ಕರ್ನಾಟಕ

ವಿಧಾನ ಪರಿಷತ್‌ನಲ್ಲೂ ಲೋಕಾಯುಕ್ತ ತಿದ್ದುಪಡಿ ವಿಧೇಯಕ ಅಂಗೀಕಾರ

Pinterest LinkedIn Tumblr

tbಬೆಂಗಳೂರು: ಹಲವು ದಿನಗಳ ಚರ್ಚೆಯ ಬಳಿಕ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದ್ದ ಲೋಕಾಯುಕ್ತರ ನೇಮಕ ಮತ್ತು ಪದಚ್ಯುತಿ ತಿದ್ದುಪಡಿ ವಿಧೇಯಕ ಶುಕ್ರವಾರ ವಿಧಾನ ಪರಿಷತ್ ನಲ್ಲೂ ಅಂಗೀಕಾರವಾಗಿದೆ.

ಇಂದು ತಿದ್ದುಪಡಿ ವಿಧೇಯಕವನ್ನು ವಿಧಾನ ಪರಿಷತ್ ನಲ್ಲಿ ಮಂಡಿಸಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು, ಸದ್ಯ ಲೋಕಾಯುಕ್ತರ ಹಾಗೂ ಉಪ ಲೋಕಾಯುಕ್ತರ ನೇಮಕ ಮತ್ತು ಪದಚ್ಯುತಿ ನಿರ್ಣಯಕ್ಕೆ ಮಾತ್ರ ತಿದ್ದುಪಡಿ ತರಲಾಗಿದ್ದು, ಬಿಬಿಎಂಪಿ ಚುನಾವಣೆ ಬಳಿಕ ಸೆಪ್ಟೆಂಬರ್ ನಲ್ಲಿ ವಿಶೇಷ ಅಧಿವೇಶನ ಕರೆದು ಲೋಕಾಯುಕ್ತ ಕಾಯ್ದೆಗೆ ಸಮಗ್ರ ತಿದ್ದುಪಡಿ ತರಲಾಗುವುದು ಎಂದು ತಿಳಿಸಿದರು.

ಮೂರನೇ ಎರಡರಷ್ಟು ಸದಸ್ಯರ ಬಹುಮತದೊಂದಿಗೆ (150 ಸದಸ್ಯರ ಸಮ್ಮತಿ, ವಿಧಾನ ಪರಿಷತ್‍ನ 50 ) ಲೋಕಾಯುಕ್ತ ಮತ್ತು ಉಪಲೋಕಾಯುಕ್ತರ ಪದಚ್ಯುತಿ ನಿರ್ಣಯ ತೆಗೆದುಕೊಳ್ಳಬಹುದು ಎಂಬ ಪರಿಷ್ಕರಣೆಯೊಂದಿಗೆ ನಿನ್ನೆ ವಿಧಾನಸಭೆಯಲ್ಲಿ ವಿಧೇಯಕಕ್ಕೆ ಅಂಗೀಕಾರ ದೊರಕಿತ್ತು.

ನಿರ್ಣಯ ಮಂಡನೆಯಾದರೆ ಲೋಕಾಯುಕ್ತರ ರೆಕ್ಕೆಪುಕ್ಕ ಕಟ್ :

ಈ ತಿದ್ದುಪಡಿ ವಿಧೇಯಕದ ಪ್ರಕಾರ ಒಮ್ಮೆ ಲೋಕಾಯುಕ್ತ ಮತ್ತು ಉಪಲೋಕಾಯುಕ್ತ ಪದಚ್ಯುತಿ ನಿರ್ಣಯ ವಿಧಾನಮಂಡಲದಲ್ಲಿ ಮಂಡನೆಯಾದ ತಕ್ಷಣ ಅವರ ಅಧಿಕಾರ ಮೊಟಕುಗೊಳ್ಳುತ್ತದೆ. ವಿಚಾರಣೆ ಪೂರ್ಣಗೊಳ್ಳುವವರೆಗೆ ಅವರು ಅಧಿಕಾರ ನಡೆಸುವುದಕ್ಕೆ ಸಾಧ್ಯವಿಲ್ಲ. ವಿಧಾನ ಮಂಡಲದಲ್ಲಿ ಮಂಡನೆಯಾದ ನಿರ್ಣಯ ಇತ್ಯರ್ಥಗೊಳ್ಳುವವರೆಗೂ ಅವರ ಎಲ್ಲ ಹಕ್ಕು ಮತ್ತು ಕರ್ತವ್ಯಗಳು ತಡೆಹಿಡಿಯಲ್ಪಡುತ್ತದೆ. ಅಂದರೆ ಲೋಕಾಯುಕ್ತ ವೈ.ಭಾಸ್ಕರ ರಾವ್ ಪದಚ್ಯುತಿ ನಿರ್ಣಯ ಮಂಡನೆಗೆ ಸರ್ಕಾರ ತಕ್ಷಣ ಇನ್ನೊಂದು ಅಧಿವೇಶನ ಕರೆದು ನಿರ್ಣಯ ಮಂಡನೆಯಾದಾಗ ಮಾತ್ರ ಇದು ಸಾಧ್ಯವಾಗುತ್ತದೆ.

Write A Comment