ಮೈಸೂರು: ಅರುಣಾಚಲ ಪ್ರದೇಶದಲ್ಲಿ ಪತನಗೊಂಡ ಹೆಲಿಕಾಪ್ಟರ್‌ನ ಅವಶೇಷಗಳು ಪತ್ತೆಯಾಗಿ ಆರು ದಿನಗಳು ಕಳೆದರೂ ಪೈಲಟ್ ಮೈಸೂರಿನ ರಾಜೀವ್ ಹೊಸಕೋಟೆ ಬಗ್ಗೆ ಯಾವುದೇ ಮಾಹಿತಿ ಸಿಗದೇ ಕುಟುಂಬ ಆತಂಕದಲ್ಲಿದೆ.
ನಗರದ ಅಗ್ರಹಾರ ರಾಮಾನುಜ ರಸ್ತೆಯ ನಿವಾಸಿಗಳಾದ ನಿವೃತ್ತ ಸಿವಿಲ್ ಎಂಜಿನಿಯರ್ ಮಂಜುನಾಥ್ ಮತ್ತು ವಾಣಿಶ್ರೀ ಅವರ ಪುತ್ರ ರಾಜೀವ್ ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರಿಂದ ಸುತ್ತಮುತ್ತಲಿನ ಜನರಲ್ಲೂ ಅವರ ನಾಪತೆ ಬಗ್ಗೆ ಆತಂಕ ಮನೆ ಮಾಡಿದೆ.
ಮಂಜುನಾಥ್ ಅವರಿಗೆ ರಾಜೀವ್ ಸೇರಿದಂತೆ ಮೂವರು ಮಕ್ಕಳಿದ್ದಾರೆ. ಕಿರಿಯ ಮಕ್ಕಳಾದ ರಕ್ಷಿತ್ ಮತ್ತು ರಮ್ಯಾ ಶಿಕ್ಷಣ ಮುಗಿಸಿ ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ರಾಜೀವ್ ಹೊಸದಿಲ್ಲಿಯಲ್ಲಿ ನೆಲೆಸಿದ್ದಘಿರು.
ಎಂಜಿನಿಯರಿಂಗ್ ವಿದ್ಯಾರ್ಥಿ: ನಗರದ ಸದ್ವಿದ್ಯಾ ಶಾಲೆ ಮತ್ತು ಕಾಲೇಜಿನ ವಿದ್ಯಾರ್ಥಿಯಾಗಿದ್ದ ರಾಜೀವ್, ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ವ್ಯಾಸಂಗಕ್ಕೆ ಸೇರಿ ಅರ್ಧದಲ್ಲೇ ಶಿಕ್ಷಣ ಮೊಟಕುಗೊಳಿಸಿ, ಬೆಂಗಳೂರು ಮತ್ತು ಚೆನ್ನೈನಲ್ಲಿ ಪೈಲಟ್ ತರಬೇತಿ ಪಡೆದಿದ್ದರು. ನಾಲ್ಕು ವರ್ಷಗಳ ಹಿಂದೆಯಷ್ಟೇ ಪವನ್ ಹನ್ಸ್ ಸಂಸ್ಥೆಯಲ್ಲಿ ಸಹ ಪೈಲಟ್ ಆಗಿ ಸೇರಿದ್ದರು. ಇತ್ತೀಚೆಗೆ ವಿವಾಹ ನಿಶ್ಚಯವಾಗಿದ್ದುಘಿ, ಕುಟುಂಬದವರು ಅಕ್ಟೋಬರ್ 6ಕ್ಕೆ ಮದುವೆ ನಿಗದಿಗೊಳಿಸಿದ್ದರು.
15 ದಿನದ ಹಿಂದಷ್ಟೇ ಬಂದಿದ್ದ: ‘ದಿಲ್ಲಿಯಲ್ಲಿ ಹೆಲಿಕಾಪ್ಟರ್ ಸಂಸ್ಥೆಯಲ್ಲಿ ಕೆಲಸ ಸಿಕ್ಕಾಗ ರಾಜೀವ್ ತಮ್ಮ ರಸ್ತೆಯಲ್ಲಿನ ಎಲ್ಲಾ ನಿವಾಸಿಗಳಿಗೂ ಸಿಹಿ ಹಂಚಿ ಸಂಭ್ರಮಿಸಿದ್ದರು. 15 ದಿನಗಳ ಹಿಂದೆಯಷ್ಟೇ ಮೈಸೂರಿಗೆ ಭೇಟಿ ನೀಡಿ, ಒಂದು ವಾರ ಮನೆಯವರೊಂದಿಗೆ ಕಳೆದಿದ್ದರು,” ಎನ್ನುತ್ತಾರೆ ನೆರೆ ಮನೆ ನಿವಾಸಿ ನರೇಶ್.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಚರಿಸುತ್ತಿದ್ದ ಹೆಲಿಕಾಪ್ಟರ್‌ಗೂ ಪೈಲಟ್ ಆಗಿ ರಾಜೀವ್ ಕಾರ್ಯ ನಿರ್ವಹಿಸಿದ್ದಾರೆ. 2013ರ ಆಗಸ್ಟ್ 19ರಂದು ಹೆಲಿಕಾಪ್ಟರ್‌ನಲ್ಲಿ ಬಂದ ಮುಖ್ಯಮಂತ್ರಿ ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ತಮ್ಮೊಂದಿಗೆ ಹೆಲಿಕಾಪ್ಟರ್‌ನಲ್ಲಿ ಬಂದ ನಟ ಕಮಲ್‌ಹಾಸನ್ ಮತ್ತು ವಿಷ್ಣು ವರ್ಧನ್ ಜತೆ ಸಹ ಫೋಟೋ ತೆಗೆಸಿಕೊಂಡಿದ್ದಾರೆ.
ಕಳೆದ ಮಂಗಳವಾರ ಕಾಪ್ಟರ್ ಪತನವಾಗಿದೆ ಎಂದು ಸಂಸ್ಥೆಯ ಅಕಾರಿಗಳು ಕುಟುಂಬದವರಿಗೆ ವಿಷಯ ತಿಳಿಸಿದ್ದರಿಂದ ಮಂಜುನಾಥ್ ಮತ್ತು ಅವರ ಕುಟುಂಬ ಆತಂಕಕ್ಕೀಡಾಗಿತ್ತು. ಮತ್ತೆ ಕರೆ ಮಾಡಿದ ಅಕಾರಿಗಳು, ”ರಾಜೀವ್ ಮೊಬೈಲ್ ರಿಂಗ್ ಆಗುತ್ತಿದೆ,” ಎಂದು ಹೇಳಿದ್ದರಿಂದ ಕುಟುಂಬದವರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದರೆ ಅನಂತರ ಯಾವುದೇ ಮಾಹಿತಿ ಸಿಗದ ಹಿನ್ನೆಲೆಯಲ್ಲಿ ರಾಜೀವ್ ತಂದೆ ಮಂಜುನಾಥ್, ಸಹೋದರ ರಕ್ಷಿತ್, ಸ್ನೇಹಿತ ಮೈಲ್ಯಾಕ್ ಮಾಜಿ ಅಧ್ಯಕ್ಷ ಮೈ.ವಿ. ರವಿಶಂಕರ್ ಬೆಂಗಳೂರಿಗೆ ತೆರಳಿ ವಿಮಾನ ಸಂಸ್ಥೆಯ ಅಕಾರಿಗಳ ಬಳಿ ವಿಚಾರಿಸಿದ್ದರು. ನಂತರ ಅವರೆಲ್ಲ ದಿಲ್ಲಿಗೆ ತೆರಳಿದ್ದುಘಿ, ರಾಜೀವ್ ಕುರಿತ ಮಾಹಿತಿಗಾಗಿ ಕಾಯುತ್ತಿದ್ದಾರೆ.