ಲೋಕಸಭಾ ಚುನಾವಣೆಯ ಸೋಲಿನಿಂದ ಕಂಗೆಟ್ಟು ವಿದೇಶಕ್ಕೆ ಹಾರಿದ್ದ ನಟಿ, ಮಾಜಿ ಸಂಸದೆ ರಮ್ಯಾ ಇದೀಗ ಮಂಡ್ಯದ ರಾಜಕೀಯದಲ್ಲಿ ಗಟ್ಟಿಯಾಗುವ ಲಕ್ಷಣ ಕಂಡು ಬರುತ್ತಿದ್ದು ಇದಕ್ಕೆ ಪುಷ್ಟಿ ನೀಡುವಂತೆ ನಿನ್ನೆ ಸಚಿವ ಅಂಬರೀಷ್ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಹೌದು. ವಿದೇಶದಿಂದ ಮರಳಿದ ನಂತರ ಆತ್ಮಹತ್ಯೆಗೆ ಶರಣಾದ ರೈತರ ಮನೆಯಲ್ಲಿ ಕಾಣಿಸಿಕೊಂಡ ರಮ್ಯಾ ಅಚ್ಚರಿಗೆ ಕಾರಣರಾಗಿದ್ದರು. ಅಷ್ಟೇ ಅಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯಹಾಗೂ ಆಕೆಯ ‘ಗಾಡ್ ಫಾದರ್’ ಎಸ್ ಎಂ. ಕೃಷ್ಣಾ ಅವರನ್ನು ಭೇಟಿಯಾಗಿ ಮಾತುಕತೆಯನ್ನೂ ನಡೆಸಿದ್ದರು. ಇದರ ಜತೆಗೆ ಪೂನಾದಲ್ಲಿ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಅವರ ಜತೆಗೆ ಕಾಣಿಸಿಕೊಳ್ಳುವ ಮೂಲಕ ‘ರಾಜಕೀಯ ಚತುರತೆ’ ಪ್ರದರ್ಶಿಸಿದ್ದರು.
ಇದೀಗ ‘ಮಂಡ್ಯದ ಗಂಡು’ ಅಂಬರೀಷ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿರುವ ರಮ್ಯಾ ಅವರ ಆರೋಗ್ಯ ವಿಚಾರಿಸಿ ಆ ಮೂಲಕ ತಮ್ಮ ಮೇಲಿರುವ ಮುನಿಸನ್ನು ಶಮನ ಮಾಡುವ ಯತ್ನ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಒಟ್ಟಾರೆ ಇತ್ತೀಚಿನ ಬೆಳವಣಿಗೆಯನ್ನು ಗಮನಿಸಿದರೆ ರಮ್ಯಾ ಮತ್ತೆ ರಾಜಕೀಯಕ್ಕೆ ಎಂಟ್ರಿಯಾಗುವ ಲಕ್ಷಣಗಳು ಗೋಚರಿಸುತ್ತಿವೆ.