ಚಿಕ್ಕಮಗಳೂರು, ಆ.11: ನಗರದ ಬಾಬಾ ಬುಡನ್‌ಗಿರಿ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಚಾರಣಕ್ಕೆಂದು ಬಂದಿದ್ದ 10 ಮಂದಿ ಯುವಕರ ಪೈಕಿ ಇಬ್ಬರು ನಾಪತ್ತೆಯಾಗಿದ್ದು, ಅವರುಗಳ ಶೋಧಕ್ಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್‌ಬಾಬು ಅವರ ನೇತೃತ್ವದಲ್ಲಿ ಆರು ತಂಡಗಳನ್ನು ರಚಿಸಲಾಗಿದೆ.
ಹೈದ್ರಾಬಾದ್‌ನ ಖಾಸಗಿ ಕಂಪೆನಿಯೊಂದರಲ್ಲಿ ಲ್ಯಾಬ್ ಟೆಕ್ನಿಸಿಯನ್ ಆಗಿರುವ ವಿವೇಕ ಗುಪ್ತ ಮತ್ತು ಸಾಫ್ಟವೇರ್ ಇಂಜಿನಿಯರ್ ಶಶಿಧರ್ ಎಂಬುವವರೆ ನಾಪತ್ತೆಯಾದ ಯುವಕರಾಗಿದ್ದಾರೆ.ಉಪ ಅರಣ್ಯ ಸಂರಕ್ಷಣಾಧಿಕಾರಿ ಮಾಣಿಕ್ ಅವರನ್ನೊಳಗೊಂಡ ಅರಣ್ಯ ಸಿಬ್ಬಂದಿ, ಪೊಲಿಸರು ಹಾಗೂ ಅಡ್ವೆಂಚರ್ ಕ್ಲಬ್ ತಂಡದ ಸದಸ್ಯರು ಸೇರಿದಂತೆ 6 ತಂಡಗಳು ಇಂದು ಬೆಳಗ್ಗೆ 9 ರಿಂದಲೇ ಶೋಧ ಕಾರ್ಯ್ ಆರಂಭಿಸಿವೆ.
ವಿಪರೀತ ಶೀತಗಾಳಿ, ತುಂತುರು ಮಳೆಯ ನಡುವೆಯೂ ಕಾರ್ಯಾಣಚರಣೆ ಮುಂದುವರೆಸಲಾಗಿದೆ. ನಾಪತ್ತೆಯಾದ ಈ ಇಬ್ಬರ ಜೊತೆಯಲ್ಲಿ ಲಕ್ನೋದ ದಿಲೀಪ, ಹೈದ್ರಾಬಾದ್‌ನ ಸಾಫ್ಟ್‌ವೇರ್ ಇಂಜಿನಿಯರ್ ಚೈತನ್ಯ, ಲಕ್ಷ್ಮೀ ರೆಡ್ಡಿ, ದುಬೆ ಅಶುತೋಷ್, ಋಷುವಾ ಈ ಜೋಜಾನ್ ಹಾಗೂ ವಿಷ್ಣುವರ್ಧನ ಚಾರಣಕ್ಕೆ ತೆರಳಿದವರಾಗಿದ್ದಾರೆ. ನಾಪತ್ತೆಯಾಗಿರುವ ಇಬ್ಬರು ಯುವಕರು ಮೊಬೈಲ್ ಸಂಪರ್ಕಕ್ಕೂ ಸಿಗದ ಕಾರಣ ಕುಟುಂಬದ ಸದಸ್ಯರಲ್ಲಿ ತೀವ್ರ ಆತಂಕ ಉಂಟಾಗಿದೆ.