ಕರ್ನಾಟಕ

ಆ.16ರಿಂದ ಜಯನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಡಾ.ವಿಷ್ಣು ಟೆನ್ನಿಸ್‍ಬಾಲ್ ಕ್ರಿಕೆಟ್ ಪಂದ್ಯಾವಳಿ

Pinterest LinkedIn Tumblr

vishnu

ಬೆಂಗಳೂರು ಆ,12: ಸ್ನೇಹಲೋಕ ಕ್ರಿಕೆಟ್ ಕ್ಲಬ್ ವತಿಯಿಂದ ಹಿರಿಯನಟ “ಡಾ.ವಿಷ್ಣುವರ್ಧನ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ”ಯನ್ನು ಇದೇ ತಿಂಗಳ 16ರಿಂದ ಜಯನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ.

ಕ್ರಿಕೆಟ್ ಪಂದ್ಯಾವಳಿಯಲ್ಲಿ 16 ವಿವಿಧ ತಂಡಗಳು ಭಾಗಿಯಾಗಲಿವೆ. ಕ್ರೆಕೆಟ್ ಪಂದ್ಯಾವಳಿಯಿಂದ ಬರುವ ಹಣವನ್ನು ಬಡ ಮತ್ತು ನಿರ್ಗತಿಕ ಮಕ್ಕಳ ವಿದ್ಯಾಬ್ಯಾಸ ಸೇರಿದಂತೆ ಇನ್ನಿತರೆ ಸಮಾಜಮುಖಿ ಕೆಲಸ ಕಾರ್ಯಗಳಿಗೆ ಬಳಸಲಾಗುವುದು.ಈ ಭಾರಿಯೂ ಎಸ್.ಬಿ.ಐ ಪ್ರಾಯೋಜಕತ್ವ ವಹಿಸಿದೆ ಎಂದು ಹಿರಿಯ ನಟಿ ಭಾರತಿವಿಷ್ಣುವರ್ಧನ್,ಹಿರಿಯ ನಟ ಎಸ್.ಶಿವರಾಮ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಈ ಭಾರಿಯಿಂದ ಮಹಿಳಾ ಕ್ರಿಕೆಟ್ ಪಂದ್ಯಾವಳಿಯನ್ನೂ ಆಯೋಜಿಸಲು ನಿರ್ಧರಿಸಲಾಗಿದೆ ಎಂದ ಅವರು, ವಿಷ್ಣುವರ್ಧನ್ ಅವರು ಚಿತ್ರ ತಾರೆಯರನ್ನು ಕ್ರಿಯಾಶೀಲರಾಗಿಸಲು ಕಟ್ಟಿದ ಸಂಸ್ಥೆ ಸ್ನೇಹಲೋಕ ಕ್ರಿಕೆಟ್ ಪಂದ್ಯಾವಳಿ ಇಂದಿಗೂ ಕೂಡ ಸದಾ ಕ್ರಿಯಾಶೀಲವಾಗಿದೆ ಎಂದರು.

ರಾಜ್ಯದ ವಿವಿಧ ಭಾಗಗಳಲ್ಲಿ ಸ್ನೇಹಲೋಕ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸುವ ಚಿಂತನೆ ಇದೆ. ಇದರ ಜೊತೆಗೆ ವಾಲಿಬಾಲ್ ಕಬ್ಬಡ್ಡಿ ಪಂದ್ಯಾವಳಿಯನ್ನೂ ಅಯೋಜಿಸುವ ಬಗ್ಗೆ ಮಾತುಕತೆ ನಡೆಯುತ್ತಿವೆ ಎಂದು ಹೇಳಿದರು.

ಈ ತಿಂಗಳ 16ರಂದು ನಡೆಯಲಿರುವ ಪಂದ್ಯದ ಉದ್ಘಾಟನಾ ವೇಳೆ ಹಿರಿಯ ಕ್ರಿಕೆಟಿಗರಾದ ಸಯ್ಯದ್ ಕೀರ್ಮಾನಿ,ಗಿ.ಆರ್ ವಿಶ್ವನಾಥ್,ಬಿ.ರಘುನಾಥ್ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.

ಎಸ್.ಬಿ,ಐನ ಪ್ರಧಾನ ಮುಖ್ಯ ವ್ಯವಸ್ಥಾಪಕಿ ರಜನಿ ಮಿಶ್ರಾ ಮಾತನಾಡಿ, ಎಸ್‍ಬಿಐ ಸಾಮಾಜಿಕ ಕೆಲಸಗಳು ಮತ್ತು ಕ್ರೀಡೆಯನ್ನು ಪ್ರೋತ್ಸಾಹಿಸಲು ಸದಾ ಮುಂದೆ ಇರಲಿದೆ ಅದೇ ರೀತಿ ಡಾ.ವಿಷ್ಣುವರ್ಧನ್ ಕ್ರಿಕೆಟ್ ಪಂದ್ಯಾವಳಿಯನ್ನೂ ಉತ್ತೇಜಿಸಲಾಗುತ್ತಿದೆ ಎಂದರು.

Write A Comment