ಸೇರಿಸá-ವಂತೆ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳೂ ಸೂಚಿಸಿದ್ದಾರೆ. ಈ ಮೂಲಕ ವಿದ್ಯಾರ್ಥಿಗಳು ಪರೀಕ್ಷೆಗೆ ಪೂರ್ವಸಿದ್ಧತೆ ಮಾಡಿಕೊಳ್ಳಲು ಅನುಕೂಲವಾಗಲಿದೆ.