ಬೆಂಗಳೂರು, ಆ.12: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವರಾದಿಯಾಗಿ ಶಾಸಕರು ಇಂದು ಹುಟ್ಟುಹಬ್ಬದ ಶುಭಾಶಯ ಕೋರಿದರು.ಅಂಗವಾಗಿ ಮುಖ್ಯಮಂತ್ರಿಗಳಿಗೆ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಸಹ ಮುಖ್ಯಮಂತ್ರಿಗಳ ನಿವಾಸಕ್ಕೆ ಆಗಮಿಸಿ ಶುಭಾಶಯ ಹೇಳಿದರು. ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟರ್ ಮಾಡಿದ್ದರೆ, ಸೋನಿಯಾಗಾಂಧಿ ಹಾಗೂ ರಾಹುಲ್‌ಗಾಂಧಿ ದೂರವಾಣಿ ಮೂಲಕ ಸಿದ್ದರಾಮಯ್ಯ ಅವರಿಗೆ ಶುಭ ಕೋರಿದರು.
ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಶುಭಾಶಯ ಕೋರಲು ಅಭಿಮಾನಿಗಳು, ಕಾರ್ಯಕಕರ್ತರು, ಮುಖಂಡರು ಆಗಮಿಸಿದರಾದರೂ ಅಷ್ಟು ದೊಡ್ಡ ಪ್ರಮಾಣದಲ್ಲಿ ಜನಜಂಗುಳಿ ಮಾತ್ರ ಇರಲಿಲ್ಲ.
ಬೊಕ್ಕೆ ತಂದು ಕೋಪಕ್ಕೆ ಗುರಿಯಾದರು: ಮುಖ್ಯಮಂತ್ರಿಯವರ ಕಟ್ಟುನಿಟ್ಟಿನ ಸೂಚನೆಯನ್ನು ಮರೆತು ಬೊಕ್ಕೆಯೊಂದಿಗೆ ಶುಭಾಶಯ ಕೋರಲು ಕೆಲ ಮುಖಂಡರು ಮುಂದಾದಾಗ ಸಿದ್ದರಾಮಯ್ಯ ಅದನ್ನು ನಿರಾಕರಿಸಿದರಲ್ಲದೆ ಅವರ ಈ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದರು.ಕಟ್ಟುನಿಟ್ಟಿನ ಸೂಚನೆ ಇದ್ದರೂ ಸಚಿವ ಆಂಜನೇಯ ಅವರು ಮುಖ್ಯಮಂತ್ರಿ ನಿವಾಸದ ಬಳಿ ಶುಭಾಶಯ ಕೋರುವ ದೊಡ್ಡ ದೊಡ್ಡ ಬ್ಯಾನರ್‌ಗಳನ್ನು ಹಾಕಿಸಿದ್ದರು.