ಕರ್ನಾಟಕ

ಕಮರ್ಷಿಯಲ್ ಸ್ಟ್ರೀಟ್ ಬಳಿಯ ದವನಂ ಜ್ಯೂವಲೆರ‌ಸ್ ನಲ್ಲಿ ಕಳವು

Pinterest LinkedIn Tumblr

kalavuಬೆಂಗಳೂರು, ಆ.8- ಕಮರ್ಷಿಯಲ್ ಸ್ಟ್ರೀಟ್ ಬಳಿಯ ಕಾಮರಾಜ ಸ್ಟ್ರೀಟ್‌ನಲ್ಲಿರುವ ಮೂರು ಅಂಗಡಿಗಳಲ್ಲಿ ಕಳವಿಗೆ ಯತ್ನಿಸಿರುವ ಕಳ್ಳರು ದವನಂ ಜ್ಯುವಲರ್ಸ್ ಅಂಗಡಿಗೆ ಮಹಡಿ ಮೇಲಿನಿಂದ ನುಗ್ಗಿ ಹಣ-ಆಭರಣ ದೋಚಿ ಪರಾರಿಯಾಗಿದ್ದಾರೆ. ಕಾಮರಾಜ ಸ್ಟ್ರೀಟ್‌ನಲ್ಲಿರುವ ಚಾಬ್ರ555 ಎಂಬ ಸೀರೆ ಅಂಗಡಿಗೆ ನುಗ್ಗಿರುವ ಕಳ್ಳರು 15 ಸಾವಿರ  ಹಣ ದೋಚಿದ್ದಾರೆ. ನಂತರ ಪಕ್ಕದಲ್ಲಿದ್ದ ಮಾನ್ಯವರ್ ಫಾಸ್ಟ್ ಟ್ರಾಕ್ ಹಾಗೂ ರೀಡ್ ಅಂಡ್ ಟೈಲರ್ ಎಂಬ ಬಟ್ಟೆ  ಅಂಗಡಿಗಳ ಕಳವಿಗೆ ಯತ್ನಿಸಿದ್ದಾರೆ. ಅಲ್ಲಿಂದ ಮುಂದೆ ಬಂದ ಕಳ್ಳರು ದವನಂ ಜ್ಯುವೆಲರ್ಸ್  ಮಳಿಗೆ ದೋಚಿದ್ದಾರೆ.  ನೆಲಮಹಡಿಯಲ್ಲೇ ಆಭರಣ ಅಂಗಡಿಯಿದ್ದು, ಕಳ್ಳರು ಮೊದಲ ಮಹಡಿಯಿಂದ ಕೆಳಗೆ ಇಳಿದು ಕಳವು ಮಾಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಮಳಿಗೆ ಇರುವ ಕಟ್ಟಡದ ಪಕ್ಕದಲ್ಲೇ ಮತ್ತೊಂದು ಕಟ್ಟಡ ನಿರ್ಮಾಣ ಹಂತದಲ್ಲಿದ್ದು, ಆ ಕಟ್ಟಡದ ಮೂಲಕ ಮಹಡಿಗೆ ಹೋದ ಕಳ್ಳರು ಧವನಂ ಜ್ಯುವೆಲರ್ಸ್ದ ಮಳಿಗೆಯೊಳಕ್ಕೆ ಇಳಿದು ಹಣ, ಆಭರಣ ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಭರಣ ಅಂಗಡಿಗೆ ನುಗ್ಗಿದ ಕಳ್ಳರು ಕ್ಯಾಷ್ ಬಾಕ್ಸ್‌ನಲ್ಲಿದ್ದ ಹಣ ಹಾಗೂ ಮಳಿಗೆಯಲ್ಲಿದ್ದ ಆಭರಣ ದೋಚಿದ್ದು, ಅವುಗಳ ಮೊತ್ತ ತಿಳಿದುಬಂದಿಲ್ಲ. ಆಭರಣ ಮಳಿಗೆಗೆ ಅಳವಡಿಸಿರುವ ಸಿಸಿ ಕ್ಯಾಮೆರಾದ ವೈರ್‌ನ್ನು ಕತ್ತರಿಸಿ ಆನಂತರ ಕಳ್ಳರು ಅಂಗಡಿಗೆ ನುಗ್ಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  ಪರಿಚಿತರೇ ಕೃತ್ಯ ಎಸಗಿರಬಹುದು ಅಥವಾ ಮೊದಲೇ ಸ್ಥಳಕ್ಕೆ ಭೇಟಿ ನೀಡಿ ಸಂಚು ರೂಪಿಸಿ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.  ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Write A Comment