ಬೆಂಗಳೂರು: ದೇಶಾದ್ಯಾಂತ 69ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮನೆಮಾಡಿದೆ. ರಾಜ್ಯ ರಾಜ್ಯಧಾನಿಯಲ್ಲಿಯೂ ಸ್ವಾತಂತ್ರ್ಯ ದಿನದ ಸಂಭ್ರಮ ಮೊಳಗಿದೆ. ರಾಜ್ಯದ ಜನೆತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ 69ನೇ ಸ್ವಾತಂತ್ರೋತ್ಸವ ದಿನಾಚರಣೆಯ ಶುಭಾಷಯಗಳನ್ನು ಕೋರಿದ್ದಾರೆ.
ಮಣಿಕ್ ಷಾ ಪರೇಡ್ ಮೈದಾನದಲ್ಲಿ 3ನೇ ಬಾರಿ ಧ್ವಜಾರೋಹಣ ನೆರವೇರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ತೆರೆದ ವಾಹನದಲ್ಲಿ ನಿಂತು ಕವಾಯಿತು ವೀಕ್ಷಿಸಿದರು. ರೆಡ್ ರಕ್ಷಣಾ ಪಡೆ, ಪೊಲೀಸ್ ತುಕಡಿಗಳು, ಹೋಮ್ ಗಾರ್ಡ್, ಎನ್’ಸಿಸಿ ಹಾಗೂ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ಮೈದಾನದಲ್ಲಿ 2000 ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಿದ್ದಾರೆ.
ಬುಲೆಟ್ ಫ್ರೂಫ್ ಪೆಟ್ಟಿಗೆಯಲ್ಲಿ ನಿಂತು ಸಿಎಂ ಭಾಷಣ ಮಾಡಿದ್ದು, ಇದು ತ್ಯಾಗ, ಬಲಿದಾನಗಳನ್ನು ನೆನಪಿಸಿಕೊಳ್ಳುವ ದಿನವಾಗಿದೆ. ಅಷ್ಟೇ ಅಲ್ಲದೇ, ನಮ್ಮ ಹಿರಿಯರ ಕನಸುಗಳನ್ನು ಈಡೇರಿಸಬೇಕಿದೆ ಎಂದರು.
ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಸಿಎಂ ಮಾಡಿದ ಭಾಷಣದ ಪ್ರಮುಖಾಂಶಗಳು ಹೀಗಿವೆ:
ಹಿರಿಯರ ತ್ಯಾಗ ಬಲಿದಾನ ನೆನಪಿಸಿಕೊಂಡರೆ ಸಾಲದು. ಅವರ ಕನಸುಗಳನ್ನು ನನಸು ಮಾಡಬೇಕಾಗಿದೆ. ಸ್ವಾತಂತ್ರ್ಯಾನಂತರ ದೇಶ ಬಹಳಷ್ಟು ಅಭಿವೃದ್ಧಿಯಾಗಿದೆ.
68 ವರ್ಷದಲ್ಲಿ ದೇಶ ಅಪಾರವಾದ ಫಲ ಕಂಡಿದೆ. ರಾಜ್ಯದ ಕಟ್ಟಕಡೆಯ ಮನುಷ್ಯನಿಗೂ ಪ್ರಾಥಮಿಕ ಅವಶ್ಯಕತೆಯ ಲಾಭ ಲಭಿಸಬೇಕು
ರಾಜ್ಯದ ದುಡಿಯುವ ಕೈಗಳಿಗೆ ಉದ್ಯೋಗ ಸಿಗಬೇಕು. ಕಳೆದ 2 ವರ್ಷಗಳಿಂದ ಹಲವು ಯೋಜನೆಗಳು ಜಾರಿ. ರಾಜ್ಯ ಸರ್ಕಾರ ಕೈಗೊಂಡ ಯೋಜನೆ ಉತ್ತಮ ಫಲ ನೀಡಿದೆ
ರಾಜ್ಯದ ನಾಗರಿಕರು ನಮ್ಮ ಯೋಜನೆ ಸ್ವಾಗತಿಸಿದ್ದಾರೆ. ನಮ್ಮ ಯೋಜನೆಗಳ ಪ್ರಯೋಜನ ಪಡೆದುಕೊಂಡಿದ್ದಾರೆ.
ಇಂದು ನಮ್ಮ ಅನ್ನದಾತರು ಕಷ್ಟದಲ್ಲಿದ್ದಾರೆ. ರೈತರು ಸಮಸ್ಯೆಯ ಪ್ರಮಾಣ ತುಂಬಾನೇ ದೊಡ್ಡದು. ಸರ್ಕಾರದಿಂದ ಎಲ್ಲಾ ಸಮಸ್ಯೆಗಳ ಪರಿಹಾರ ಸಾಧ್ಯವಿಲ್ಲ.
ಸ್ವಾತಂತ್ರ್ಯ ದಿನಾಚರಣೆ ಸಂಭ್ರಮವನ್ನು ಅನುಭವಿಸುವ ಮನಸ್ಥಿತಿಯಲ್ಲಿ ನಾನಿಲ್ಲ. ಸಂತಸ- ಸಂಭ್ರಮದ ಜೊತೆಯಲ್ಲಿಯೇ ನೋವಿನ ಎಳೆಯೊಂದು ಹೃದಯವನ್ನು ಕಲಕುತ್ತಿದೆ.
ರಾಜ್ಯ ಸರ್ಕಾರವೊಂದರಿಂದಲೇ ಈ ಸಮಸ್ಯೆಯನ್ನು ಪರಿಹರಿಸಲಾಗದು. ಕೇಂದ್ರ ಸರ್ಕಾರ ಕೂಡಾ ಇಂದಕ್ಕೆ ಕೈಜೋಡಿಸಬೇಕಾಗುತ್ತದೆ.
ಜುಲೈ ತಿಂಗಳೊಂದರಲ್ಲೇ 182 ರೈತರು ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ.
ರೈತರ ಸಮಸ್ಯೆ ಪರಿಹಾರಕ್ಕಾಗಿ ಸಹಾಯವಾಣಿ ತೆರೆದಿದ್ದೇವೆ. ಕರೆ ಮಾಡಿ ರೈತರು ತಮ್ಮ ಕಷ್ಟಗಳನ್ನು ಹೇಳಿಕೊಳ್ಳಬಹುದು. ಆರೋಗ್ಯವಾಣಿ ಜತೆಯಲ್ಲಿಯೇ ಸಹಾಯವಾಣಿ ಆರಂಭ.
ಆರೋಗ್ಯ ಇಲಾಖೆಯಿಂದ ಆರೋಗ್ಯವಾಣಿ-104 ಆರಂಭ
ರೈತರ ಸಹಾಯವಾಣಿ ಸಂಖ್ಯೆ 1800 -435 -3553
ಕೃಷ್ಟಿ ಆರೋಗ್ಯ ಇಲಾಖೆ ಜಂಟಿ ಸಮಾವೇಶ. ಜಿಲ್ಲಾ ತಾಲೂಕ ಮಟ್ಟದಲ್ಲಿ ರೈತರ ಸಮಾವೇಶ
ಕೃಷಿ ತರಬೇತಿ ಕೇಂದ್ರ, ಕೃಷ್ಟಿ ತಂತ್ರಜ್ಞಾನ ಸಭೆ ಆಯೋಜನೆ. ವೈದ್ಯಾಧಿಕಾರಿಗಳು, ಮನಃ ಶಾಸ್ತ್ರಜ್ಞರಿಂದ ರೈತರ ಕೌನ್ಸಿಲಿಂಗ್. ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಸರ್ಕಾರ ಕಟಿಬದ್ಧ
2014-15ನೇ ಸಾಲಿನಲ್ಲಿ ರು. 204.30 ಕೋಟಿ ಪರಿಹಾರ. 9 ಜಿಲ್ಲೆಗಳ ರೈತರಿಗೆ ಪರಿಹಾರ ಹಣ ವಿತರಣೆ ಮಾಡಿದ್ದೇವೆ. ಆಲಿಕಲ್ಲು ಮಳೆಯಿಂದ ಬೆಳೆ ಕಳೆದುಕೊಂಡಿದ್ದ ರೈತರು. ಮಳೆಯಿಂದಾದ ಬೆಳೆಹಾನಿಗೆ ರು. 65.55 ಕೋಟಿ ಪರಿಹಾರ.
ರೈತರ ಆತ್ಮಹತ್ಯೆ ಕೇಸ್ ಗಳ ವರದಿಗಳ ಸಮಗ್ರ ಪರಿಶೀಲನೆ. ಎಲ್ಲಾ ಜಿಲ್ಲೆಗಳಲ್ಲಿ ಎಸಿಗಳ ಸಮಿತಿ ಪರಿಶೀಲನೆ ನಡೆಸುತ್ತಿದೆ.
ಅಕ್ರಮದಲ್ಲಿ ತೊಡಗಿರುವ ಲೇವಾದೇವಿದಾರರ ವಿರುದ್ಧ ಕ್ರಮ. ಈ ಸಂಬಂಧ ರಾಜ್ಯ ಮಟ್ಟದ ಬ್ಯಾಂಕರ್ ಗಳ ಸಮಿತಿ ನಡೆದಿದೆ. ಕೃಷಿ ಸಾಲ ಪ್ರಮಾಣ ಹೆಚ್ಚಿಸುವ ಬಗ್ಗೆ ಚಿಂತನೆ ನಡೆದಿದೆ.