ಬೆಂಗಳೂರು: ಬಿಎಸ್ಎನ್ಎಲ್ ಆಡಳಿತರೂಢ ಕಾಂಗ್ರೆಸ್ ಸರ್ಕಾರಕ್ಕೆ ಶಾಕ್ ನೀಡಿದ್ದು, ಸುಮಾರು 1 ಕೋಟಿ ರುಪಾಯಿ ಬಿಲ್ ಬಾಕಿ ಉಳಿಸಿಕೊಂಡಿದ್ದ ರಾಜ್ಯ ಸರ್ಕಾರದ ಎಲ್ಲಾ ಸಚಿವರ ಮನೆ ಹಾಗೂ ಕಚೇರಿಯ ದೂರವಾಣಿ ಸಂಪರ್ಕವನ್ನು ಕಡಿತಗೊಳಿಸಿದೆ.
ಗೃಹ ಸಚಿವ ಕೆ.ಜೆ. ಜಾರ್ಜ್, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಹಾಗೂ ಕಾನೂನು ಸಚಿವ ಟಿ.ಬಿ. ಜಯಚಂದ್ರ ಸೇರಿದಂತೆ ಎಲ್ಲಾ ಸಚಿವರ ವಿಧಾನಸೌಧದ ಕಚೇರಿ ಹಾಗೂ ಬಂಗಲೆಯ ದೂರವಾಣಿ ಸಂಪರ್ಕವನ್ನು ಬಿಎಸ್ ಎನ್ ಎಲ್ ಕಡಿತಗೊಳಿಸಿದೆ.
ಸುಮಾರು 1 ಕೋಟಿ ರುಪಾಯಿಗೂ ಅಧಿಕ ಮೊತ್ತದ ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡಿದ್ದರಿಂದ ಬಿಎಸ್ಎನ್ಎಲ್ ಈ ಕ್ರಮ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ವಿಧಾನಸೌಧದಲ್ಲಿ ಬಿಲ್ ಪಾವತಿಸದ ದೂರವಾಣಿಗಳು ಮಾತ್ರ ಕೆಲಸ ಮಾಡುತ್ತಿಲ್ಲ. ಕೆಲ ಕಚೇರಿಗಳಲ್ಲಿ ಬಿಲ್ ಪಾವತಿಸಿರುವ ಕಾರಣ ದೂರವಾಣಿ ಸಂಪರ್ಕದಲ್ಲಿ ಯಾವುದೇ ತೊಂದರೆ ಇಲ್ಲ. ಆದರೆ ಬಹುತೇಕ ಸಚಿವರ ಕಚೇರಿಗಳ ದೂರವಾಣಿ ಸಂಪರ್ಕ ಕಡಿತಗೊಂಡಿವೆ ಎನ್ನಲಾಗಿದೆ.