ಕರ್ನಾಟಕ

ದಂತ ಮಾರಾಟ ಇಬ್ಬರ ಬಂಧನ

Pinterest LinkedIn Tumblr

varturu

ಬೆಂಗಳೂರು, ಆ.12: ಜವಳಗೆರೆ ಅರಣ್ಯ ಪ್ರದೇಶದಲ್ಲಿ ಆನೆಗಳನ್ನು ಕೊಂದು ದಂತಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಬಂಧಿಸಿರುವ ವರ್ತೂರು ಪೊಲೀಸರು ಸುಮಾರು 10 ಕೆ.ಜಿ. ತೂಕದ ಎರಡು ಆನೆ ದಂತಗಳನ್ನು ವಶಪಡಿಸಿಕೊಂಡಿದ್ದಾರೆ.

ಕಾಡುಶಿವನಹಳ್ಳಿಯ ಮುನಿರಾಜ (30) ಹಾಗೂ ಬಂಡೆದೊಡ್ಡಿಯ ಪ್ರಶಾಂತ್‍ಕುಮಾರ್ (22) ಬಂಧಿತ ಆರೋಪಿಗಳಾಗಿದ್ದಾರೆ. ಕನಕಪುರ ತಾಲ್ಲೂಕಿನ ಬಂಧಿತ ಆರೋಪಿಗಳು ತಮಿಳುನಾಡಿನ ಜವಳಗೆರೆ ಅರಣ್ಯ ಪ್ರದೇಶದಲ್ಲಿ ಎರಡು ಆನೆಗಳನ್ನು ಕೊಂದು ಅವುಗಳ ದಂತಗಳನ್ನು ನಗರಕ್ಕೆ ತಂದು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ವರ್ತೂರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಆರೋಪಿಗಳು ಮಾರಾಟ ಮಾಡಲು ತಂದಿದ್ದ ದಂತಗಳನ್ನು ವಶಪಡಿಸಿಕೊಂಡು ಅವರು ನೀಡಿದ ಮಾಹಿತಿ ಆಧರಿಸಿ ತಮಿಳುನಾಡಿನ ಜವಳಗೆರೆಗೆ ತೆರಳಿ ಪರಿಶೀಲನೆ ನಡೆಸಿಕೊಂಡು ಬರಲಾಗಿದೆ ಎಂದು ಡಿಸಿಪಿ ಡಾ. ರೋಹಿಣಿ ಕಟೋಚ್ ತಿಳಿಸಿದ್ದಾರೆ.

Write A Comment