ಕರ್ನಾಟಕ

ಉದ್ಯಮಿಗಳಿಗೆ ಹುಡುಗಿಯರನ್ನು ಒದಗಿಸುತ್ತಿದ್ದ ಮಹಿಳೆ ಜೈಲು ಪಾಲು

Pinterest LinkedIn Tumblr

industrಉದ್ಯಮಿಗಳಿಗೆ ಯುವತಿಯರನ್ನು ಸರಬರಾಜು ಮಾಡಿ ನಂತರ ಬ್ಲಾಕ್ ಮೇಲ್ ಮಾಡುತ್ತಿದ್ದ ಮಹಿಳೆಯೊಬ್ಬಳು ಜೈಲು ಪಾಲಾದ ಘಟನೆ ಮಡಿಕೇರಿಯಲ್ಲಿ ನಡೆದಿದೆ.

ಇಲ್ಲಿನ ಅಲೀಮಾ ಎಂಬ ಮಹಿಳೆ ತಾನು ಪೊಲೀಸ್ ಎಂದು ಹೇಳಿಕೊಂಡು ನಿವೇಶನ ಮತ್ತು ಕಾಫಿ ತೋಟದ ವ್ಯವಹಾರದ ಹೆಸರಲ್ಲಿ ಕೇರಳದ ಉದ್ಯಮಿಗಳನ್ನು ಹಾಲೇರಿ ಎಂಬ ಹೋಮ್ ಸ್ಟೇಗೆ ಕರೆಸುತ್ತಿದ್ದಳು. ಅಲ್ಲದೇ ರಾತ್ರಿ ಅಲ್ಲಿಯೇ ಉಳಿಯುವ ಉದ್ಯಮಿಗಳಿಗೆ ಹುಡುಗಿಯರನ್ನು ಒದಗಿಸುತ್ತಿದ್ದಳು. ಈ ಉದ್ಯಮಿಗಳು ತಮ್ಮ ರಾಸಲೀಲೆಯಲ್ಲಿ ತೊಡಗಿರುವ ಸಮಯದಲ್ಲಿ ಆ ಮಹಿಳೆ ನಕಲಿ ಪೊಲೀಸರನ್ನು ಕಳುಹಿಸಿ ಅವರಿಂದ ಹಣ ದೋಚುತ್ತಿದ್ದಳು ಎನ್ನಲಾಗಿದೆ.

ಈ ಕುರಿತು ಖಚಿತ ಮಾಹಿತಿ ಪಡೆದ ಅಪರಾಧ ಪತ್ತೆ ದಳದ ಪೊಲೀಸರು ಆಕೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Write A Comment